ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಎರಡು ಅಪ್ರತಿಮ ಉಡುಗೊರೆಗಳು!

Posted By:
Subscribe to Oneindia Kannada

ಲೋಕಸಭಾ ಚುನಾವಣೆಯ ವೇಳೆ ಅಧಿಕಾರಕ್ಕೆ ಬರಲು ಇನ್ನಿಲ್ಲದ ಭರವಸೆ ನೀಡಿದ್ದ ನರೇಂದ್ರ ಮೋದಿ ಸರಕಾರದ ಇದುವರೆಗಿನ ಸಾಧನೆ ಶೂನ್ಯ ಎಂದು ಎಂದಿನಂತೆ ಕಾಂಗ್ರೆಸ್ ಲೇವಡಿ ಮಾಡಿದೆ.

ಮೋದಿ ಅಧಿಕಾರಕ್ಕೆ ಬಂದನಂತರ ದೇಶಕ್ಕೆ ಎರಡು ಅಪ್ರತಿಮ ಉಡುಗೊರೆಯನ್ನು ನೀಡಿದ್ದಾರೆ. ಒಂದು ಲಲಿತ್ ಮೋದಿ ಇನ್ನೊಂದು ವಿಜಯ್ ಮಲ್ಯ ಎಂದು ಕಾಂಗ್ರೆಸ್ ಎನ್ಡಿಎ ಸರಕಾರದ ವಿರುದ್ದ ಹರಿಹಾಯ್ದಿದೆ. (ಟಿಪ್ಪು ಖಡ್ಗ ತಂದ ಮಲ್ಯ ಗತಕಾಲದ ವೈಭವ)

ಮಲ್ಯ ಮತ್ತು ಲಲಿತ್ ಮೋದಿ ಇಬ್ಬರೂ ದೇಶ ಬಿಟ್ಟು ಹೋಗಿದ್ದಾರೆ. ಇಬ್ಬರ ವಿರುದ್ದವೂ ಎಫ್ ಐ ಆರ್ ದಾಖಲಾಗಿದ್ದರೂ, ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಇಬ್ಬರನ್ನು ದೇಶ ಬಿಟ್ಟು ಹೋಗಲು ಅನುವು ಮಾಡಿಕೊಟ್ಟಿತು ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುಜ್ರೇವಾಲ ಹೇಳಿದ್ದಾರೆ.

ಈ ಇಬ್ಬರು ಭಾರತೀಯರ ವಿರುದ್ದ ಲುಕ್ ಔಟ್ ನೋಟೀಸ್ ಜಾರಿಯಾಗಿದ್ದರೂ, ಇಬ್ಬರೂ ದೇಶ ಬಿಟ್ಟು ಹೋಗಿದ್ದಾರೆ. ಹಾಗಾಗಿ, ಮೋದಿ ಸರಕಾರದ ವಿರುದ್ದ ಅನುಮಾನ ಬರುವುದು ಸಹಜ ಎಂದು ಸುಜ್ರೇವಾಲ ಕಿಡಿಕಾರಿದ್ದಾರೆ.

ಶುಕ್ರವಾರ (ಮಾ 11) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸುಜ್ರೇವಾಲ, ಮಲ್ಯರಿಂದ ವಿವಿಧ ಬ್ಯಾಂಕುಗಳಿಗೆ ಬರಬೇಕಾಗಿರುವ ಕೋಟಿಗಟ್ಟಲೆ ಹಣವನ್ನು ಸರಕಾರ ಯಾವ ರೀತಿ ವಸೂಲಿ ಮಾಡುತ್ತದೆ ಎನ್ನುವುದನ್ನು ಹಣಕಾಸು ಸಚಿವಾಲಯ ದೇಶಕ್ಕೆ ತಿಳಿಸಲಿ ಸುಜ್ರೇವಾಲ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. (ಮಲ್ಯಗೂ ಮುಂಚೆ ದೇಶ ತೊರೆದವರು)

NRI ಪದಕ್ಕೆ ಕಾಂಗ್ರೆಸ್ ನೀಡಿದ ವಾಖ್ಯಾನ ಹೀಗಿದೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮೋದಿ ಸರಕಾರದ ಅಭಯಹಸ್ತ

ಮೋದಿ ಸರಕಾರದ ಅಭಯಹಸ್ತ

ನರೇಂದ್ರ ಮೋದಿ ಸರಕಾರದ ಅಭಯಹಸ್ತದಿಂದ ಇಬ್ಬರೂ ದೇಶ ಬಿಟ್ಟು ಹೋಗಿದ್ದಾರೆ. ಕೇಂದ್ರ ಸರಕಾರದ ಬೆಂಬಲವಿಲ್ಲದೇ ಇದು ಸಾಧ್ಯವಾಗುವುದಿಲ್ಲ. ಮೋದಿ 'ವಿಜಯ್ ಮಲ್ಯ ಮತ್ತು ಲಲಿತ್ ಮೋದಿ' ಎನ್ನುವ ಎರಡು ಗಿಫ್ಟ್ ಅನ್ನು ದೇಶಕ್ಕೆ ನೀಡಿದ್ದಾರೆ - ಕಾಂಗ್ರೆಸ್ ಮುಖಂಡ.

ಮಲ್ಯ ವಿರುದ್ದ ಎಫ್ ಐ ಆರ್

ಮಲ್ಯ ವಿರುದ್ದ ಎಫ್ ಐ ಆರ್

ಜುಲೈ 29, 2015ರಂದೇ ಸಿಬಿಐ ಮಲ್ಯ ವಿರುದ್ದ ಎಫ್ ಐ ಆರ್ ದಾಖಲಿಸಿತ್ತು. ಅಕ್ಟೋಬರ್ 12, 2015ಕ್ಕೆ ಎಲ್ಲಾ ವಿಚಾರಣೆ ಮುಗಿಸಿ, ಮಲ್ಯ ವಿರುದ್ದ ಲುಕ್ ಔಟ್ ನೋಟೀಸ್ ಜಾರಿ ಮಾಡಿತ್ತು - ರಣದೀಪ್ ಸುಜ್ರೇವಾಲ, ಕಾಂಗ್ರೆಸ್ ಮುಖಂಡ

ಎನ್ ಆರ್ ಐ

ಎನ್ ಆರ್ ಐ

ಲಲಿತ್ ಮೋದಿ ಮತ್ತು ಮಲ್ಯ ಕೇಸನ್ನು ಉಲ್ಲೇಖಿಸಿ NRI ಪದಕ್ಕೆ ಕಾಂಗ್ರೆಸ್ ನೀಡಿದ ವ್ಯಾಖ್ಯಾನ ಹೀಗಿದೆ. ಲಲಿತ್ ಮೋದಿ NRI - Non returning Indian ಮತ್ತು ವಿಜಯ್ ಮಲ್ಯ NRI - Non Re-paying Indian.

ಗುಲಾಂನಬಿ ಆಜಾದ್

ಗುಲಾಂನಬಿ ಆಜಾದ್

ವಿಜಯ್ ಮಲ್ಯ ದೇಶ ಬಿಟ್ಟು ಹೋಗಲು ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವಾಲಯವೇ ಕಾರಣ, ಸಿಬಿಐ ಕೇಸ್ ದಾಖಲಿಸಿದ್ದರೂ ಕೇಂದ್ರ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ನಿನ್ನೆ ಆರೋಪಿಸಿದ್ದರು.

ಮಲ್ಯ ಟ್ವೀಟ್

ನಾನೊಬ್ಬ ಅಂತರಾಷ್ಟ್ರೀಯ ಉದ್ಯಮಿ, ಭಾರತೀಯ ಜೊತೆಗೆ ರಾಜ್ಯಸಭಾ ಸದಸ್ಯ. ದೇಶ ಬಿಟ್ಟು ನಾನು ಓಡಿ ಹೋಗಿಲ್ಲ ಎಂದು ವಿಜಯ್ ಮಲ್ಯ ಸರಣಿ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress party alleged that PM Narendra Modi, who made tall claims prior to the Lok Sabha polls, has presented two gifts to the nation, i.e Lalit Modi and Vijay Mallya.
Please Wait while comments are loading...