ಸಿಂಹ ರಾಶಿಯವರಿಗೆ ಬಲು ವಿಶೇಷ ಇಂದಿನ ದಿನ : ನಿಮ್ಮ ಜಾತಕ ಫಲ ಹೇಗಿದೆ ನೋಡಿ ನಿತ್ಯ ಭವಿಷ್ಯದಲ್ಲಿ

Horoscope April 30: ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಗುರುವಾರ ರಾಹುಕಾಲವು ಸಾಮಾನ್ಯವಾಗಿ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರುತ್ತದೆ. ಏಪ್ರಿಲ್ 30 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ:

ಇಂದು ಕೆಲವು ಸವಾಲುಗಳು ಎದುರಾಗಬಹುದು. ಮಾಡುವ ಕೆಲಸ ಕಾರ್ಯಗಳಿಗೆ ಎದುರಾಗುವ ಅಡೆತಡೆಗಳಿಂದ ಮನಸ್ಸಿಗೆ ನೋವು ಉಂಟಾಗಬಹುದು. ತಾಳ್ಮೆಯಿಂದ ಇದ್ದರೆ ಸಮಸ್ಯೆಗೆ ಪರಿಹಾರವೂ ಸಿಗುವುದು.

Horoscope April 30

ವೃಷಭ ರಾಶಿ:

ಮನಸ್ಸಿಗೆ ಕಿರಿ ಕಿರಿ ಉಂಟಾಗಬಹುದು. ಈ ಸಂದರ್ಭದಲ್ಲಿ ಶಾಂತವಾಗಿದ್ದರೆ ಸಮಸ್ಯೆಗಳು ಒಂದೊಂದಾಗಿಯೇ ನಿವಾರಣೆಯಾಗುವುದು. ತಾಳ್ಮೆಯಿಂದ ಇದ್ದರೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದು.

ಮಿಥುನ ರಾಶಿ:

ಏಕಕಾಲದಲ್ಲಿ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಡಿ. ಇದು ನಿಮ್ಮನ್ನು ಗೊಂದಲಕ್ಕೆ ದೂಡಬಹುದು. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕರ್ಕಾಟಕ ರಾಶಿ:

ಕೆಲಸದಲ್ಲಿನ ಹಳೆಯ ವಿವಾದಗಳು ಬಗೆಹರಿಯಬಹುದು. ಆರ್ಥಿಕ ಪರಿಸ್ಥಿತಿಗಳು ಸಾಮಾನ್ಯವಾಗಿಯೇ ಇರುತ್ತವೆ. ಮನಸ್ಸಿಗೆ ವಿಶ್ರಾಂತಿ ನೀಡಬೇಕಾಗಿದೆ. ಸ್ವಲ್ಪ ಪ್ರಮಾಣದ ಅಜಾಗರೂಕತೆಯೂ ನಿಮ್ಮನ್ನು ತೊಂದರೆಗೆ ದೂಡಬಹುದು.

ಸಿಂಹ ರಾಶಿ:

ಸವಾಲಿನ ಸಂದರ್ಭಗಳನ್ನು ಆತ್ಮವಿಶ್ವಾಸದಿಂದ ಎದುರಿಸುವಿರಿ. ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. ಆರೋಗ್ಯ ಸಾಮಾನ್ಯವಾಗಿಯೇ ಇರುವುದು.

ಕನ್ಯಾ ರಾಶಿ:

ಕೆಲಸದಲ್ಲಿ ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿ ಸಮತೋಲನದಲ್ಲಿರುತ್ತದೆ. ಅತಿಯಾಗಿ ಮಾಡುವ ಯೋಚನೆಯೇ ನಿಮ್ಮ ಪ್ರೇಮ ಜೀವನಕ್ಕೆ ಸಮಸ್ಯೆ ಉಂಟು ಮಾಡಬಹುದು. ಆರೋಗ್ಯ ಸಮಸ್ಯೆಗಳು ಒತ್ತಡವನ್ನುಂಟುಮಾಡಬಹುದು.

ತುಲಾ ರಾಶಿ:

ಹೊಸ ಆಲೋಚನೆಯೊಂದಿಗೆ ಹೊಸ ಅವಕಾಶಗಳು ಒಲಿದು ಬರಬಹುದು. ಆದರೆ ನಿರ್ಧಾರ ತೆಗೆದುಕೊಳ್ಳುವಲ್ಲಿ ನಿಮಗೆ ಗೊಂದಲ ಉಂಟು ಮಾಡಬಹುದು. ಹಣಕಾಸಿನ ವಿಷಯಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ.

ವೃಶ್ಚಿಕ ರಾಶಿ:

ಸಮಸ್ಯೆಗೆ ಸೂಕ್ತವಾದ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಕೆಲಸದ ಕ್ಷೇತ್ರದಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾಗಬಹುದು. ಆರೋಗ್ಯವು ಉತ್ತಮವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಯ ಅನುಕೂಲಕರವಾಗಿದೆ.

ಧನು ರಾಶಿ:

ಆತ್ಮವಿಶ್ವಾಸ ಹೆಚ್ಚಾಗುವುದು. ನೀವು ನಿರ್ಧಾರ ತೆಗೆದುಕೊಳ್ಳುವಾಗ ಎಷ್ಟು ಸಾಧ್ಯವೋ ಅಷ್ಟು ಎಚ್ಚರಿಕೆಯಿಂದ ಇರಬೇಕು. ಖರ್ಚುಗಳು ಹೆಚ್ಚಾಗಬಹುದು ಜೊತೆಗೆ ಆರ್ಥಿಕ ಲಾಭಗಳೂ ಆಗುವುದು. ಅವಿವಾಹಿತರಿಗೆ ಮದುವೆಯ ಪ್ರಸ್ತಾಪ ಬರಬಹುದು.

ಮಕರ ರಾಶಿ:

ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾಗುವಿರಿ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ.

ಕುಂಭ ರಾಶಿ:

ಸಮಸ್ಯೆಗೆ ಹೊಸ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಕೆಲಸದಲ್ಲಿ ನಿಮ್ಮ ಆಲೋಚನೆಗಳಿಗೆ ಪ್ರಶಂಸೆ ಸಿಗುವುದು. ಮನೆಗೆ ಹೊಸ ಅತಿಥಿ ಬರಬಹುದು.

ಮೀನ ರಾಶಿ:

ಕೆಲಸ ಕಾರ್ಯಗಳಲ್ಲಿ ಕೆಲವೊಮ್ಮೆ ಗೊಂದಲ ಉಂಟಾಗಬಹುದು. ಇದರ ಪರಿಣಾಮ ನೀವು ತೆಗೆದುಕೊಳ್ಳಬೇಕಾದ ನಿರ್ಧಾರದ ಮೇಲೂ ಉಂಟಾಗಬಹುದು. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+