ಅವರ ಸಂಭ್ರಮಕ್ಕೆ ಕಾರಣವಿದೆ, ಆದರೆ ಇವರಿಗೇನು ರೋಗ?

Posted By:
Subscribe to Oneindia Kannada

ಜೂನ್ ಹದಿನೆಂಟರ ಭಾನುವಾರ ಬೆಳಗ್ಗೆ ಇದ್ದ ರಣೋತ್ಸಾಹ ರಾತ್ರಿ ಹೊತ್ತಿಗೆ ಕರಗಿ ಭಾರತೀಯ ಮುಖದ ಮೇಲೊಂದು ಸಿಟ್ಟು ಇಣುಕುತ್ತಿತ್ತು. ಬೇರೆ ಯಾವ ತಂಡದೊಂದಿಗೆ ಕ್ರಿಕೆಟ್ ಆಡಿ, ಸೋತರೂ ಅದೂ ನಿನ್ನೆ ಸೋತಷ್ಟು ಹೀನಾಯವಾಗಿ ಸೋತರೂ ಆ ಪರಿಯ ಬೇಸರ, ದುಃಖ, ಅವಮಾನ ಅಂತ ಯಾವ ಭಾರತೀಯ ತೋರಿಸಿಕೊಳ್ಳುತ್ತಿರಲಿಲ್ಲ.

ಆದರೆ, ಪಾಕಿಸ್ತಾನದ ಎದುರು ಕ್ರಿಕೆಟ್ ನಲ್ಲಿ ಹೀಗೆ ಸೋತಿದ್ದು ಆಳವಾದ ಗಾಯವೊಂದನ್ನು ಮಾಡಿದೆ. ಇದಕ್ಕೂ ಬೇಸರ ಹಾಗೂ ಅಸಹ್ಯ ಮೂಡಿಸುವಂತೆ ಕಾಶ್ಮೀರದಲ್ಲಿ ಭಾರತದ ಸೋಲಿನ ಸಂಭ್ರಮಾಚರಣೆ ಮಾಡಿದ್ದಾರೆ. ಎಷ್ಟೆಲ್ಲ ಅನುಕೂಲ ಮಾಡಿಕೊಟ್ಟು, ಎಷ್ಟು ಚೆನ್ನಾಗಿ ನೋಡಿಕೊಂಡರೂ ಭಾರತದ ಬಗ್ಗೆ ಕಾಶ್ಮೀರದಲ್ಲಿ ಏಕೆ ಇಂಥ ಧೋರಣೆ ಎನಿಸುವುದಿಲ್ಲವೆ?

ಆದರೆ, ನಿನ್ನೆಯ ನೋವನ್ನು ನಿಜಕ್ಕೂ ಕರಗುವಂತೆ ಮಾಡಿದ್ದು ಭಾರತದ ಹಾಕಿ ತಂಡ. ಅದೇ ಇಂಗ್ಲೆಂಡ್ ನಲ್ಲಿ ನಡೆದ ಹಾಕಿ ಪಂದ್ಯಾವಳಿಯಲ್ಲಿ ಪಾಕಿಸ್ತಾನಕ್ಕೆ ಸರಿಯಾಗಿ ಮಣ್ಣು ಮುಕ್ಕಿಸಲಾಗಿದೆ. ಕ್ರೀಡೆ ಅಂದರೆ ಸೋಲು-ಗೆಲುವು ಸಹಜ ಇರಬಹುದು. ಆದರೆ ಭಾರತದ ನಾಶವನ್ನು ಬಯಸುವ ದೇಶದೊಂದಿಗಿನ ಆಟವೂ ಯುದ್ಧದಂತೆ ಬದಲಾಗಿ ಬಿಡುತ್ತದೆ

ಇಲ್ಲಿ ಕೆಲವು ಫೋಟೋಗಳಿವೆ. ಆಟ, ಆಟದ ಹೊರತಾಗಿ ರಕ್ತ ಕುದ್ದು ಹೋಗುವಂತೆ ಮಾಡುವಂಥವು. ಅಂದಹಾಗೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಓಪನ್ ಬ್ಯಾಡ್ಮಿಂಟನ್ ಪದ್ಯಾವಳಿಯಲ್ಲಿ ಶ್ರೀಕಾಂತ್ ಕಿದಾಂಬಿ ಚಾಂಪಿಯನ್ ಆಗಿದ್ದಾರೆ.

ಪಾಕ್ ವಿರುದ್ಧ ಪಾರಮ್ಯ

ಪಾಕ್ ವಿರುದ್ಧ ಪಾರಮ್ಯ

ಇಂಗ್ಲೆಂಡ್ ನಲ್ಲಿ ಭಾನುವಾರ ನಡೆದ ಹಾಕಿ ಚಾಂಪಿಯನ್ ಷಿಪ್ ನಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿಯಿತು. ಆ ಸಂಭ್ರಮದಲ್ಲಿ ಇರುವ ಭಾರತದ ಹಾಕಿ ಆಟಗಾರ.

ಗೆಲುವಿನ ನಗೆ

ಗೆಲುವಿನ ನಗೆ

ಇಂಡೋನೇಷ್ಯಾದ ಜಕಾರ್ತದಲ್ಲಿ ಭಾನುವಾರ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಶ್ರೀಕಾಂತ್ ಕಿದಾಂಬಿ ಜಪಾನ್ ನ ಕಜುಮಾಸ ಸಕಾಯಿ ಅವರನ್ನು ಪುರುಷರ ಸಿಂಗಲ್ಸ್ ನಲ್ಲಿ ಸೋಲಿಸಿದ ನಂತರ ಹೆಮ್ಮೆಯಿಂದ ಪದಕ ತೋರಿಸುತ್ತಿರುವ ಚಿತ್ರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದದ್ದು ಹೀಗೆ.

ಭಾರತದ ಕಿಡಾಂಬಿ ಶ್ರೀಕಾಂತ್ ಮುಡಿಗೆ ಇಂಡೋನೇಷಿಯನ್ ಪ್ರಶಸ್ತಿ

ತಲೆ ತಗ್ಗಿಸಿ ನಡೆದ ವಿರಾಟ್ ಕೊಹ್ಲಿ

ತಲೆ ತಗ್ಗಿಸಿ ನಡೆದ ವಿರಾಟ್ ಕೊಹ್ಲಿ

ಲಂಡನ್ ನಲ್ಲಿ ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ಸ್ ನಲ್ಲಿ ಪಾಕಿಸ್ತಾನ ವಿರುದ್ಧ ಐದು ರನ್ ಗೆ ಔಟಾದ ಭಾರತ ಕ್ರಿಕೆಟ್ ತಂಡದ ನಾಯಕ ತಲೆ ತಗ್ಗಿಸಿ ಪೆವಿಲಿಯನ್ ಕಡೆ ನಡೆದರು.

ಪಾಕಿಸ್ತಾನ ವಿರುದ್ಧ ಹೀನಾಯ ಸೋಲು: ಭಾರತ ಮಾಡಿದ 5 ತಪ್ಪುಗಳು

ಭಾರತದ ಸೋಲಿಗೆ ಕಾಶ್ಮೀರದಲ್ಲಿ ಸಂಭ್ರಮ

ಭಾರತದ ಸೋಲಿಗೆ ಕಾಶ್ಮೀರದಲ್ಲಿ ಸಂಭ್ರಮ

ಪಾಕಿಸ್ತಾನ ವಿರುದ್ಧ ಲಂಡನ್ ನಲ್ಲಿ ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಾಗ ಸಂಭ್ರಮಿಸಿದ ಕಾಶ್ಮೀರಿ ಯುವಕರು.

ದೊಡ್ಡ ತೆರೆ ಮೇಲೆ ಕ್ರಿಕೆಟ್ ಪಂದ್ಯ

ದೊಡ್ಡ ತೆರೆ ಮೇಲೆ ಕ್ರಿಕೆಟ್ ಪಂದ್ಯ

ಲಂಡನ್ ನಲ್ಲಿ ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ಸ್ ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ನವ ದೆಹಲಿಯ ನ್ಯಾಷನಲ್ ಕ್ರೀಡಾಂಗಣದಲ್ಲಿ ಅಲವಡಿಸಿದ್ದ ದೊಡ್ಡ ತೆರೆಯ ಮೇಲೆ ವಿಕ್ಷಿಸುತ್ತಿದ್ದ ಅಭಿಮಾನಿಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಸೋತ ಪಂದ್ಯದಲ್ಲೂ ದಾಖಲೆ ಬರೆದ ಯುವರಾಜ್ ಸಿಂಗ್

ಲಾಹೋರ್ ಹುಡುಗರ ಸಂಭ್ರಮ

ಲಾಹೋರ್ ಹುಡುಗರ ಸಂಭ್ರಮ

ಲಂಡನ್ ನಲ್ಲಿ ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ಸ್ ಪಂದ್ಯವನ್ನು ಪಾಕಿಸ್ತಾನದ ಲಾಹೋರ್ ನಲ್ಲಿ ದೊಡ್ಡ ಪರದೆ ಮೇಲೆ ನೋಡುತ್ತಿದ್ದ ಸಣ್ಣ ವಯಸ್ಸಿನ ಹುಡೂಗರ ಸಂಭ್ರಮ.

ಟ್ವಿಟ್ಟರಲ್ಲಿ ಕ್ರಿಕೆಟ್ ಹುಚ್ಚು : ಭಾರತ-ಪಾಕ್ ಪಂದ್ಯ ಅಚ್ಚು ಮೆಚ್ಚು!

ಟಿವಿ ಸೆಟ್ ಒಡೆದ ಅಭಿಮಾನಿಗಳು

ಟಿವಿ ಸೆಟ್ ಒಡೆದ ಅಭಿಮಾನಿಗಳು

ಚಾಂಪಿಯನ್ಸ್ ಟ್ರೋಫಿಯ ಫೈನಲ್ಸ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ ತಂಡ ಸೋತ ನಂತರ ಅಹ್ಮದಾಬಾದ್ ನ ಅಭಿಮಾನಿಗಳು ಆಕ್ರೋಶದಲ್ಲಿ ಟಿವಿ ಸೆಟ್ ಒಡೆದು ಹಾಕಿದರು.

ಭಾರತ ಸೋತ ನಂತರ

ಭಾರತ ಸೋತ ನಂತರ

ಚಾಂಪಿಯನ್ಸ್ ಟ್ರೋಫಿಯ ಫೈನಲ್ಸ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋತ ನಂತರ ಲಂಡನ್ ನ ಓವಲ್ ಮೈದಾನದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತಿತರರು ಕಂಡುಬಂದಿದ್ದು ಹೀಗೆ.

ಕೊಹ್ಲಿ ಮಾತುಗಳನ್ನು ಮೆಚ್ಚಿಕೊಂಡ ಪಾಕಿಸ್ತಾನ ಜನತೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India lost to Pakistan in Champions Trophy cricket in England on Sunday. Here is the photo feature through PTI photos.
Please Wait while comments are loading...