ಭಾರತದ ಹಲವಾರು ವೈವಿಧ್ಯ ಸುದ್ದಿಗಳ ಗುಚ್ಛ

ಬೆಂಗಳೂರು, ನವೆಂಬರ್, 28 : ಪ್ರಧಾನ ಮಂತ್ರಿ ನರೇಂದ್ರಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನವದೆಹಲಿಯಲ್ಲಿ ಮುಖಾಮುಖಿಯಾದರು. ಆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಅಭಿಮಾನಪೂರ್ವಕ ನಮನ ಸಲ್ಲಿಸಿದರು.

ಮೈಸೂರು, ಮಂಡ್ಯ ಜನತೆಯು ಚಿರತೆ, ಹುಲಿ ತೊಂದರೆಯಿಂದ ಇನ್ನೂ ಸುಧಾರಿಸಿಕೊಂಡಿಲ್ಲ. ಹುಲಿ, ಚಿರತೆ ಉಪಟಳ ಇದೀಗ ಹಾವೇರಿ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಸುಮಾರು ದಿನಗಳಿಂದ ತೊಂದರೆ ಕೊಡುತ್ತಿದ್ದ ಚಿರತೆಯನ್ನು ಹಾವೇರಿ ಜಿಲ್ಲೆಯ ಹಿರೇಕೆರೂರು ಗ್ರಾಮಸ್ಥರು ಹಿಡಿದಿದ್ದಾರೆ

ಕೆಲವು ದಿನಗಳ ಹಿಂದೆ ಶಿವಸೇನಾ ಕಾರ್ಯಕರ್ತರಿಂದ ಮಸಿ ಬಳಿಸಿಕೊಂಡಿದ್ದ ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ ಅವರ ಸಲಹೆಗಾರನಾದ ಸುಧೀಂದ್ರ ಕುಲಕರ್ಣಿ ಪಾಕಿಸ್ತಾನ ಹೈ ಕಮೀಷನ್ ಬಗ್ಗೆ ಉಪನ್ಯಾಸ ನೀಡಲು ದೆಹಲಿಗೆ ತೆರಳಿದ್ದಾರೆ.

ಬಿ.ಎಸ್ ಲಿಂಗದೇವರು ನಿರ್ದೇಶನದ 'ನಾನು ಅವನಲ್ಲ, ಅವಳು' ಚಿತ್ರ ತಂಡ ಗೋವಾದ ಪಣಜಿಯಲ್ಲಿ ಶುಕ್ರವಾರ ನಡೆದ 46ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿತ್ತು. ಈ ಎಲ್ಲಾ ಸುದ್ದಿಗಳ ಸವಿವರ ಇಂತಿದೆ.

ಬಿಜೆಪಿ, ಕಾಂಗ್ರೆಸ್ ಮುಖಾಮುಖಿ

ಬಿಜೆಪಿ, ಕಾಂಗ್ರೆಸ್ ಮುಖಾಮುಖಿ

ನವದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಪರಸ್ಪರ ಮುಖಾಮುಖಿಯಾದರು. ಆ ಸಂದರ್ಭದಲ್ಲಿ ಮೋದಿಯವರು ಹಸನ್ಮುಖರಾಗಿ ನಮನ ಸಲ್ಲಿಸಿದರು.

ಮಸಿ ಹಚ್ಚಿಸಿಕೊಂಡ ಸುಧೀಂದ್ರ ನವದೆಹಲಿಯಲ್ಲಿ

ಮಸಿ ಹಚ್ಚಿಸಿಕೊಂಡ ಸುಧೀಂದ್ರ ನವದೆಹಲಿಯಲ್ಲಿ

ಪಾಕಿಸ್ತಾನ ವಿದೇಶಾಂಗ ಮಾಜಿ ಸಚಿವ ಮಹಮ್ಮದ್ ಕಸೂರಿಯವರ ಪುಸ್ತಕ ಬಿಡುಗಡೆ ಸಮಾರಂಭ ರದ್ಧತಿಗೆ ನಿರಾಕರಿಸಿದ ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಶಿವಸೇನೆ ಕಾರ್ಯಕರ್ತರು ಅಕ್ಟೋಬರ್ 12ರಂದು ಮುಂಬೈನಲ್ಲಿ ಮಸಿಬಳಿದಿದ್ದರು. ಇವರು ಶುಕ್ರವಾರ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ್ ಹೈ ಕಮೀಷನ್ ಬಗ್ಗೆ ನವದೆಹಲಿಯಲ್ಲಿ ಉಪನ್ಯಾಸ ನೀಡಿದ್ದಾರೆ. ಉಪನ್ಯಾಸದ ವೇಳೆ ದಾಹವಾಗಿದ್ದ ಸುಧೀಂದ್ರ ಅವರಿಗೆ ಪಾಕಿಸ್ತಾನ ಹೈ ಕಮಿಷನರ್ ಅಬ್ದುಲ್ ಬಸಿಟ್ ಅವರಿಗೆ ನೀರು ಕೊಡಲು ಮುಂದಾದರು

ನಾನು ಅವನಲ್ಲ, ಅವಳು ಚಿತ್ರತಂಡ ಗೋವಾದಲ್ಲಿ

ನಾನು ಅವನಲ್ಲ, ಅವಳು ಚಿತ್ರತಂಡ ಗೋವಾದಲ್ಲಿ

ಬಿ.ಎಸ್ ಲಿಂಗದೇವರು ನಿರ್ದೇಶಿಸಿದ ನಾನು ಅವನಲ್ಲ, ಅವಳು ಚಲನಚಿತ್ರವು ತಮಿಳಿನಲ್ಲಿ ವಿದ್ಯಾ ಬರೆದಿರುವ ಲಿವಿಂಗ್ ಸ್ಮೈಲ್ ಕಥೆ ಆಧಾರಿಸಿದ ಚಿತ್ರ. ಈ ಚಿತ್ರದಲ್ಲಿ ಮಂಗಳಮುಖಿಯಾಗಿ ಪಾತ್ರ ನಿರ್ವಹಿಸಿದ ಸಂಚಾರಿ ವಿಜಯ್ ಅವರಿಗೆ ಶ್ರೇಷ್ಟ ನಟ ಪ್ರಶಸ್ತಿ ಹಾಗೂ ಶ್ರೇಷ್ಟ ಮೇಕಪ್ ಕಲಾವಿದ ಪ್ರಶಸ್ತಿಯನ್ನು ರಾಜು, ನಾಗರಾಜ್ ಪಡೆದುಕೊಂಡಿದ್ದಾರೆ. ನಾನು ಅವನಲ್ಲ, ಅವಳು ಚಿತ್ರ ತಂಡ ಗೋವಾದ ಪಣಜಿಯಲ್ಲಿ ಶುಕ್ರವಾರ ನಡೆದ ೪೬ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಗವಹಿಸಿತ್ತು.

ಚಿರತೆ ಹಿಡಿದ ಹಾವೇರಿ ಜನತೆ

ಚಿರತೆ ಹಿಡಿದ ಹಾವೇರಿ ಜನತೆ

ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ಹುಲಿ, ಚಿರತೆಯ ಉಪಟಳದಿಂದ ಹಲವಾರು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಇದೀಗ ಚಿರತೆಯು ಹಾವೇರಿ ಜಿಲ್ಲೆಯ ಜನತೆಯನ್ನು ಬೆದರಿಸಲು ಹೊರಟಿದ್ದು, ಹಲವಾರು ಗಂಟೆಗಳ ಕಾರ್ಯಾಚರಣೆಯ ಮೂಲಕ ಚಿರತೆಯನ್ನು ಹಿಡಿಯುವಲ್ಲಿ ಹಿರೇಕೆರೂರು ಗ್ರಾಮಸ್ಥರು ಯಶಸ್ವಿಯಾಗಿದ್ದು, ಚಿರತೆಯನ್ನು ಬೋನಿನೊಳಗೆ ಹಿಡಿಯಲಾಯಿತು.

ಇಪ್ಪತ್ತೆರಡು ಕೋಟಿ ಕಳ್ಳ ಪೊಲೀಸ್ ಬಲೆಗೆ ಬೀಳಿಸು

ಇಪ್ಪತ್ತೆರಡು ಕೋಟಿ ಕಳ್ಳ ಪೊಲೀಸ್ ಬಲೆಗೆ ಬೀಳಿಸು

ನವದೆಹಲಿಯ ಗೋವಿಂದಪುರಿಯಲ್ಲಿ ಸುಮಾರು 22 ಕೋಟಿ ಕದ್ದು ಪರಾರಿಯಾಗಿದ್ದ ಚಾಲಕ ಪ್ರದೀಪ್ ಶುಕ್ಲ ಎಂಬ ಕಳ್ಳನನ್ನು ನವದೆಹಲಿ ಪೊಲೀಸರು ಬಂಧಿಸಿದರು. ಈತ ಎಟಿಎಂಗೆ ಹಣ ತುಂಬಿಸುವ ವಾಹನದ ಚಾಲಕನಾಗಿದ್ದನು. ಈತ ಖಾಸಗಿ ಎಕ್ಸಿಸ್ ಬ್ಯಾಂಕಿನ ಹಣ ಕದ್ದಿದ್ದನು. ಈತ ಭಾರೀ ಮೊತ್ತದ ದರೋಡೆಯಾಗಿದೆ.

ಮಹಾತ್ಮ ಫುಲೆ ಸಮತಾ ಪ್ರಶಸ್ತಿ

ಮಹಾತ್ಮ ಫುಲೆ ಸಮತಾ ಪ್ರಶಸ್ತಿ

ಲೇಖಕಿ ಅರುಂಧತಿ ರಾಯ್ ಅವರು ಪುಣೆಯಲ್ಲಿ ಮಹಾತ್ಮ ಫುಲೆ ಸಮತಾ ಪ್ರಶಸ್ತಿಯನ್ನು ಸ್ವೀಕರಿಸಿದ ಕ್ಷಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+