KSRTC Bus Strike: ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಬಾರಿ ಸಾರಿಗೆ ನೌಕರರ ಮುಷ್ಕರ ನಡೆದಾಗ ಒಂದಷ್ಟು ಆಶ್ವಾಸನೆ ನೀಡಿದ್ದ ಸರ್ಕಾರ ಬುಧವಾರ (ಏ. 29) ನೌಕರರ ಸಂಘಟನೆಗಳ ಜೊತೆಗೆ ಮತ್ತೊಮ್ಮೆ ಸಭೆ ನಡೆಸಿತು. ಈ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತಿರ್ಮಾನಿಸಲಾಗಿದೆ. ಮುಂದಿನ ತಿಂಗಳು ಮೇ 20ರಂದು ರಾಜ್ಯವ್ಯಾಪಿ ಮುಷ್ಕರ ಜರುಗಲಿದೆ.

ರಾಜ್ಯ ಸರ್ಕಾರ ಇಂದು ಸಾರಿಗೆ ನೌಕರರ ಮೊದಲ ಕಂತಿನ ಹಿಂಬಾಕಿ ವೇತನ ಬಿಡುಗಡೆಗೆ ಅನುಮೋದನೆ ನೀಡಿ ಆದೇಶಿಸಿತು. ಅದರ ಬೆನ್ನಲ್ಲೆ ಸಂಧಾನಸಭೆಯ ಮಾತುಕತೆ ವಿಫಲವಾಯಿತು. ಶೇ.7ರಷ್ಟು ವೇತನ ಹೆಚ್ಚಳ ಪ್ರಸ್ತಾವನೆ ಮುಂದಿಟ್ಟರು. ಅದನ್ನು ನೌಕರರ ಸಂಘಟನೆ ಮುಖ್ಯಸ್ಥರು ಒಪ್ಪದ ಹಿನ್ನೆಲೆ ಸಭೆಯಲ್ಲಿ ಸೂಕ್ತ ನೀರ್ಣಯಕ್ಕೆ ಬರಲಾಗಲಿಲ್ಲ.

Karnataka Transport

ನೌಕರರ ಬೇಡಿಕೆಗಳೇನು?

ನೌಕರರ ಮೂಲ ವೇತನ ಶೇ.25ರಷ್ಟು ಹೆಚ್ಚಳ, ಶೇ.31ರಷ್ಟು ತುಟ್ಟಿಭತ್ಯೆ ಮೂಲ ವೇತನದಲ್ಲಿ ವಿಲೀನ ಮಾಡುವುದು. ವೇತನ ಶ್ರೇಣಿ ರಚಿಸಿ ಬಾಕಿ ಹಣ ಪಾವತಿಸುವುದು, 26 ತಿಂಗಳ ಬಾಕಿ ಹಿಂಬಾಕಿ ಹಣ ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಎಲ್ಲ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರ ಮೇ 20ರಂದು ಪ್ರತಿಭಟಿಸಲಿದ್ದಾರೆ ಎಂದು ಸಮಿತಿ ಮುಖಸ್ಥರು ಘೋಷಿಸಿದರು.

NWKRTC: ಧಾರವಾಡ-ಬೀದರ್ ನಾನ್ ಎಸಿ ಬಸ್‌ ಸೇವೆ, ಹಾವೇರಿ-ಪಂಡರಾಪುರಕ್ಕೆ ವೇಗದೂತ ಬಸ್ ಸಂಚಾರ, ವೇಳಾಪಟ್ಟಿ
NWKRTC: ಧಾರವಾಡ-ಬೀದರ್ ನಾನ್ ಎಸಿ ಬಸ್‌ ಸೇವೆ, ಹಾವೇರಿ-ಪಂಡರಾಪುರಕ್ಕೆ ವೇಗದೂತ ಬಸ್ ಸಂಚಾರ, ವೇಳಾಪಟ್ಟಿ

ಕೋವಿಡ್ ಸಮಯದಲ್ಲಿ ಸಾವಿಗೀಡಾದ ನೌಕರರಿಗೆ ಇನ್ನೂವರೆಗೂ ಪರಿಹಾರ ನೀಡಿಲ್ಲ. ನಿವೃತ್ತ ನೌಕರರಿಗೂ ಅನ್ಯಾಯವಾಗಿದೆ. ಮುಷ್ಕರ ಮಾಡಿದಾಗಲೆಲ್ಲ, ನೌಕರರ ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಬೇಡಿಕೆ ಈಡೇರಿಸದೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಸರ್ಕಾರ ನೌಕರರನ್ನು ನಿರ್ಲಕ್ಷಿಸುತ್ತಿದೆ ಎಂದು ಅವರು ಆರೋಪಿಸಿದರು.

2023ರ ಮಾರ್ಚ್‌ನಿಂದ ಜಾರಿಗೆ ಬರುವಂತೆ ವೇತನವನ್ನು ಶೇ.15ರಷ್ಟು ಏರಿಕೆ ಮಾಡಿ ಅನುಮೋದಿಸಿತು. ಆದರೆ ವೇತನ ಹೆಚ್ಚಳ ಹಿಂಬಾಕಿಯನ್ನು ಹತ್ತಾರು ತಿಂಗಳುಗಟ್ಟಲೇ ಬಾಕಿ ಉಳಿಸಿಕೊಂಡು ಬರಲಾಯಿತು. ಇದರೊಂದಿಗೆ ಇನ್ನಿತರ ಬೇಡಿಕೆಗಳು ಬೇಡಿಕೆಯಾಗಿಯೇ ಉಳಿದ ಪರಿಣಾಮ ನೌಕರರಿಗೆ ಮುಷ್ಕರ ಅನಿವಾರ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+