ರಾಷ್ಟ್ರಪತಿ ಚುನಾವಣೆ: ಸೋಲಿನಲ್ಲೂ ಮೀರಾ ಕುಮಾರ್ ದಾಖಲೆ
ರಾಷ್ಟ್ರಪತಿ ಚುನಾವಣೆಯಲ್ಲಿ ಸೋತ ಮೀರಾ ಕುಮಾರ್ ಅವರಿಂದ ದಾಖಲೆ. ಐವತ್ತು ವರ್ಷಗಳಷ್ಟು ಹಿಂದಿನ ದಾಖಲೆ ಮುರಿದ ಮೀರಾ ಕುಮಾರ್. ಮೀರಾ 3. 67 ಲಕ್ಷದಷ್ಟು ಮತ ಮೌಲ್ಯ ಗಳಿಸಿ ಆ ದಾಖಲೆ ಮುರಿದ್ದಾರೆ.
ನವದೆಹಲಿ, ಜುಲೈ 21: ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಸೋಲು ಕಂಡರೂ, ಕಾಂಗ್ರೆಸ್
ಅಭ್ಯರ್ಥಿ ಮೀರಾ ಕುಮಾರ್ 50 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ.
ಕಳೆದ 50 ವರ್ಷಗಳಿಂದ ಈಚೆಗೆ ರಾಷ್ಟ್ರಪತಿ ಚುನಾವಣೆಗಳಲ್ಲಿ ಸೋತ ಅಭ್ಯರ್ಥಿಗಳು ಗಳಿಸಿದ ಮತ ಮೌಲ್ಯಗಳಲ್ಲಿ ಅತಿ ಹೆಚ್ಚು ಮೌಲ್ಯ ಗಳಿಸಿದ ಹೆಗ್ಗಳಿಕೆ ಈಗ ಮೀರಾ ಅವರ ಪಾಲಾಗಿದೆ.

1967ರಲ್ಲಿ ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಜಾಕಿರ್ ಹುಸೇನ್ ವಿರುದ್ಧ ಭಾರತದ ಮುಖ್ಯ ನ್ಯಾಯಾಧೀಶರಾದ ಕೋಕಾ ಸುಬ್ಬಾರಾವ್ ಎಂಬುವರು ಸ್ಪರ್ಧಿಸಿದ್ದರು. ಈ ಸ್ಪರ್ಧೆಯಾಗಿಯೇ ಅವರು ತಮ್ಮ ನ್ಯಾಯಾಧೀಶರ ಹುದ್ದೆಗೆ ರಾಜಿನಾಮೆ ಸಲ್ಲಿಸಿ ಚುನಾವಣಾ ಕಣಕ್ಕೆ ಧುಮುಕಿದ್ದರು.
ಜಾಕಿರ್ ವಿರುದ್ಧ ಅವರು ಸೋತರಾದರೂ, ಅವರು ಆಗ ಗಳಿಸಿದ ಮತ ಮೌಲ್ಯ 3.63 ಲಕ್ಷದಷ್ಟಿತ್ತು.
ಇದೀಗ, ಮೀರಾ ಅವರು 3.67 ಲಕ್ಷದಷ್ಟು ಮತ ಮೌಲ್ಯ ಪಡೆಯುವ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ.












Click it and Unblock the Notifications