ದಕ್ಷಿಣ ಭಾರತದ ಭಾಷೆ ಕಲಿತಿದ್ದಾರೆ ಪ್ರಿಯಾಂಕಾ ಗಾಂಧಿ: ಉತ್ತರದಲ್ಲಿ ರಾಹುಲ್‌, ದಕ್ಷಿಣದಲ್ಲಿ ಪ್ರಿಯಾಂಕಾ ಏನಿದು ಲೆಕ್ಕಾಚಾರ!

ವಯನಾಡು ನೂತನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಸಂಸತ್‌ ಪ್ರವೇಶಿಸಿದ್ದಾರೆ. ಗರಿಗರಿ ಕೇರಳದ ಸೀರೆಯನ್ನುಟ್ಟು ಸಂಸತ್‌ ತಲುಪಿದ್ದಾರೆ. ವಯನಾಡ್ ಲೋಕಸಭೆ ಉಪ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಮೇಲೆ ಅವರು ಸಂಸತ್‌ ಪ್ರವೇಶಿಸಿದ್ದು, ಕೇರಳ ಹಾಗೂ ವಯನಾಡ್‌ನ ಹಲವು ವಿಷಯಗಳಿಗೆ ಆದ್ಯತೆ ಕೊಡ್ತಿದ್ದಾರೆ. ಇನ್ನು ಅವರು ಮಲಯಾಳಂ ಸಹ ಕಲಿಯುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಅವರು ಸಂಸದೆಯಾಗಿ ಆಯ್ಕೆಯಾಗಿರುವುದು ಮಾತ್ರವಲ್ಲ. ಉತ್ತರದಲ್ಲಿ ರಾಹುಲ್‌ಗಾಂಧಿ & ದಕ್ಷಿಣದಲ್ಲಿ ಪ್ರಿಯಾಂಕಾ ಗಾಂಧಿ ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿ ನಡೆದಿದೆ. ಅದಕ್ಕೆ ಅಧಿಕೃತ ಚಾಲನೆ ಇಂದು ಸಿಕ್ಕಂತಾಗಿದೆ.

ಪ್ರಿಯಾಂಕಾ ಗಾಂಧಿ ಕೇರಳದ ವಾಯನಾಡು ಲೋಕಸಭೆ ಉಪ ಚುನಾವಣೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಅವರು ಈ ಬಾರಿ ಗೆಲುವು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಇದೀಗ ಲೋಕಸಭೆಯನ್ನು ಮೊದಲ ಬಾರಿ ಪ್ರವೇಶ ಮಾಡುವಾಗಲೇ ವಾಯನಾಡ್‌ನ ಸಂಸ್ಕೃತಿಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸುವ ಮೂಲಕ ದಕ್ಷಿಣ ಭಾರತೀಯರು ಹಾಗೂ ಕೇರಳಿಗರಲ್ಲಿ ಸಂತೋಷವನ್ನು ಉಂಟು ಮಾಡಿದ್ದಾರೆ.

Priyanka Gandhi learning Malayalam Congress leaders master plan to strengthen Congress party

ಮಲಯಾಳಂ ಕಲಿಯುತ್ತಿರುವ ಪ್ರಿಯಾಂಕಾ

ಪ್ರಿಯಾಂಕಾ ಗಾಂಧಿ ಅವರು ಮಲಯಾಳಂ ಕಲಿಯಲು ಶುರು ಮಾಡಿಕೊಂಡಿದ್ದಾರೆ ಎಂದು ಹಲವು ಮಲಯಾಳಂ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ವಯನಾಡ್‌ನಲ್ಲಿ ಅವರು ಚುನಾವಣೆ ಪ್ರಚಾರ ಸಭೆಗಳಲ್ಲಿ ಭಾಗವಹಿಸುವಾಗಲೇ ಸಣ್ಣ ಸಣ್ಣ ಮಲಯಾಳಂ ಪದಗಳನ್ನು ಕಲಿತಿದ್ದಾರಂತೆ. ಅಲ್ಲದೇ ವಯನಾಡ್‌ನ ಜನ ಹಾಗೂ ನಾಯಕರು ಮಲಯಾಳಂನಲ್ಲಿ ಮಾತನಾಡುವಾಗ ಹಾಗು ಮನವಿಗಳನ್ನು ಕೊಟ್ಟರೆ ನನಗೆ ಅರ್ಥವಾಗಬೇಕು. ಈ ಕಾರಣಕ್ಕಾಗಿ ನಾನು ಮಲಯಾಳಂ ಕಲಿಯುತ್ತೇನೆ ಎಂದು ಪ್ರಿಯಾಂಕಾ ಅವರು ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಪ್ರಿಯಾಂಕಾಗೆ ಈಗಾಗಲೇ ಹಿಂದಿ, ಇಂಗ್ಲಿಷ್, ಫ್ರೆಂಚ್ ಹಾಗೂ ಇಟಾಲಿಯನ್ ಭಾಷೆಗಳಲ್ಲಿ ಸರಾಗವಾಗಿ ಮಾತನಾಡುತ್ತಾರೆ. ವಯನಾಡ್‌ನ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದಾಗ ಅವರು, ಇಲ್ಲಿನ ಪಾದ್ರಿಗಳೊಂದಿಗೆ ಫ್ರೆಂಚ್‌ ಹಾಗೂ ಇಟಾಲಿಯನ್‌ ಭಾಷೆಯಲ್ಲಿ ಮಾತನಾಡಿದ್ದರು. ಇದು ಸಹ ಸಾಕಷ್ಟು ಗಮನ ಸೆಳೆದಿತ್ತು. ಇದೀಗ ವಯನಾಡಿನ ಜನ ನನ್ನೊಂದಿಗೆ ಮಾತನಾಡುವಾಗ ಅವರ ಹೇಳುವುದನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸುವಷ್ಟು ಮಲಯಾಳಂ ನನಗೆ ಬರಬೇಕು ಎನ್ನುವ ಕಾರಣಕ್ಕೆ ಮಲಯಾಳಂ ಕಲಿಯಬೇಕು ಎಂದು ಅವರು ಹೇಳಿದ್ದಾರೆ.

ಉತ್ತರಕ್ಕೆ ರಾಹುಲ್‌ ಗಾಂಧಿ, ದಕ್ಷಿಣಕ್ಕೆ ಪ್ರಿಯಾಂಕಾ: ಪ್ರಿಯಾಂಕಾ ಅವರು ಗುರುವಾರ ಸಂಸತ್‌ ಪ್ರವೇಶ ಮಾಡುವ ಮೂಲಕ ಒಂದೇ ಕುಟುಂಬದ ಮೂರು ಜನ ಇದೀಗ ಸಂಸತ್‌ನಲ್ಲಿ ಇದ್ದಾರೆ. ಪ್ರಿಯಾಂಕಾ ಗಾಂಧಿ ಸಹೋದರ ರಾಹುಲ್‌ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ ಅವರು ಸಂಸತ್‌ನಲ್ಲಿ ಇದ್ದಾರೆ.

Priyanka Gandhi learning Malayalam Congress leaders master plan to strengthen Congress party

ಇದೀಗ ಪ್ರಿಯಾಂಕಾ ಗಾಂಧಿ ಅವರು ಸಂಸತ್‌ ಪ್ರವೇಶ ಮಾಡಿದ ಬೆನ್ನಲ್ಲೇ ದಕ್ಷಿಣ ಭಾರತದಿಂದ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸಿದರೆ, ಉತ್ತರ ಭಾರತದಿಂದ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎರಡರಲ್ಲೂ ಕಾಂಗ್ರೆಸ್‌ ಪಕ್ಷದ ಬಲ ವರ್ಧನೆಗೆ ಸಹಕಾರಿಯಾಗಲಿದೆ ಎಂದು ಕಾಂಗ್ರೆಸ್‌ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+