Prithvi Shaw Selfie Row: ಕ್ರಿಕೆಟಿಗ ಪೃಥ್ವಿ ಶಾ ಕಾರು ಜಖಂ, ಬೆನ್ನಟ್ಟಿದ ಯುವತಿ ಸೇರಿ 8 ಜನರ ಬಂಧನ
ಯುವತಿ ಸಪ್ನಾ ಗಿಲ್ ಅವರನ್ನು ಗುರುವಾರ ಸಂಜೆ ಬಂಧಿಸಲಾಗಿದ್ದು, ಶುಕ್ರವಾರ ಅಂಧೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಮುಂಬೈ, ಫೆಬ್ರವರಿ. 17: ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅಭಿಮಾನಿಗಳ ಸೆಲ್ಫಿ ವಿವಾದದಲ್ಲಿ ಹೊಸ ತಿರುವು ಬಂದಿದ್ದು, ಪದೇ ಪದೇ ಸೆಲ್ಫಿ ನೀಡಲು ನಿರಾಕರಿಸಿದ ಪೃಥ್ವಿ ಶಾ ಮೇಲೆ ಯುವತಿ ಹಲ್ಲೆಗೆ ಮುಂದಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ.
ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಐಷಾರಾಮಿ ಹೋಟೆಲ್‌ನ ಹೊರಗೆ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಕಾರಿನ ಮೇಲೆ ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಯುವತಿ ಸಾಮಾಜಿಕ ಮಾಧ್ಯಮದಲ್ಲಿ ಇನ್ಫ್ಯೂಯೆನ್ಸರ್ ಆಗಿದ್ದು, ಆಕೆ ಮತ್ತು ಆತನ ಸ್ನೇಹಿತರು ಸೆಲ್ಫಿಗಾಗಿ ಕೇಳಿದ್ದಾರೆ. ಬಳಿಕ ಮತ್ತೆ ಮತ್ತೆ ಸೆಲ್ಫೆ ಕೇಳಿದಾಗ ಪೃಥ್ವಿ ಶಾ ನಿರಾಕರಿಸಿದ್ದಾರೆ ಎಂದು ಓಶಿವರಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ ಸಪ್ನಾ ಗಿಲ್ ಅವರನ್ನು ಗುರುವಾರ ಸಂಜೆ ಬಂಧಿಸಲಾಗಿದ್ದು, ಶುಕ್ರವಾರ ಅಂಧೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಸಪ್ನಾ ಗಿಲ್ ಮತ್ತು ಆತನ ಸ್ನೇಹಿತ ಶೋಭಿತ್ ಠಾಕೂರ್ ಬುಧವಾರ ಮುಂಜಾನೆ ಹೋಟೆಲ್‌ನಲ್ಲಿ ಆಟಗಾರನೊಂದಿಗೆ ಪದೇ ಪದೇ ಸೆಲ್ಫಿ ತೆಗೆದುಕೊಳ್ಳುವುದನ್ನು ಪೃಥ್ವಿ ಶಾ ಮತ್ತು ಇಬ್ಬರು ಸ್ನೇಹಿತರು ವಿರೋಧಿಸಿದಾಗ ಗಲಾಟೆ ಪ್ರಾರಂಭವಾಯಿತು.

ಸೆಲ್ಫಿ ನೀಡಲು ನಿರಾಕರಿಸಿದ ಪೃಥ್ವಿ ಶಾ ಅವರ ವಿರುದ್ದ ಕೋಪಗೊಂಡಿದ್ದ ಯುವತಿ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು, ಪೃಥ್ವಿ ಶಾ ಮತ್ತು ಆತನ ಸ್ನೇಹಿತರು ಹೊರಬರುವುದನ್ನು 25 ನಿಮಿಷಗಳಿಗಿಂತಲೂ ಹೆಚ್ಚು ಕಾಲ ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Prithvi Shaw Attacked In Mumbai By Some Drunk People.
— Vaibhav Bhola 🇮🇳 (@VibhuBhola) February 16, 2023
This Video Is Very Scary. Fans Need To Understand They Can't Misbehave With Any Celebrity.
Prithvi Somehow Managed To Grab Baseball Bat From That Lady.
This Lady Attacked Prithvi Shaw Car With Baseball Bat. pic.twitter.com/thtyECpE1w
ಪೃಥ್ವಿ ಶಾ ಮತ್ತು ಆತನ ಸ್ನೇಹಿತರು ಹೊರಬಂದಾಗ, ಸ್ವಪ್ನಾ ಗಿಲ್ ಮತ್ತು ಆತನ ಸ್ನೇಹಿತ ಶೋಭಿತ್ ಠಾಕೂರ್ ಅವರು ಬೇಸ್‌ಬಾಲ್ ಬ್ಯಾಟ್‌ನಿಂದ ಪೃಥ್ವಿ ಶಾ ಅವರ ಬಿಎಂಡಬ್ಯೂ ಕಾರಿನ ಮೇಲೆ ಹಲ್ಲೆ ಮಾಡಿದ್ದಾರೆ. ಕಾರಿನ ಗಾಜು ವಿಂಡ್‌ಶೀಲ್ಡ್ ಮತ್ತು ಹಿಂದಿನ ಪರದೆಯನ್ನು ಒಡೆದು ಹಾಕಿದ್ದಾರೆ.

ಇದಾದ ಬಳಿಕ ಆರೋಪಿ ಶೋಭಿತ್ ಠಾಕೂರ್ ತನ್ನ ಇತರ ಆರು ಸ್ನೇಹಿತರನ್ನು ಕರೆಯಲು ಹೋಗಿದ್ದಾರೆ. ಬಳಿಕ ಎಲ್ಲರೂ ಸೇರಿ ಕ್ರಿಕೆಟಿಗ ಪೃಥ್ವಿ ಶಾ ಖಾರಿನಲ್ಲಿಇದ್ದಾರೆ ಎಂದು ಭಾವಿಸಿ ಸುಮಾರು 10 ಕಿ.ಮೀ ವರೆಗೆ ಬೆನ್ನಟ್ಟಿದ್ದಾರೆ. ಆದರೆ, ಗಲಾಟೆ ಹೆಚ್ಚಾಗುತ್ತಿದ್ದಂತೆ ಪೃಥ್ವಿ ಶಾ ಮತ್ತೊಂದು ಕಾರಿನಲ್ಲಿ ಹೊರಟು ಹೋಗಿದ್ದರು.
ಸದ್ಯ ಪ್ರಕರಣದಲ್ಲಿ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದು, ಕ್ರಿಕೆಟಿಗ ಪೃಥ್ವಿ ಶಾ ಕುಡಿದು ತನ್ನ ಬ್ಯಾಟ್‌ನಿಂದ ಹೊಡೆದಿದ್ದಾರೆ ಎಂದು ಗುರುವಾರ ಯುವತಿಯ ವಕೀಲರು ಆರೋಪಿಸಿದ್ದಾರೆ.












Click it and Unblock the Notifications