ಪ್ರಾಥಮಿಕ ಶಿಕ್ಷಣದ ಕುರಿತು ಆರ್‌ಎಸ್‌ಎಸ್ ಮಹತ್ವದ ಹೇಳಿಕೆ
ನವದೆಹಲಿ, ಜುಲೈ, 7: ದೇಶದಲ್ಲಿ ಭಾಷ ವಿವಾದದ ಬೆನ್ನಲ್ಲೇ ಇದೀಗ ಆರ್‌ಎಸ್‌ಎಸ್ ಮಹತ್ವದ ಹೇಳಿಕೆಯೊಂದನ್ನು ನೀಡಿದೆ. ಪ್ರಾಥಮಿಕ ಶಿಕ್ಷಣವನ್ನು ಜನರು ತಮ್ಮ ಪ್ರದೇಶಗಳಲ್ಲಿ ಮಾತನಾಡುವ ಭಾಷೆಯಲ್ಲೇ ನೀಡಬೇಕು ಎಂದು ಹೇಳಿ ಗಮನ ಸೆಳೆದಿದೆ.
ಕೇಶವ ಕುಂಜ್‌ನಲ್ಲಿ ಇಂದು (ಜುಲೈ 7) ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಮಾತನಾಡಿ, ಸಂಘವು ಯಾವಾಗಲೂ ಭಾರತದ ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳೆಂದು ನಿಲುವು ಹೊಂದಿದೆ. ಜನರು ತಮ್ಮ ಸ್ವಂತ ಪ್ರದೇಶಗಳಲ್ಲಿ ತಮ್ಮ ಭಾಷೆಗಳನ್ನು ಮಾತನಾಡುತ್ತಾರೆ. ಆದ್ದರಿಂದ ಪ್ರಾಥಮಿಕ ಶಿಕ್ಷಣವನ್ನು ಅದೇ ಭಾಷೆಯಲ್ಲೇ ನೀಡಬೇಕು. ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ತ್ರಿಭಾಷಾ ನೀತಿಯನ್ನು ಹಿಂತೆಗೆದುಕೊಂಡ ನಂತರ ಈ ಹೇಳಿಕೆಯನ್ನು ನೀಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಪ್ರಕಾರ, ತ್ರಿಭಾಷಾ ನೀತಿಯನ್ನು ಜಾರಿ ಮಾಡಲಾಗಿದ್ದು. ಈ ನೀತಿಯು ವಿದ್ಯಾರ್ಥಿಗಳು ಶಾಲಾ ಶಿಕ್ಷಣದಲ್ಲಿ ಮೂರು ಭಾಷೆಗಳನ್ನು ಕಲಿಯುವುದನ್ನು ಕಡ್ಡಾಯಗೊಳಿಸುತ್ತದೆ. ಬಹುಭಾಷಾ ಪ್ರಜ್ಞೆಯನ್ನ ಉತ್ತೇಜಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಪ್ರಾದೇಶಿಕ ವೈವಿಧ್ಯತೆಯೊಂದಿಗೆ ಮತೋಲನ ಕಾಯ್ದುಕೊಳ್ಳುವುದು ಇದರ ಉದ್ದೇಶ ಆಗಿದೆ. ರಾಜ್ಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಭಾಷೆಗಳನ್ನು ಆಯ್ಕೆ ಮಾಡಲು ಅವಕಾಶ ಇದೆ ಎಂದು ಆರ್‌ಎಸ್‌ಎಸ್ ಹೇಳಿದೆ.
ಆದರೂ, ತಮಿಳುನಾಡು ಮತ್ತು ಕರ್ನಾಟಕದಂತಹ ದಕ್ಷಿಣ ರಾಜ್ಯಗಳು, ಈ ನೀತಿಯಿಂದ ಹಿಂದಿ ಮಾತನಾಡದ ವಿದ್ಯಾರ್ಥಿಗಳು ಹಿಂದಿ ಕಲಿಯಲೇಬೇಕು ಎಂದು ಒತ್ತಾಯಿಸುವಂತಿದೆ. ಇದರಿಂದ ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿಗಳಿಗೆ ಅಡ್ಡಿಪಡಿಸಿದಂತಾಗುತ್ತದೆ ಎಂದು ವಾದಿಸಿದ್ದವು. ಅಲ್ಲದೆ, ಈ ರಾಜ್ಯಗಳು ಪ್ರಾದೇಶಿಕ ಭಾಷೆ ಪ್ರಥಮ ಹಾಗೂ ಇಂಗ್ಲಿಷ್ ಅನ್ನು ದ್ವಿಭಾಷೆಯನ್ನಾಗಿ ಅಳವಡಿಕೆ ಮಾಡಿಕೊಂಡಿವೆ.
ಅಲ್ಲದೆ, ಸದ್ಯ ಸಂಘ ರಚನಾ ಹಿನ್ನೆಲೆ ದೇಶದಲ್ಲಿ 58,964 ಮಂಡಲಗಳು, 44,055 ವಸಾಹತುಗಳು ಇವೆ. ಹಿಂದೂ ಸಮ್ಮೇಳನಗಳಲ್ಲಿ ಸಾಮಾಜಿಕ ಹಬ್ಬಗಳು, ಸಾಮಾಜಿಕ ಏಕತೆ ಮತ್ತು ಸಾಮರಸ್ಯದ ವಿಷಯಗಳು, ಪಂಚ ಪರಿವರ್ತನವನ್ನು ಚರ್ಚೆ ಮಾಡಲಾಗುವುದು ಎಂದರು
ಅಲ್ಲದೆ, ಸಮಾಜದಲ್ಲಿ ಸಾಮರಸ್ಯವನ್ನು ಉತ್ತೇಜಿಸಲು 11,360 ಬ್ಲಾಕ್‌ಗಳಲ್ಲಿ ಸಾಮಾಜಿಕ ಸಾಮರಸ್ಯ ಸಭೆಗಳನ್ನು ಆಯೋಜನೆ ಮಾಡಲಾಗುವುದು. ಸಂಘದ ರಚನೆ ಪ್ರಕಾರ, ದೇಶದ 924 ಜಿಲ್ಲೆಗಳಲ್ಲಿ ಪ್ರಮುಖ ನಾಗರಿಕ ವಿಚಾರ ಸಂಕಿರಣಗಳನ್ನು ಆಯೋಜನೆ ಮಾಡಲಾಗುವುದು ಎಂದು ಹೇಳಿದರು.
ಪ್ರತಿ ಮನೆಗಳಿಗೆ ಭೇಟಿ ನೀಡಿ ಜನಸಂಪರ್ಕ ಕಾರ್ಯಕ್ರಮ ನಡೆಸಲಾಗುವುದು. ಶತಮಾನೋತ್ಸವ ವರ್ಷದ ಪ್ರಮುಖ ಗುರಿ ವೃತ್ತಿಗಳು, ಭೌಗೋಳಿಕ ಪ್ರದೇಶಗಳು ಮತ್ತು ಸಮುದಾಯಗಳಾದ್ಯಂತ ಸಮಗ್ರ ಸಾಮಾಜಿಕ ಏಕೀಕರಣವನ್ನು ಬೆಳೆಸುವುದು ಆಗಿದೆ. ಸಂಘದ ಶತಮಾನೋತ್ಸವ ವರ್ಷವು ವಿಜಯದಶಮಿ ಉತ್ಸವದಿಂದ ಪ್ರಾರಂಭ ಆಗಲಿದೆ. ವಿಜಯದಶಮಿ ದಿನದಂದು ಎಲ್ಲಾ ಸ್ವಯಂ ಸೇವಕರು ಉತ್ಸವದಲ್ಲಿ ಪಾಲ್ಗೊಳಲಿದ್ದಾರೆ ಎಂದು ಹೇಳಿದರು.
ಬೈಠಕ್‌ನಲ್ಲಿ ಮಣಿಪುರದ ಪ್ರಸ್ತುತ ಪರಿಸ್ಥಿತಿ, ಸ್ವಯಂಸೇವಕರು ಮಾಡುತ್ತಿರುವ ಕೆಲಸ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಮಾಡಲಾಗುತ್ತಿರುವ ಪ್ರಯತ್ನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗೆ ದೇಶಾದ್ಯಂತ ಒಟ್ಟು 100 ಪ್ರಶಿಕ್ಷಣ ವರ್ಗಗಳನ್ನು ನಡೆಸಲಾಗಿದೆ ಎಂದು ಹೇಳಿದರು.












Click it and Unblock the Notifications