ನಿತೀಶ್ ಕುಮಾರ್ ಪ್ರಶ್ನೆಗೆ ಮೋದಿ ಖಡಕ್ ಉತ್ತರ
ಪಾಟ್ನಾ, ಜುಲೈ, 25 :ರಾಜಕೀಯ ವಿರೋಧಿಗಳಾದ ನರೇಂದ್ರ ಮೋದಿ ಯೋಜನೆಗಳ ಚಾಲನೆಗೆ ಪಾಟ್ನಾಕ್ಕೆ ಆಗಮಿಸುವ ಮುನ್ನ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಪಕ್ಷದ ನಿತೀಶ್ ಕುಮಾರ್ ಮೋದಿ ಅವರಿಗೆ ಹಲವಾರು ಪ್ರಶ್ನೆಗಳ ಬಾಣ ಬಿಟ್ಟಿದ್ದಾರೆ.
ಬಳಿಕ ಪಾಟ್ನಾಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಟ್ನಾದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳಿಗೆ ಪಾಟ್ನಾದ ಪಶು ಸಂಗೋಪನಾ ಕಾಲೇಜಿನಲ್ಲಿ ಶನಿವಾರ ಚಾಲನೆ ನೀಡಿ, ಇವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ವೇದಿಕೆಯಲ್ಲಿ ಉತ್ತರ ನೀಡಿದ್ದಾರೆ. ಹಾಗಾದರೆ ನಿತೀಶ್ ಕುಮಾರ್ ಕೇಳಿದ್ದೇನು? ಮೋದಿ ಅವರು ಹೇಳಿದ್ದೇನು? ಇಲ್ಲಿದೆ ನೋಡಿ ಹೈಲೈಟ್ಸ್..[ದೇಶದ ಯುವಶಕ್ತಿಗೆ ಕೌಶಲ್ಯ ತುಂಬಿ ನವಸೈನ್ಯ ಕಟ್ಟಬೇಕಿದೆ']

ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ, ನಿತೀಶ್ ಕುಮಾರ್ ಕೇಳಿದ ಪ್ರಶ್ನೆಗಳು
ಅಧಿಕಾರ ಗದ್ದುಗೆ ಏರಿದ ಸಂದರ್ಭದಲ್ಲಿ ಹಿಂದೆ ನೀವು ನೀಡಿದ ಭರವಸೆಗಳಿಗೆ ಏನು ಉತ್ತರ ನೀಡುತ್ತೀರಿ? ಬಿಹಾರಕ್ಕೆ ವಿಶೆಷ ಮಾನ್ಯತೆ ನೀಡುತ್ತೇನೆ ಎಂದ ನಿಮ್ಮ ಹೇಳಿಕೆ ಎಲ್ಲಿಗೆ ಹೋಯ್ತು? ಕಪ್ಪುಹಣಕ್ಕೆ ಸಂಬಂಧಿಸಿದಂತೆ ಕೊಟ್ಟ ವಚನದ ಈಡೇರಿಕೆ ಏನಾಯ್ತು? ಭೂ ಸ್ವಾಧೀನ ಮಸೂದೆ ರೈತರಿಗೆ ಕೊಟ್ಟ ಉಡುಗೊರೆಯೇ?
ಸಮಾರಂಭದಲ್ಲಿ ಮೋದಿ ನೀಡಿದ ಉತ್ತರವೇನು?
* ನಾನು ಕೇವಲ ಯೋಜನೆಗಳನ್ನು ಮಾತ್ರ ಘೋಷಣೆ ಮಾಡುತ್ತಿಲ್ಲ, ಜೊತೆಗೆ ಮುಂಬರುವ ಉತ್ತಮ ಸಮಯದ ಕುರಿತಾಗಿ ಘೋಷಿಸುತ್ತಿದ್ದೇನೆ.
* ಜನತೆಗೆ ನೀಡಿದ ಯಾವುದೇ ಭರವಸೆಗಳನ್ನು ನಾನು ಮರೆತಿಲ್ಲ. ಎಲ್ಲವನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತಿದ್ದೇನೆ.
* ರಾಷ್ಟ್ರ ಅಭಿವೃದ್ದಿಯಾಗಬೇಕಾದರೆ ಮೊದಲು ರಾಜ್ಯಗಳು ಅಭಿವೃದ್ದಿಯಾಗಬೇಕು.
* ಅನಕ್ಷರತೆ ವಿರುದ್ದ ಹೋರಾಡಬೇಕಾದರೆ ಅಭಿವೃದ್ದಿ ಅವಶ್ಯಕವಾಗಿದೆ.
* ರಾಜ್ಯಗಳು ಅಭಿವೃದ್ದಿ ಪರ ವಿಚಾರಗಳನ್ನು ಸ್ಪರ್ಧಾತ್ಮಕವಾಗಿ ಅಳವಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
* ದೇಶದ ಎಲ್ಲಾ ಸಮಸ್ಯೆಗಳಿಗೆ ಅಭಿವೃದ್ದಿಯಿಂದ ಮಾತ್ರ ಪರಿಹಾರ ದೊರೆಯಲಿದೆ.
* ಚುನಾವಣೆ ಸಂದರ್ಭದಲ್ಲಿ 50,000 ಕೋಟಿ ಯೋಜನೆಗಳನ್ನು ಬಿಹಾರದಲ್ಲಿ ಸ್ಥಾಪಿಸುತ್ತೇನೆಂದು ಆಶ್ವಾಸನೆ ನೀಡಿದ್ದೆ. ಆದರೆ ಹೇಳಿರುವುದಕ್ಕಿಂತ ಹೆಚ್ಚಿನದಾಗಿಯೇ ಹಣವನ್ನು ತೊಡಗಿಸಲಿದ್ದೇನೆ.
* 14ನೇ ಹಣಕಾಸು ಸಚಿವಾಲಯವು 2015-2020ರ ಒಳಗೆ ಬಿಹಾರ 3.45 ಲಕ್ಷ ಕೋಟಿ ಲಾಭ ಪಡೆಯಲು ಸಹಾಯ ಮಾಡಲಿದೆ.
* ಬಿಹಾರದಲ್ಲಿ ಗ್ಯಾಸ್ ಸೇರಿದಂತೆ ಹಲವು ಪದಾರ್ಥಗಳು ಅಗ್ಗವಾಗಲಿದ್ದು, ಬಿಹಾರದ ಆರ್ಥಿಕತೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ.
* ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಜೊತೆಯಾಗಿ ಉತ್ತಮ ಸಮಾನವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ನಮ್ಮ ದೇಶ ಅಭಿವೃದ್ದಿ ಹೊಂದಿದ ದೇಶಗಳ ಸಾಲಿಗೆ ಸೇರಲಿದೆ.












Click it and Unblock the Notifications