ಪಾರ್ಲಿಮೆಂಟ್ ಕಟ್ಟಡ ಉದ್ಘಾಟನೆ: ರಾಜಕೀಯ ಬಿಟ್ಟು ಕಾರ್ಯಕ್ರಮಕ್ಕೆ ಬನ್ನಿ ಎಂದು ಮನವಿ ಮಾಡಿದ ಪ್ರಲ್ಹಾದ್ ಜೋಶಿ
ನವದೆಹಲಿ, ಮೇ 24: ನೂತನ ಪಾರ್ಲಿಮೆಂಟ್ ಬಿಲ್ಡಿಂಗ್ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗುವಂತೆ ವಿರೋಧ ಪಕ್ಷಗಳ ನಾಯಕರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಯಕ್ರಮ ತಪ್ಪಿಸಿಕೊಳ್ಳುವ ವಿಪಕ್ಷ ನಾಯಕರ ಧೋರಣೆ ಸರಿಯಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದರು.
ನಿಯಮದ ಪ್ರಕಾರ ಪಾರ್ಲಿಮೆಂಟ್ ಕಟ್ಟಡವನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡಬೇಕು, ಆದರೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುತ್ತಿರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕಾರ್ಯಕ್ರಮ ಬಹಿಷ್ಕರಿಸಿವೆ. ಈ ಬಗ್ಗೆ ಮಾತನಾಡಿದ ಅವರು, ಪಾರ್ಲಿಮೆಂಟ್ ಉದ್ಘಾಟನೆ ವಿಚಾರದಲ್ಲಿ ಕೂಡ ವಿಪಕ್ಷಗಳು ರಾಜಕೀಯ ಮಾಡೋದು ಸರಿಯಲ್ಲ ಎಂದು ಮನವಿ ಮಾಡಿದರು.

ಪ್ರಧಾನಿ ಮೋದಿ ಅವರಿಗೆ ಲೋಕಸಭೆ ಸ್ಪೀಕರ್ ಅವರೇ ಉದ್ಘಾಟನೆಗೆ ಆಹ್ವಾನಿಸಿದ್ದಾರೆ. ಸ್ಪೀಕರ್ ಅವರನ್ನ ಕಸ್ಟೋಡಿಯನ್ ಆಫ್ ದಿ ಪಾರ್ಲಿಮೆಂಟ್ ಎಂದು ಕರೆಯಲಾಗುತ್ತೆ. ಹೀಗಿರುವಾಗ ಸ್ಪತಃ ಸ್ಪೀಕರ್ ಅವರೇ ಪ್ರಧಾನಿ ಅವರಿಗೆ ಉದ್ಘಾಟನೆಗೆ ಆಹ್ವಾನಿಸಿರುವದರಲ್ಲಿ ತಪ್ಪೇನಿದೆ.
ಅಲ್ಲದೇ ಪ್ರಧಾನಿ ಮೋದಿ ಅವರು ಲೋಕಸಭೆಯ ಸಭಾ ನಾಯಕರಾಗಿರುತ್ತಾರೆ. ಇದರಲ್ಲಿ ರಾಷ್ಟ್ರಪತಿಗಳನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ವಿಪಕ್ಷಗಳು ಅನಗತ್ಯ ವಿಚಾರ ಮುಂದಿಟ್ಟು ರಾಜಕೀಯ ಮಾಡುತ್ತೇವೆ ಎನ್ನುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ರಾಜಕೀಯ ಮಾಡಲು ಸಾಕಷ್ಟು ವಿಚಾರಗಳಿವೆ. ಇಂಥಹ ಐತಿಹಾಸಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾಡದೇ ವಿಪಕ್ಷ ನಾಯಕರು ಕಾರ್ಯಕ್ರಮಕ್ಕೆ ಹಾಜರಾಗುವುದು ಸೂಕ್ತ. ಈ ನಿಟ್ಟಿನಿಲ್ಲಿ ವಿಪಕ್ಷಗಳ ನಾಯಕರು ಇನ್ನೊಮ್ಮೆ ಯೋಚಿಸಿ ತಮ್ಮ ನಿಲುವನ್ನ ಬದಲಿಸಿಕೊಳ್ಳಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದರು.
ಸಂಪೂರ್ಣ ಡಿಜಿಲೀಕರಣದತ್ತ ಸಾಗುತ್ತಿದೆ ಭಾರತದ ಶಾಸಕಾಂಗ
ರಾಷ್ಟ್ರೀಯ ಇ- ವಿಧಾನ್ ಅಪ್ಲಿಕೇಶನ್ (NeVA) ಎರಡು ದಿನಗಳ ಕಾರ್ಯಾಗಾರಕ್ಕೆ ಇಂದು ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ರಾಷ್ಟ್ರೀಯ ಇ ವಿಧಾನ್ ಯೋಜನೆ ಪ್ರಜಾಪ್ರಭುತ್ವವನ್ನು ಜನರ ಮನೆ ಮನೆಗೆ ತಲುಪಿಸುವ ಮೂಲಕ ಪ್ರಜೆಗಳೇ ರಾಜರು ಎಂಬ ಈ ವ್ಯವಸ್ಥೆಯ ಮೂಲ ಆಶಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದರು.
ಒಂದು ದೇಶ - ಒಂದು ಅಪ್ಲಿಕೇಶನ್ (ಒನ್ ನೇಶನ್ - ಒನ್ ಅಪ್ಲಿಕೇಶನ್) ಎಂಬ ಉದ್ದೇಶದಿಂದ ತಯಾರಿಸಿರುವ ರಾಷ್ಟ್ರೀಯ ಇ- ವಿಧಾನ್ ತಂತ್ರಾಂಶ ಸಂಸತ್ತಿನ ಅನೇಕ ಪ್ರಕ್ರಿಯೆಗಳನ್ನು ಡಿಜಿಟಲ್ ಮಾಧ್ಯಮಕ್ಕೆ ರೂಪಾಂತರಿಸಿ, ಇ-ಕಚೇರಿಯ ಮೂಲಕ ಆಡಳಿತಕ್ಕೆ ಹೊಸ ವೇಗ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ದೇಶದ 21 ರಾಜ್ಯಗಳು ರಾಷ್ಟ್ರೀಯ ಇ- ವಿಧಾನ್ ಅಪ್ಲಿಕೇಶನ್ ಮೂಲಕ ಪೇಪರ್ ಲೆಸ್ ಶಾಸಕಾಂಗ ಕಾರ್ಯವಿಧಾನಗಳನ್ನ ನಡೆಸಲು ಮುಂದಾಗಿವೆ. 19 ರಾಜ್ಯಗಳು ಒಪ್ಪಂದಕ್ಕೆ ಸಹಿಹಾಕಿದ್ದು, ಈಗಾಗಲೇ 17 ರಾಜ್ಯಗಳಿಗೆ ನೆವಾ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಲಾಗಿದೆ.
ನೇವಾ ಯೋಜನೆ ಜಾರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ ಶಾಸಕಾಂಗಗಳಿಗೆ ಅಗತ್ಯ ಸಹಕಾರ ಹಾಗೂ ಮಾರ್ಗದರ್ಶನ ನೀಡಲು ಉತ್ಸುಕವಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.












Click it and Unblock the Notifications