4 ಕೋಟಿ ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಉತ್ಪಾದನೆ: ಸೀರಂ

ಬೆಂಗಳೂರು, ನವೆಂಬರ್ 12: ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಕಂಪನಿಯಾಗಿದ್ದು, ಈಗಾಗಲೇ 40 ಮಿಲಿಯನ್(4 ಕೋಟಿ) ಅಸ್ಟ್ರಾಜೆನೆಕಾ ಲಸಿಕೆಯನ್ನು ತಯಾರಿಸಿರುವುದಾಗಿ ತಿಳಿಸಿದೆ.

ಒಪ್ಪಿಗೆ ದೊರೆತ ಬಳಿಕ ನೋವಾವ್ಯಾಕ್ಸ್ ಲಸಿಕೆಯನ್ನು ಕೂಡ ತಯಾರಿಸುತ್ತೇವೆ ಎಂಉ ಹೇಳಿದೆ.

ಇದುವರೆಗೆ ಕೋವಿಶೀಲ್ಡ್ ಲಸಿಕೆಯ ಪ್ರಯೋಗಗಳ ಫಲಿತಾಂಶ ಪರಿಣಾಮಕಾರಿಯಾಗಿದ್ದು, ಭರವಸೆಯ ಫಲಿತಾಂಶವನ್ನು ನೀಡಿದೆ. ಈ ಪ್ರಯೋಗಕ್ಕಾಗಿ ಅಕ್ಟೋಬರ್ 31ರ ಒಳಗೆ 1600 ಮಂದಿಯನ್ನು ನೋಂದಣಿ ಮಾಡಿಕೊಳ್ಳಲಾಗಿದೆ.

Produced 40 Million Doses Of AstraZeneca Covid Vaccine: Serum Institute

ಯಾವ ಕೊರೊನಾ ಲಸಿಕೆ ಸುರಕ್ಷಿತ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ, ಎಲ್ಲಾ ಲಸಿಕೆಗಳು ಕ್ಲಿನಿಕಲ್ ಟ್ರಯಲ್‌ನಲ್ಲಿವೆ. ಶೀಘ್ರ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ.

ಕೊರೊನಾ ವೈರಸ್ ವಿಶ್ವದಾದ್ಯಂತ 1.2 ಮಿಲಿಯನ್ ಮಂದಿಯನ್ನು ಬಲಿತೆಗೆದುಕೊಂಡಿದೆ. ಹಲವು ಔಷಧ ತಯಾರಿಕಾ ಕಂಪನಿಗಳು ಅನುದಾನ ನೀಡಿವೆ, ಹಣ ಹೂಡಿಕೆ ಮಾಡಿವೆ. ಈ 40 ಮಿಲಿಯನ್ ಕೊವಿಡ್ ಲಸಿಕೆ ಇಡೀ ವಿಶ್ವಕ್ಕೋ ಅಥವಾ ಕೇವಲ ಭಾರತಕ್ಕೆ ಮಾತ್ರವೇ ಎನ್ನುವ ಪ್ರಶ್ನೆ ಕಾಡಿದೆ.

ನೋವಾವ್ಯಾಕ್ಸ್ ಲಸಿಕೆಯ ಪ್ರಯೋಗವನ್ನು ಯುಕೆಯಲ್ಲಿ ನಡೆಸಲಾಗಿತ್ತು. ಅಮೆರಿಕದಲ್ಲಿ ಕೂಡ ಲಸಿಕೆ ಪ್ರಯೋಗ ನಡೆಯಲಿದೆ. ಸೇರಂ ಇನ್‌ಸ್ಟಿಟ್ಯೂಟ್ ಪ್ರಯೋಗಕ್ಕಾಗಿ ಭಾರತದಲ್ಲಿ 1600 ಸ್ವಯಂ ಸೇವಕರನ್ನು ಸಿದ್ಧಪಡಿಸಿದೆ.

ಪಿಫೈಜರ್ ಹಾಗೂ ಬಯೋಎನ್‌ಟೆಕ್‌ನ ಲಸಿಕೆಗಳು ಶೇ.92ರಷ್ಟು ಸುರಕ್ಷಿತವಾಗಿದೆ ಎನ್ನುವುದು ಖಾತ್ರಿಯಾಗಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರಿಯಲ್ಲಿ ರಷ್ಯಾದ ಸ್ಪುಟ್ನಿಕ್ V ಲಸಿಕೆಯ ಪ್ರಯೋಗ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+