ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಲ್ಫಿಯಷ್ಟೇ ತಂಪಾದ ಹಿಮಾಚಲದ ಚೆಲುವೆಯರ ಸೆಲ್ಫಿ!

ದೇಶದಾದ್ಯಂತ ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಇಂಥ ಸನ್ನಿವೇಶದಲ್ಲಿ ಸ್ವಲ್ಪ ತಂಪೆನಿಸುವಂಥ ಹಿಮಾಚಲದ ಚೆಲುವೆಯರ ಸೆಲ್ಫಿ ಫೋಟೋ ಇಲ್ಲಿದೆ. ಜತೆಗೆ ಇನ್ನೊಂದಿಷ್ಟು ಫೋಟೋ-ಮಾಹಿತಿ ನಿಮಗಾಗಿ

|
Google Oneindia Kannada News

ಬಿಸಿಲ ತಾಪಕ್ಕೆ ದೇಶದಾದ್ಯಂತ ಜನ ಬೆವೆತು, ಬಸವಳಿಯುತ್ತಿದ್ದಾರೆ. ದೆಹಲಿಯ ಇಂಡಿಯಾ ಗೇಟ್ ಬಳಿ ಯುವಕರು ಬಿಸಿಲಿನ ತಾಪದಿಂದ ಬೇಸತ್ತು ಕಾರಂಜಿಯ ತಣ್ಣನೆಯ ನೀರಿನಲ್ಲಿ ತಂಪು ಮಾಡಿಕೊಂಡಿದ್ದಾರೆ. ಪಂಜಾಬ್ ನ ಅಮೃತ್ ಸರ್ ನಲ್ಲಿ ಮಹಿಳೆಯರು ಸೀರೆಯಿಂದ ಮುಖ ಮುಚ್ಚಿಕೊಂಡು ಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದಾರೆ.

ಹಿಮಾಚಲ್ ದಿವಸದ ಅಂಗವಾಗಿ ಹಿಮಾಚಲ್ ಪ್ರದೇಶದ ಚೆಲುವೆಯರು ಅಲ್ಲಿನ ಸಾಂಪ್ರದಾಯಿಕ ದಿರಿಸು ತೊಟ್ಟು ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ. ಇನ್ನು ಪಂಜಾಬ್ ನಲ್ಲಿ ಬೈಸಾಖಿ ಹಬ್ಬದ ಎರಡನೇ ದಿನ ಪ್ರದರ್ಶಿಸಿರುವ ಸಾಹಸ ಪ್ರದರ್ಶನ ಅದ್ಭುತವಾಗಿದೆ.[ಕೊನೆಗೂ ಪತ್ತೆಯಾಯ್ತು ಏಲಿಯನ್ಸ್ ಪುರಾವೆ: NASA ಹೊಸ ಡಿಸ್ಕವರಿ]

ಪಶ್ಚಿಮ ಬಂಗಾಲದ ಬಿರ್ಭುಮ್ ನ ದ್ವಾರಕದಲ್ಲಿ ಶಿವ ಗಜನ್ ಹಬ್ಬದ ಅಂಗವಾಗಿ ಭಕ್ತರು ನಾಲಗೆಗೆ ಕಂಬಿಗಳನ್ನು ಚುಚ್ಚಿಕೊಂಡಿದ್ದಾರೆ. ಸೋನಿಯಾ ಗಾಂಧಿಯವರ ಅಳಿಯ, ಪ್ರಿಯಾಂಕಾ ಗಾಂಧಿಯ ಗಂಡ ರಾಬರ್ಟ್ ವಾದ್ರಾ ತಮ್ಮ ಜನ್ಮದಿನವನ್ನು ದೆಹಲಿಯ ಅಂಧ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸಿ, ಆಚರಿಸಿದ್ದಾರೆ. ಒಟ್ಟಾರೆ ದೇಶದ ನಾನಾ ಭಾಗದ ಚಿತ್ರ-ಸುದ್ದಿ ನಿಮ್ಮ ಕಣ್ಣೆದುರು ಇದೆ. ಒಪ್ಪಿಸಿಕೊಳ್ಳಿ

ಹಿಮಾಚಲದ ಚೆಲುವೆಯರು

ಹಿಮಾಚಲದ ಚೆಲುವೆಯರು

ಶಿಮ್ಲಾ ಅಂದರೆ ಪುಳಕಗೊಳ್ಳುವ ಮಂದಿ ನಾವು. ಹಿಮಾಚಲ್ ದಿನದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ದಿರಿಸು ಧರಿಸಿ, ಹಣೆಯಲ್ಲಿ ದೊಡ್ಡ ಬೊಟ್ಟು ಇಟ್ಟುಕೊಂಡ ಹೆಣ್ಣುಮಕ್ಕಳು ಸೆಲ್ಫಿ ತೆಗೆದುಕೊಳ್ಳುವ ಸಂಭ್ರಮದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ.

ಬೈಸಾಖಿ ಹಬ್ಬದ ಮುಂದುವರಿದ ಸಂಭ್ರಮ

ಬೈಸಾಖಿ ಹಬ್ಬದ ಮುಂದುವರಿದ ಸಂಭ್ರಮ

ಬೈಸಾಖಿ ತುಂಬ ದೊಡ್ಡ ಹಬ್ಬ ಅವರಿಗೆ. ಅಂಥ ಬೈಸಾಖಿ ಹಬ್ಬದ ಎರಡನೇ ದಿನ ಅಟ್ಟಾರಿ-ವಾಘಾ ಗಡಿ ಭಾಗದಲ್ಲಿ ಬಿರ್ ಕಾಸ್ಲಾ ಸಿಖ್ ನಿಹಾಂಗ್ಸ್ ಗುಂಪಿನವರು ನೀಡಿದ ಸಾಹಸ ಪ್ರದರ್ಶನ ಇದು.

ಶಿವಗಜನ್ ಹಬ್ಬ

ಶಿವಗಜನ್ ಹಬ್ಬ

ಶಿವ ಗಜನ್ ಹಬ್ಬದ ಅಂಗವಾಗಿ ಪಶ್ಚಿಮ ಬಂಗಾಲದ ಬಿರ್ಭುಮ್ ಜಿಲ್ಲೆಯ ದ್ವಾರಕದಲ್ಲಿ ಭಕ್ತಾದಿಗಳು ನಾಲಗೆಗೆ ಕಂಬಿಗಳನ್ನು ಚುಚ್ಚಿಕೊಂಡು, ಕಂಡುಬಂದಿದ್ದು ಹೀಗೆ.

ವಾದ್ರಾ ಜನ್ಮದಿನ

ವಾದ್ರಾ ಜನ್ಮದಿನ

ರಾಬರ್ಟ್ ವಾದ್ರಾ ತಮ್ಮ ಜನ್ಮದಿನವನ್ನು ನವದೆಹಲಿಯ ಅಂಧ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು

ಬಿಸಿಲ ತಾಪದಿಂದ ರಕ್ಷಣೆ

ಬಿಸಿಲ ತಾಪದಿಂದ ರಕ್ಷಣೆ

ಪಂಜಾಬ್ ನ ಅಮೃತ್ ಸರ್ ನಲ್ಲಿ ಬಿಸಿಲ ತಾಪದಿಂದ ರಕ್ಷಣೆ ಪಡೆಯಲು ಮಹಿಳೆಯರು ಸೀರೆ ಸೆರಗಿನಿಂದ ಮುಖ ಮುಚ್ಚಿಕೊಂಡಿದ್ದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಸ್ವಚ್ಛ ಭಾರತ ಅಭಿಯಾನದಲ್ಲಿ ಹೇಮಾ ಮಾಲಿನಿ

ಸ್ವಚ್ಛ ಭಾರತ ಅಭಿಯಾನದಲ್ಲಿ ಹೇಮಾ ಮಾಲಿನಿ

ಮಥುರಾದಲ್ಲಿ ನಡೆದ ಸ್ವಚ್ಛ ಭಾರತ ಅಭಿಯಾನದಲ್ಲಿ ಸಂಸದೆ-ನಟಿ ಹೇಮಾಮಾಲಿನಿ ಭಾಗವಹಿಸಿದ್ದರು.

ಬಿಸಿಲ ತಾಪಕ್ಕೆ ತಣ್ಣನೆ ನೀರು

ಬಿಸಿಲ ತಾಪಕ್ಕೆ ತಣ್ಣನೆ ನೀರು

ನವದೆಹಲಿಯಲ್ಲಿ ಬಿಸಿಲಿನ ತಾಪ ಭಾರೀ ಹೆಚ್ಚಾಗಿದ್ದು, ಇಂಡಿಯಾ ಗೇಟ್ ಸಮೀಪ ಯುವಕರು ಕಾರಂಜಿಯ ನೀರಿನಲ್ಲಿ ಮೈ ತಣಿಯುವಂತೆ ಮೀಯುತ್ತಿದ್ದರು.

English summary
National events such as Himachal day and other functions represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X