Get Updates
Get notified of breaking news, exclusive insights, and must-see stories!

ರಾಷ್ಟ್ರಪತಿ ಚುನಾವಣೆ; ಮತ ಎಣಿಕೆ ಕೇಂದ್ರಕ್ಕೆ ಯಾರಿಗೆ ಪ್ರವೇಶ?

ನವದೆಹಲಿ, ಜುಲೈ, 21: ಸಂಸತ್ ಭವನದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಭಾರತದ 15ನೇ ರಾಷ್ಟ್ರಪತಿ ಯಾರು? ಎಂಬುದು ಸಂಜೆಯ ವೇಳೆಗೆ ತಿಳಿಯಲಿದೆ.

ಜುಲೈ 18 ರಂದು ಸಂಸತ್ ಭವನದಲ್ಲಿ ಮತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರಪತಿ ಚುನಾವಣೆ ಮತದಾನ ನಡೆದಿತ್ತು. ಸಂಸತ್ ಭವನದ ಕೊಠಡಿ ಸಂಖ್ಯೆ 63ರಲ್ಲಿ ಮತ ಎಣಿಕೆ ಗುರುವಾರ ನಡೆಯಲಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ. ಅಂಕಿಸಂಖ್ಯೆಗಳ ಲೆಕ್ಕಾಚಾರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.

Presidential Election: Preparations for counting of votes in Parliament House

736ರಲ್ಲಿ 728 ಮತದಾರರು ಮತ ಚಲಾಯಿಸಿದ್ದಾರೆ. ಸಂಸತ್ ಭವನದಲ್ಲಿ ಶೇಕಡಾ 98.91ರಷ್ಟು ಮತದಾನವಾಗಿತ್ತು. ಮತದಾನ ನಡೆದ ರಾಜ್ಯಗಳಿಂದ ಮತ ಪೆಟ್ಟಿಗೆಗಳನ್ನು ಸಂಸತ್ ಭವನಕ್ಕೆ ತರಲಾಗಿದೆ.

ಮತ ಎಣಿಕೆ ಹಿನ್ನೆಲೆ ಸಂಸತ್ ಭವನದ ಕೊಠಡಿ ಸಂಖ್ಯೆ 63ರಲ್ಲಿ ಹಾಗೂ ಅಲ್ಲಿನ ಆವರಣವನ್ನು ಸ್ಯಾನಿಟೈಸ್ ಮಾಡಿದ್ದು, ಸೂಕ್ತ ಭದ್ರತೆಯನ್ನು ಕಲ್ಪಿಸಲಾಗಿದೆ. ಮತ ಎಣಿಕೆ ಅಧಿಕಾರಿಗಳು, ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ, ಅಭ್ಯರ್ಥಿಗಳು ಮತ್ತು ಪ್ರತಿ ಅಭ್ಯರ್ಥಿಯ ಒಬ್ಬ ಅಧಿಕೃತ ಪ್ರತಿನಿಧಿ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಬಹುದು.

ಚುನಾವಣಾ ಆಯೋಗದಿಂದ ನೇಮಕಗೊಂಡ ವೀಕ್ಷಕರಿಗೆ ಸಹಾಯ ಮಾಡಲು ನಿಯೋಜಿಸಲಾದ ಅಧಿಕಾರಿಗಳು ಮಾತ್ರ ಆವರಣ ಪ್ರವೇಶಿಸಲು ಅವಕಾಶವಿದೆ. ಪಾಸ್‌ಗಳನ್ನು ಹೊಂದಿರುವ ಆಯೋಗ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಮತ ಎಣಿಕೆ ಹಾಲ್‌ಗೆ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ.

ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ. ಸಿ. ಮೋದಿ ಚುನಾವಣಾಧಿಕಾರಿ. ಚುನಾವಣಾ ಫಲಿತಾಂಶದ ಲೀಡ್ ಮುಂತಾದ ಮಾಹಿತಿಗಳನ್ನು ಅವರೇ ವಿವರಿಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+