ಕರ್ನಾಟಕದ ಹೆಮ್ಮೆ ಕೋಲಾರಕ್ಕೆ ನಂದಿನಿ ಎಂಬ ಮತ್ತೊಂದು ಕೋಡು!

ಕರ್ನಾಟಕದ ಜನತೆ ಸಂಭ್ರಮಿಸುವುದಕ್ಕೆ ಈ ಬಾರಿಯ ಲೋಕಸೇವಾ ಆಯೋಗದ ಫಲಿತಾಂಶ ತುಂಬ ಒಳ್ಳೆ ಕಾರಣ. ಕನ್ನಡದಲ್ಲೇ ಪರೀಕ್ಷೆ ಬರೆದು, ಅತ್ಯುನ್ನತ ಅಂಕ ಪಡೆಯಬಹುದು ಎಂಬ ಆತ್ಮವಿಶ್ವಾಸ ತಂದುಕೊಟ್ಟಿದ್ದಾರೆ ನಂದಿನಿ.

ವರ್ಷಗಳಿಂದ ಇದ್ದ ಕೊರತೆಯನ್ನು ಕೋಲಾರದ ನಂದಿನಿ ಅಂಥವರು ನಿವಾರಿಸಿದ್ದಾರೆ. ಇನ್ನು ಮುಂದೆ ಕೇಂದ್ರ ಸರಕಾರದ ಇತರ ಪರೀಕ್ಷೆಗಳಿಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯತ್ನಿಸಬಹುದು ಅನ್ನಿಸುತ್ತಿದೆ.[ಜಿಡಿಪಿ ಕುಸಿತ, ವಿಪಕ್ಷಗಳಿಂದ ಕೇಂದ್ರ ಸರಕಾರಕ್ಕೆ ತರಾಟೆ]

ನಂದಿನಿ ಅತ್ಯುನ್ನತ ಅಂಕ ಪಡೆದಿದ್ದಾರೆ ಅನ್ನೋದಾದರೆ, ಇನ್ನೂ ಒಂದಷ್ಟು ಮಂದಿ ಅತ್ಯುತ್ತಮ ಶ್ರೇಣಿಯಲ್ಲೇ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕಕ್ಕೆ ಕನ್ನಡ ಗೊತ್ತಿರುವ, ಕನ್ನಡದ ಜತೆಗೆ ಭಾವನಾತ್ಮಕ ನಂಟಿರುವವರು ಐಎ ಎಸ್ ಅಧಿಕಾರಿಗಳಾಗಿ ಬರಬೇಕು.

ಇನ್ನು ಬೆಂಗಳೂರಿನಲ್ಲಿ ಎಳನೀರು, ಕಬ್ಬಿನಹಾಲು ಕುಡಿಯಿರಿ ಎಂಬ ವಿಶಿಷ್ಟ ಪ್ರತಿಭಟನೆ ನಡೆದಿದೆ. ದೆಹಲಿಯಲ್ಲಿ ನಡೆದಿರುವ ಪೊಲೀಸ್ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸ್ ನ ಪತ್ನಿಯ ಕಣ್ಣೀರು ಹಾಗೂ ಪಕ್ಕದಲ್ಲಿರುವ ಅಮಾಯಕ ಮಗುವಿನ ಮುಖ ಮರೆಯಲು ಸಾಧ್ಯವಿಲ್ಲದಂಥ ದೃಶ್ಯವಿದು.[ಕನ್ನಡ ಮಾಧ್ಯಮದಲ್ಲಿ ಓದಿದ ಕೆಆರ್ ನಂದಿನಿ ಐಎಎಸ್ ಮುಕುಟ ಮಣಿ]

ಮೊರಾದಾಬಾದ್ ನಲ್ಲಿ ಪರ್ವತಾರೋಹಿ ರವಿ ಕುಮಾರ್ ಅವರಿಗೆ ಶ್ರದ್ಧಾಂಜಲಿ ಇನ್ನೂ ಇನ್ನಷ್ಟು ಸುದ್ದಿ-ಚಿತ್ರಗಳು ನಿಮ್ಮೆದುರಿಗೆ ಇವೆ. ಇವುಗಳ ಬಗ್ಗೆ ನಿಮಗೆ ಏನನ್ನಿಸಿತು ಎಂಬುದರ ಬಗ್ಗೆ ಕನಿಷ್ಠ ಎರಡು ಸಾಲು ಬರೆಯಿರಿ.

ಎಳನೀರು, ಕಬ್ಬಿನ ಹಾಲು ಕುಡಿಯಿರಿ, ಸಾಫ್ಟ್ ಡ್ರಿಂಕ್ಸ್ ಬಿಟ್ಟಾಕಿ

ಎಳನೀರು, ಕಬ್ಬಿನ ಹಾಲು ಕುಡಿಯಿರಿ, ಸಾಫ್ಟ್ ಡ್ರಿಂಕ್ಸ್ ಬಿಟ್ಟಾಕಿ

ಬೆಂಗಳೂರಿನಲ್ಲಿ ಗುರುವಾರ ಕನ್ನಡಪರ ಹೋರಾಟಗಾರರು ವಿಶಿಷ್ಟ ಹೋರಾಟ ಮಾಡಿದರು. ಸಾಫ್ಟ್ ಡ್ರಿಂಕ್ಸ್ ವಿರುದ್ಧ ಪ್ರತಿಭಟನೆ ನಡೆಸಿ, ಕಬ್ಬಿನಹಾಲು ಹಾಗೂ ಎಳನೀರು ಬಳಸಿ ಎಂದರು. ಇದರಿಂದ ಆರೋಗ್ಯಕ್ಕೂ ರೈತಾಪಿ ವರ್ಗಕ್ಕೂ ಅನುಕೂಲ ಎಂದು ಪ್ರಚಾರ ಮಾಡಿದರು.

ಕನ್ನಡತಿ ನಂದಿನಿಗೆ ಅಭಿನಂದನೆ

ಕನ್ನಡತಿ ನಂದಿನಿಗೆ ಅಭಿನಂದನೆ

2016-2017ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕನ್ನಡತಿ-ಕೋಲಾರದ ನಂದಿನಿ ಅವರನ್ನು ಎಂಸಿಎಫ್ ನ ಆಯುಕ್ತೆ ಸೋನಲ್ ಗೋಯೆಲ್ ಫರೀದಾಬಾದ್ ನಲ್ಲಿ ಅಭಿನಂದಿಸಿದ ಕ್ಷಣವಿದು.

ಪೋಷಕರ ಜತೆಗೆ ಸಂಭ್ರಮ

ಪೋಷಕರ ಜತೆಗೆ ಸಂಭ್ರಮ

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಅಲಹಾಬಾದ್ ನ ಸೌಮ್ಯಾ ಪಾಂಡೆ ತನ್ನ ಪೋಷಕರ ಜತೆಗೆ ಸಂಭ್ರಮಪಟ್ಟಿದ್ದು ಹೀಗೆ.

ಶಿಖರ ಏರಿ, ಹಿಂತಿರುಗದ ರವಿ ಕುಮಾರ್

ಶಿಖರ ಏರಿ, ಹಿಂತಿರುಗದ ರವಿ ಕುಮಾರ್

ಮೌಂಟ್ ಎವರೆಸ್ಟ್ ಏರಿ ಹಿಂತಿರುಗುವಾಗ ಮೃತಪಟ್ಟ್ ಪರ್ವತಾರೋಹಿ ರವಿ ಕುಮಾರ್ ಅವರಿಗೆ ಮೊರಾದಾಬಾದ್ ನ ಜನರು ಶ್ರದ್ಧಾಂಜಲಿ ಸಲ್ಲಿಸಿದರು.

ಗೌರವ ಅಪ್ಪುಗೆ

ಗೌರವ ಅಪ್ಪುಗೆ

ನವದೆಹಲಿಯಲ್ಲಿ ಗುರುವಾರ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಕಾನ್ ಸ್ಟೇಬಲ್ ಗೋಧ್ ರಾಜ್ ಸಿಂಗ್ ಮೀನಾ ಅವರಿಗೆ ಪೊಲೀಸ್ ಪದಕ ನೀಡಿ ಅಪ್ಪಿಕೊಂಡರು.

ಹುತಾತ್ಮನ ಪತ್ನಿಯ ಕಣ್ಣೀರು, ಅಮಾಯಕ ಮಗು

ಹುತಾತ್ಮನ ಪತ್ನಿಯ ಕಣ್ಣೀರು, ಅಮಾಯಕ ಮಗು

ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮೃತಪಟ್ಟ ರಾಜೇಶ್ ಸರನ್ ರ ಪತ್ನಿ ನವದೆಹಲಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದ ವೇಳೆ ಕ್ಯಾಮೆರಾ ಕಣ್ಣಿಗೆ ಕಂಡುಬಂದಿದ್ದು ಹೀಗೆ.

ಮೂರು ವರ್ಷ, ಎಷ್ಟೊಂದು ಕನಸು, ಎಷ್ಟಾಯ್ತು ನನಸು

ಮೂರು ವರ್ಷ, ಎಷ್ಟೊಂದು ಕನಸು, ಎಷ್ಟಾಯ್ತು ನನಸು

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮೂರು ವರ್ಷಗಳನ್ನು ಪೂರೈಸಿದ ವೇಳೆ ಸಾಧನೆಗಳ ಬಗ್ಗೆ ಹೇಳಿಕೊಳ್ಳುವಾಗ ಕಂಡುಬಂದ ವಿತ್ತ ಸಚಿವ ಅರುಣ್ ಜೇಟ್ಲಿ ಭಂಗಿಯಿದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+