ದೇಶಕ್ಕೆ ಮಹಾರಾಜರ ಅವಶ್ಯಕತೆ ಇಲ್ಲ : ನರೇಂದ್ರ ಮೋದಿ

Recommended Video

      Surgical Strike 2: ನರೇಂದ್ರ ಮೋದಿ: ದೇಶಕ್ಕೆ ಮಹಾರಾಜರ ಅವಶ್ಯಕತೆ ಇಲ್ಲ

      ನವದೆಹಲಿ, ಮಾರ್ಚ್ 31 : 'ಮೈ ಭೀ ಚೌಕಿದಾರ್' ಅಭಿಯಾನದಡಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಜೊತೆ ಸಂವಾದ ನಡೆಸಿದರು. 'ದೇಶಕ್ಕೆ ಯಾವುದೇ ಮಹಾರಾಜರ ಅವಶ್ಯಕತೆ ಇಲ್ಲ' ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

      ಭಾನುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಜೊತೆ ಸಂವಾದ ನಡೆಸಿದರು. ದೇಶದ 500ಕ್ಕೂ ಹೆಚ್ಚು ಜನರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 'ಇಡೀ ದೇಶ ಮೈ ಭೀ ಚೌಕಿದಾರ್' ಅಭಿಯಾನಕ್ಕೆ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

      Prime Minister Narendra Modi Main Bhi Chowkidar interaction highlights

      'ಬಾಲಾಕೋಟ್‌ನಲ್ಲಿ ಉಗ್ರರ ಮೇಲೆ ದಾಳಿ ಮಾಡಿದ್ದು ನಾನಲ್ಲ, ನಮ್ಮ ಹೆಮ್ಮೆಯ ಸೈನಿಕರು. ಅವರಿಗೆ ನಾವು ಹೆಮ್ಮೆಯ ಸೆಲ್ಯೂಟ್ ಕೊಡೋಣ' ಎಂದು ನರೇಂದ್ರ ಮೋದಿ ಕರೆ ನೀಡಿದರು.

      ಮೋದಿ ಭಾಷಣದ ಮುಖ್ಯಾಂಶಗಳು

      * ನಮ್ಮದು ರಿಮೋಟ್ ಕಂಟ್ರೋಲ್ ಸರ್ಕಾರವಲ್ಲ. ರಿಮೋಟ್ ಕಂಟ್ರೋಲ್ ಸರ್ಕಾರ ಯಾರದ್ದು ಆಗಿದ್ದು ಎಂಬುದು ದೇಶದ ಜನರಿಗೆ ಗೊತ್ತಿದೆ' ಎಂದು ಮೋದಿ ಹೇಳಿದರು.

      * ನಮ್ಮ ದೇಶದ ಅಭಿವೃದ್ಧಿಗೆ ಸಂಪೂರ್ಣ ಬಹುಮತದ ಸರ್ಕಾರವೇ ಕಾರಣ. ಈ ದೇಶದ ಅಭಿವೃದ್ಧಿ ಮೋದಿ ಮಾಡಿದ್ದಲ್ಲ. ಸಂಪೂರ್ಣ ಬಹುಮತದ ಸರ್ಕಾರ ಮಾಡಿದ್ದು

      * ದೇಶದ ರಕ್ಷಣೆಗೆ ನಾನು ನನ್ನ ಸಂಪೂರ್ಣ ಪ್ರಯತ್ನವನ್ನು ಮಾಡಿದ್ದೇನೆ. ನನ್ನನ್ನು ಚೌಕಿದಾರ್ ಎಂದು ಕರೆದಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದರು.

      * ನಮ್ಮ ರಕ್ಷಣಾ ಪಡೆಗಳ ಮೇಲೆ ನನಗೆ ಸಂಪೂರ್ಣವಾದ ನಂಬಿಕೆ ಇದೆ. ಅವರ ಶೌರ್ಯ, ಸಾಹಸದ ಮೇಲೆ ನಂಬಿಕೆ ಇರುವುದರಿಂದ ಅವರು ಏನು ಸಾಧಿಸುತ್ತಾರೆ ಎಂಬುದು ತಿಳಿದಿದೆ.

      * ಕಳೆದ 40 ವರ್ಷಗಳಿಂದ ನಾವು ಉಗ್ರವಾದದಿಂದ ಸಂಕಷ್ಟ ಅನುಭವಿಸುತ್ತಿದ್ದೇವೆ. ಇದಕ್ಕೆ ಯಾರು ಹೊಣೆ ಎಂಬುದು ಎಲ್ಲರಿಗೂ ಗೊತ್ತು.

      * ಕೆಲವರು ವಿದೇಶಗಳಲ್ಲಿ ಹೋಗಿ ನಮ್ಮ ದೇಶದ ಜೈಲುಗಳು ಸರಿ ಇಲ್ಲ, ಅಲ್ಲಿ ಇರಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಬ್ರಿಟಿಷರು ಮಹಾತ್ಮ ಗಾಂಧಿ ಅವರನ್ನು ಇಟ್ಟ ಜೈಲುಗಳಿಗಿಂತ ಉತ್ತಮವಾದ ಜೈಲುಗಳಿವೆ ಎಂದರು.

      * ಬಾಲಾಕೋಟ್ ದಾಳಿಯ ವಿಚಾರದಲ್ಲಿ ಪಾಕಿಸ್ತಾನ ಗೊಂದಲದಲ್ಲಿದೆ. ಈ ಬಗ್ಗೆ ಅವರು ಹೇಳಿಕೆ ನೀಡಿದರೆ ಅಲ್ಲಿ ಏನೋ ನಡೆಯುತ್ತಿತ್ತು ಎಂಬುದು ಸಾಬೀತಾಗುತ್ತದೆ. ಅದಕ್ಕೆ ಅವರು ಜಗತ್ತಿಗೆ ಅಲ್ಲೇನೂ ಇಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ. ಪಾಕಿಸ್ತಾನದ ಯಾರೂ ಆ ಪ್ರದೇಶಕ್ಕೆ ಭೇಟಿ ನೀಡುತ್ತಿಲ್ಲ.

      ಮೋದಿ ಸಂವಾದದ ವಿಡಿಯೋ ನೋಡಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+