ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಆರ್ಥಿಕತೆಗೆ ಪ್ರೇರಕ: ಬಜೆಟ್ ಅನ್ನು ಕೊಂಡಾಡಿದ ಮೋದಿ

By Manjunatha
|
Google Oneindia Kannada News

ನವದೆಹಲಿ, ಜನವರಿ 01: ಇಂದು ಮಂಡನೆಯಾದ 2018-2019ರ ಬಜೆಟ್‌ ಅನ್ನು ಪ್ರಧಾನಿ ಮೋದಿ ಅವರು ಇದೊಂದು ಅಭಿವೃದ್ಧಿ ಪರ ಬಜೆಟ್ ಎಂದು ಬಣ್ಣಿಸಿದ್ದಾರೆ.

ಅಭಿವೃದ್ಧಿಶೀಲ ಬಜೆಟ್ ಮಂಡಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಅಭಿನಂದನೆಗಳು ಎಂದ ಅವರು ಈ ಬಜೆಟ್ ಭಾರತದ ಆರ್ಥಿಕತೆಗೆ ಭಾರಿ ಮುನ್ನಡೆ ದೊರಕಿಸಲಿದೆ ಎಂದರು.

ಕೇಂದ್ರ ಆಯವ್ಯಯ 2018 : ಬಡವರ ಕೃಷಿಕರ ಬಜೆಟ್ಕೇಂದ್ರ ಆಯವ್ಯಯ 2018 : ಬಡವರ ಕೃಷಿಕರ ಬಜೆಟ್

ಅತ್ಯಂತ ದೂರಗಾಮಿ, ಆರ್ಥಿಕತೆ ಉತ್ತೇಜಕ ಹಾಗೂ ಬಡವರ ಪರ ಹಾಗೂ ಆರೋಗ್ಯವಂತ ರಾಷ್ಟ್ರ ಕಟ್ಟಲು ಈ ಬಜೆಟ್ ಪೂರಕವಾಗಿದೆ ಎಂದಿರುವ ಅವರು. 2022 ಅಷ್ಟರಲ್ಲಿ ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಲು ಈ ಬಜೆಟ್ ನೆರವಾಗಲಿದೆ ಎಂದಿದ್ದಾರೆ.

ಬಜೆಟ್: ಸಾಮಾಜಿಕ ಜಾಲತಾಣದಲ್ಲಿ ಮೋದಿ ಸರ್ಕಾರಕ್ಕೆ ಛೀಮಾರಿ?! ಬಜೆಟ್: ಸಾಮಾಜಿಕ ಜಾಲತಾಣದಲ್ಲಿ ಮೋದಿ ಸರ್ಕಾರಕ್ಕೆ ಛೀಮಾರಿ?!

ಕೃಷಿ ಪರವಾದ ಯೋಜನೆಗಳನ್ನು ಕೊಂಡಾಡಿದ ಮೋದಿ ಅವರು ಬಜೆಟ್‌ನಲ್ಲಿ ಕೃಷಿ ವಿಚಾರವಾಗಿ ಘೋಷಿಸಿರುವ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳೊಂದಿಗೆ ಮಾತನಾಡಿ ವಿಶೇಷ ಆಪರೇಷನ್ ಗ್ರೀನ್ಸ್ ಹೆಸರಿನ ಮೂಲಕ ಶೀಘ್ರವಾಗಿ ತಲುಪಿಸುವ ಕಾರ್ಯ ಮಾಡಲಾಗುತ್ತದೆ ಎಂದರು.

ಆರ್ಥಿಕತೆಗೆ ವೇಗ

ಆರ್ಥಿಕತೆಗೆ ವೇಗ

ರೈತರು, ವಿದ್ಯಾರ್ಥಿಗಳು, ಮಧ್ಯಮವರ್ಗ, ಮಹಿಳೆಯರು, ಶೋಷಿತರು, ಹಿರಿಯರು, ವಾಣಿಜ್ಯೋದ್ಯಮಿಗಳು ಹೀಗೆ ಎಲ್ಲರನ್ನೂ ಗಮನದಲ್ಲಿರಿಸಿಕೊಂಡು ಮಂಡಿಸಲಾದ ಈ ಬಜೆಟ್ ಭಾರತದ ಆರ್ಥಿಕತೆಗೆ ವೇಗ ನೀಡಲಿದೆ ಎಂದು ಮೋದಿ ಹೇಳಿದರು.

ಬೆಂಬಲ ಬೆಲೆ

ಬೆಂಬಲ ಬೆಲೆ

ರೈತರಿಗೆ ಈ ಬಜೆಟ್ ಅತಿ ಹೆಚ್ಚು ಕೊಡುಗೆಗಳನ್ನು ನೀಡಿದೆ ಎಂದ ಅವರು. ಬೆಂಬಲ ಬೆಲೆ, ಕಡಿಮೆ ದರದ ಸಾಲ, ರೈತರ ಕ್ರೆಡಿಟ್ ಕಾರ್ಡ್ ಮೂಲಕ ಸಾಲ. ಎಫ್‌ಪಿಓ ಗಳನ್ನು ತೆರಿಗೆ ಮಿತಿಯಿಂದ ಹೊರಗಿಟ್ಟಿರುವುದು. ರೈತರ ಉಪಕಸುಬುಗಳಿಗೆ ಆರ್ಥಿಕ ಸಹಾಯ ಇವೆಲ್ಲ ಯೋಜನೆಗಳು ರೈತರ ಆದಾಯವನ್ನು ಹೆಚ್ಚಿಸಲಿವೆ ಎಂದರು.

ವಿಶ್ವದ ದೊಡ್ಡ ಆರೋಗ್ಯ ಯೋಜನೆ

ವಿಶ್ವದ ದೊಡ್ಡ ಆರೋಗ್ಯ ಯೋಜನೆ

ಕುಟುಂಬದ ವರ್ಷದ 5 ಲಕ್ಷದ ವರೆಗಿನ ಆರೋಗ್ಯವ ವೆಚ್ಚವನ್ನು ಸರ್ಕಾರವೇ ಭರಿಸುವ ಭಾರತ್ ಆಯುಷ್ಮಾನ್ ಯೋಜನೆಯನ್ನು ಕೊಂಡಾಡಿದ ಮೋದಿ. ಮಧ್ಯಮ ವರ್ಗ ಮತ್ತು ಬಡವರ ಚಿಂತೆಯನ್ನು ಇದು ದೂರ ಮಾಡಲಿದೆ ಎಂದರು. ಆಯುಷ್ಮಾನ್ ಯೋಜನೆ ಇಡೀಯ ವಿಶ್ವದಲ್ಲೆ ಸರ್ಕಾರವೊಂದು ನೀಡುತ್ತಿರುವ ಅತಿ ದೊಡ್ಡ ಆರೋಗ್ಯ ಯೋಜನೆ ಇದು ಎಂದು ಹೊಗಳಿದ್ದಾರೆ.

ವಿದ್ಯಾರ್ಥಿಗಳಿಗೆ ಮತ್ತು ಆರೋಗ್ಯಕ್ಕೆ ಪೂರಕ

ವಿದ್ಯಾರ್ಥಿಗಳಿಗೆ ಮತ್ತು ಆರೋಗ್ಯಕ್ಕೆ ಪೂರಕ

ಮೂರು ಲೋಕಸಭಾ ಸ್ಥಾನಗಳಿರುವ ಜಾಗದಲ್ಲಿ ಒಂದು ವೈದ್ಯಕೀಯ ಆಸ್ಪತ್ರೆ ಸ್ಥಾಪಿಸುವ ಯೋಜನೆಯ ಬಗ್ಗೆಯೂ ಮಾತನಾಡಿದ ಮೋದಿ ಅವರು ಇದೊಂದು ಅತ್ಯುತ್ತಮ ಯೋಜನೆ. ಬಡ, ಮಧ್ಯಮ ವರ್ಗದವರಿಗೆ ಹತ್ತಿರಲ್ಲಿ ಮೆಡಿಕಲ್ ಕಾಲೇಜು ಶಿಕ್ಷಣ ಸಿಗುವ ಜೊತೆಗೆ ಸ್ಥಳೀಯರಿಗೆ ಆರೋಗ್ಯ ಸೌಲಭ್ಯಗಳು ಸಿಗುತ್ತವೆ ಎಂದರು.

ಮೇಕ್‌ ಇನ್ ಇಂಡಿಯಾಕ್ಕೆ ಪೂರಕ

ಮೇಕ್‌ ಇನ್ ಇಂಡಿಯಾಕ್ಕೆ ಪೂರಕ

ಒಟ್ಟಾರೆ ಬಜೆಟ್ ಸರ್ಕಾರದ ಗುರಿಗಳಿಗೆ ಪೂರಕವಾಗಿದ್ದು, ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನ, ಭೇಟಿ ಪಡಾವೊ ಭೇಟಿ ಬಚಾವೊ, ಮುಂತಾದ ಘೋಷಣೆಗಳಿಗೆ ಉತ್ತೇಜನೆ ನೀಡುವಂತಹಾ ಬಜೆಟ್ ಇದಾಗಿದೆ ಈ ಬಜೆಟ್ ಭಾರತದ ಆರ್ಥಿಕತೆಗೆ ನವ ಚೈತನ್ಯ ನೀಡಲಿದೆ ಎಂದು ಮೋದಿ ಹೊಗಳಿದರು.

English summary
Prime minister Narendra Modi congratulate Finance minister Arun Jaitley on presenting budget 2018-19. Modi praises budget and said this budget will accelerate India's economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X