ಬುಲೆಟ್ ರೈಲು ಟೀಕಿಸಿದವರಿಗೆ ಮೋದಿ ಕೊಟ್ಟ ಉತ್ತರ

ಬುಲೆಟ್ ರೈಲಿನ ಬಗ್ಗೆ ಟೀಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ. ಬುಲೆಟ್ ರೈಲು ಉದ್ಘಾಟನಾ ಸಮಾರಂಭದಲ್ಲಿ ಮೋದಿ ಮಾತು.

ಅಹ್ಮದಾಬಾದ್, ಸೆಪ್ಟೆಂಬರ್ 14: ಭಾರತ ಹಾಗೂ ಜಪಾನ್ ದೇಶಗಳ ಸಹಯೋಗದಲ್ಲಿ ನಿರ್ಮಾಣವಾಗಲಿರುವ ಬುಲೆಟ್ ರೈಲು ಮಾರ್ಗದ ಯೋಜನೆ ವಿರುದ್ಧ ದನಿ ಎತ್ತಿದವರಿಗೆ ಪ್ರಧಾನಿ ಮೋದಿ ಸೂಕ್ತ ಉತ್ತರ ನೀಡಿದ್ದಾರೆ.

ಗುರುವಾರ, ಇಲ್ಲಿ ನಡೆದ ಬುಲೆಟ್ ರೈಲು ಮಾರ್ಗದ ಶಿಲಾನ್ಯಾಸ ನೆರವೇರಿಸಿದ ಅವರು, ''ನಾನು ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ನಾನು ಅಹ್ಮದಾಬಾದ್ ಹಾಗೂ ಮುಂಬೈ ನಡುವಿನ ಬುಲೆಟ್ ರೈಲು ಯೋಜನೆ ಬಗ್ಗೆ ಆಗಾಗ ಪ್ರಸ್ತಾಪಿಸುತ್ತಿದ್ದೆ. ಈ ಹಿನ್ನೆಲೆಯಲ್ಲಿ, ಕೆಲವರು, ಆಗಾಗ ಬುಲೆಟ್ ರೈಲಿನ ಜಪ ಮಾಡುವ ಮೋದಿ, ಯಾವಾಗ ಅದನ್ನು ಭಾರತಕ್ಕೆ ತರುತ್ತಾರೋ ಎಂದು ಗೇಲಿ ಮಾಡಿದ್ದರು.

Prime Minister Modi On Bullet Train Critics Then And Now

ಈಗ, ನಾನು ಬುಲೆಟ್ ರೈಲನ್ನು ಭಾರತಕ್ಕೆ ತಂದಿದ್ದೇನೆ. ಆದರೂ, ನನ್ನನ್ನು ಗೇಲಿ ಮಾಡಿದವರ ಬಾಯಿ ಮುಚ್ಚಿಕೊಂಡಿಲ್ಲ. ಈಗಲೂ ಅವರು ನನ್ನನ್ನು ಗೇಲಿ ಮಾಡುತ್ತಿದ್ದಾರೆ. ಈಗ ಅವರ ವರಸೆ ಬದಲಾಗಿದೆ. ಈಗ ಅವರು ಭಾರತಕ್ಕೆ ಬುಲೆಟ್ ರೈಲು ಬರುವ ಅವಶ್ಯಕತೆಯಿತ್ತೇ ಎಂದು ಕೇಳುತ್ತಿದ್ದಾರೆ. ಅಂದು, ಯಾವಾಗ ಆ ರೈಲು ತರುತ್ತಾನೋ ಎಂದು ಹಲುಬಿದ್ದವರು, ಈಗ, ಇದು ಬೇಕಿತ್ತೇ ಎಂದು ಕೇಳುವುದು ಇಷ್ಟು ನ್ಯಾಯ ಸಮ್ಮತ'' ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+