ಮಹಿಳೆಯರ ರಹಸ್ಯ ಬಯಲು ಮಾಡುವ ಇದೆಂಥ ವಿಕ್ಟೋರಿಯಾ ಸೀಕ್ರೆಟ್!

Posted By:
Subscribe to Oneindia Kannada

ಮಹಿಳೆಯರ ಒಳ ಉಡುಪು ಫ್ಯಾಷನ್ ಗೆ ಹೆಸರಾದ ವಿಕ್ಟೋರಿಯಾ ಸೀಕ್ರೆಟ್ ನಿಂದ ಚೀನಾದ ಶಾಂಘೈನಲ್ಲಿ ಫ್ಯಾಷನ್ ಷೋ ನಡೆದಿದೆ. ಒಂದಿಷ್ಟು ರಹಸ್ಯವನ್ನು ಉಳಿಯದಂತೆ ಮಾಡುವ ಈ ದಿರಿಸುಗಳನ್ನು ನೋಡುತ್ತಿದ್ದರೆ ಇದೆಂಥ ಸೀಕ್ರೆಟ್ ಅಂತ ಪ್ರಶ್ನೆ ಬಾರದಿದ್ದರೆ ಹೇಳಿ. ಆದರೂ ಹೆಣ್ಣುಮಕ್ಕಳು ಇಂಥ ಒಳ ಉಡುಪು ಧರಿಸಿ, ತಮ್ಮ ಅಂಗಸೌಷ್ಠವದ ಜತೆ ಒಳ ಉಡುಪು ಸಹ ಪ್ರದರ್ಶಿಸಿದ್ದಾರೆ.

ಬೆಂಗಳೂರು: ಕೆಂಬಣ್ಣದ ಉಡುಗೆಯಲ್ಲಿ ಶ್ರೀದೇವಿ ಕ್ಯಾಟ್ ವಾಕ್

ಇನ್ನು 'ಅತಿಲೋಕ ಸುಂದರಿ', ನಟಿ ಶ್ರೀದೇವಿ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜತೆಗೆ ಮಗಳು ಜಾಹ್ನವಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ಇದ್ದಾರೆ. ಮಗಳ ಸಿನಿಮಾ ಇನ್ನೇನು ಬಿಡುಗಡೆಯಾಗಲಿದೆ. ಆದರೂ ಶ್ರೀದೇವಿಯ ನಟನಾ ಜೀವನಕ್ಕೆ ಇರುವ ಬೇಡಿಕೆಗೆ ಒಂದಿಷ್ಟು ಸಹ ಕುಂದು ಬಂದಿಲ್ಲ.

ಉಡುಪಿಯವರೆಗೆ ಹೋಗಿದ್ದ ಸಿದ್ದರಾಮಯ್ಯನವರು ಕೃಷ್ಣ ಮಠಕ್ಕೆ ಹೋಗಲಿಲ್ಲ, ಪೇಜಾವರ ಶ್ರೀಗಳ ಹಲವು ಬಾರಿಯ ಆಹ್ವಾನಕ್ಕೂ ಮನ್ನಣೆ ಸಿಕ್ಕಿಲ್ಲ ಎಂಬುದು ಸುದ್ದಿ. ಇದಕ್ಕೆ ಬುದ್ಧಿಜೀವಿಗಳೇ ಕಾರಣ ಅಂತಲೂ ಪೇಜಾವರ ಶ್ರೀಗಳು ಹೇಳಿದ್ದಾಯಿತು. ಆದರೆ ಈಗ ನೋಡಿ, ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ತಮ್ಮ ಮಗನ ಜತೆ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ.

ಇನ್ನಷ್ಟು ಚಂದದ ಫೋಟೋ- ಸುದ್ದಿಯನ್ನು ಮುಂದೆ ಓದಿ, ನೋಡಿ.

ಪೇಜಾವರ ಶ್ರೀ ಆಶೀರ್ವಾದ

ಪೇಜಾವರ ಶ್ರೀ ಆಶೀರ್ವಾದ

ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಅವರ ಮಗ ದುಷ್ಯಂತ್ ಸಿಂಗ್ ಸೋಮವಾರ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಪರ್ಯಾಯದಲ್ಲಿರುವ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಈ ವೇಳೆ ಆಶೀರ್ವಾದ ಮಾಡಿದರು.

ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹ

ಮುಂಬೈನಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದ ಚಿತ್ರವಿದು. ಮುಸ್ಲಿಮ್ ಸಮುದಾಯದ ಹನ್ನೆರಡು ಜೋಡಿಗಳು ವಿವಾಹ ಜೀವನಕ್ಕೆ ಕಾಲಿರಿಸಿದರು.

ವಿಕ್ಟೋರಿಯಾ ಸೀಕ್ರೆಟ್ ಫ್ಯಾಷನ್ ಷೋ

ವಿಕ್ಟೋರಿಯಾ ಸೀಕ್ರೆಟ್ ಫ್ಯಾಷನ್ ಷೋ

ಚೀನಾದ ಶಾಂಘೈನಲ್ಲಿ ನಡೆದ ವಿಕ್ಟೋರಿಯಾ ಸೀಕ್ರೆಟ್ ಫ್ಯಾಷನ್ ಷೋನಲ್ಲಿ ರೂಪದರ್ಶಿಯರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದದ್ದು ಹೀಗೆ.

ಗೋವಾದಲ್ಲಿ ಅತಿ ಲೋಕ ಸುಂದರಿ

ಗೋವಾದಲ್ಲಿ ಅತಿ ಲೋಕ ಸುಂದರಿ

ಗೋವಾದ ಪಣಜಿಯಲ್ಲಿ ಆರಂಭವಾದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಜತೆಗೆ ನಟಿ ಶ್ರೀದೇವಿ ಹಾಗೂ ಅವರ ಮಗಳು ಜಾಹ್ನವಿ ಪಾಲ್ಗೊಂಡಿದ್ದರು.

ಪದ್ಮಾವತಿ ವಿರುದ್ಧ ಪ್ರತಿಭಟನೆ

ಪದ್ಮಾವತಿ ವಿರುದ್ಧ ಪ್ರತಿಭಟನೆ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನಿಮಾದ ವಿರುದ್ಧ ಅಖಿಲ ಭಾರತೀಯ ಮರಾಠ ಮಹಾಸಂಘ ಹಾಗೂ ಅಖಿಲ ಭಾರತೀಯ ಕ್ಷತ್ರಿಯ ಸಂಘದ ಸದಸ್ಯೆಯರು ಮುಂಬೈನಲ್ಲಿ ಪ್ರತಿಭಟಿಸಿದರು.

ಅಮ್ಮ, ಮಗ ಹಾಗೂ ಕಾರ್ಯಕಾರಿ ಸಮಿತಿ ಸಭೆ

ಅಮ್ಮ, ಮಗ ಹಾಗೂ ಕಾರ್ಯಕಾರಿ ಸಮಿತಿ ಸಭೆ

ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಭಂಗಿ.

ಚೆಲುವೆಯ ನಗು

ಚೆಲುವೆಯ ನಗು

ಬ್ರೆಜಿಲ್ ನ ಅಲೆಸ್ಸಾಂಡ್ರಾ ಅಂಬೊರಿಸಿಯೊ ಚೀನಾದ ಶಾಂಘೈನಲ್ಲಿ ನಡೆದ ವಿಕ್ಟೋರಿಯಾ ಸೀಕ್ರೆಟ್ ಫ್ಯಾಷನ್ ಷೋನಲ್ಲಿ ಕಂಡಿದ್ದು ಹೀಗೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
PTI photo feature with national and international event like Victoria secret fashion show in Shanghai, protest against Padmavathi movie, Congress working committee meeting etc.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ