ಇಸ್ರೋದ ಮತ್ತೊಂದು ಸಾಧನೆಗೆ ನಮ್ಮ ಚಪ್ಪಾಳೆ

Subscribe to Oneindia Kannada

ನವದೆಹಲಿ, ಜನವರಿ, 20: ಭಾರತ ಬಾಹ್ಯಾಕೇಶ ಕೇಂದ್ರ ಮತ್ತೊಂದು ಸಾಧನೆ ಮಾಡಿದೆ. ಪಿಎಸ್ ಎಲ್ ವಿ -ಸಿ 31 ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟ ಕೇಂದ್ರದಿಂದ ಬುಧವಾರ ಬೆಳಗ್ಗೆ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.

ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಇಸ್ರೋ ಆವರಣದಲ್ಲಿ ವಿಜ್ಞಾನಿಗಳು ಪರಿಶೀಲನೆ ನಡೆಸಿ ರಾಕೆಟ್ ಉಡಾವಣೆ ಮಾಡಿದರು. ಭಾರತೀಯ ಪ್ರಾದೇಶಿಕ ನೌಕಾಯಾನಶಾಸ್ತ್ರ ಉಪಗ್ರಹ ವ್ಯವಸ್ಥೆ-1ಇ (ಐಆರ್ ಎನ್ ಎಸ್ ಎಸ್) ಯನ್ನು ಉಪಗ್ರಹ ಹೊತ್ತೊಯ್ದಿದೆ.[ಉಪಗ್ರಹ ಉಡಾವಣೆ: ದೊಡ್ಡೋರೆಲ್ಲ ಇಸ್ರೋ ಬಳಿ ಬರೋದು ಯಾಕೆ?]

isro

ನೌಕಾಯಾನಕ್ಕೆ ಸಂಬಂಧಿಸಿದ ಉಪಗ್ರಹ:
ಇಸ್ರೋ ವಿಜ್ಞಾನಿಗಳು ನೌಕಾಯಾನ ವ್ಯವಸ್ಥೆಗೆ ಸಂಬಂಧಪಟ್ಟ ಏಳು ಸರಣಿ ಉಪಗ್ರಹಗಳನ್ನು ತಯಾರಿಸಿದ್ದಾರೆ. ಆ ಸರಣಿಯ ಐದನೇ ಉಪಗ್ರಹವನ್ನು ಉಡ್ಡಯನ ಮಾಡಲಾಗಿದೆ. ಇತರ ನಾಲ್ಕು ಉಪಗ್ರಹಗಳಿಗೆ ಪೂರಕವಾಗಿ ಪಿಎಸ್ ಎಲ್ ವಿ-ಸಿ 31 ಕೆಲಸ ಮಾಡಲಿದೆ. ಈ ಏಳು ಸರಣಿ ಉಪಗ್ರಹಗಳು ಯಶಸ್ವಿಯಾಗಿ ಉಡಾವಣೆಗೊಂಡರೆ ಭಾರತದ ಶಕ್ತಿ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.[ಮುಂದಿನ ವರ್ಷ ಮಂಗಳನ ಮೇಲೆ 'ರಷ್ಯಾ' ಮಂಗಗಳ ಸಂಸಾರ]

ಇಸ್ರೋ 2016 ರಲ್ಲಿ ಕೈಗೊಂಡ ಮೊದಲ ಉಪಗ್ರಹ ಯಾನ ಇದಾಗಿದೆ. ಇನ್ನೆರಡು ಉಪಗ್ರಹಗಳನ್ನು ಈ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಉಡಾಯಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಈ ಮೂಲಕ ಭಾರತ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a breakthrough in the field of space science, ISRO has launched the PSLV-C31, which carries the IRNSS-1E, from Sriharikota. In fact, this is ISRO's 50th orbital launch with the PSLV deploying the IRNSS navigation satellite into geosynchronous transfer orbit.
Please Wait while comments are loading...