Prakash Raj: ವಿಭಿನ್ನ ಆಹಾರ - ವಿಭಿನ್ನ ರುಚಿಯೊಂದಿಗೆ ಸೌಹಾರ್ದತೆಯಿಂದ ಬದುಕೋಣ: ನಟ ಪ್ರಕಾಶ್ ರಾಜ್ ಟ್ವೀಟ್ ವೈರಲ್

Prakash Raj: ನಟ ಪ್ರಕಾಶ್ ರಾಜ್ ಅವರು ಆಹಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಕೇರಳ ಸ್ಟೋರಿ 2 ಸಿನಿಮಾವೂ ಕೇರಳದಲ್ಲಿ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ದೇಶದಾದ್ಯಂತ ಪರ - ವಿರೋಧ ಚರ್ಚೆಗಳು ನಡೆದಿವೆ. ಈ ಸಿನಿಮಾದಲ್ಲಿ ಒತ್ತಾಯ ಪೂರ್ವಕವಾಗಿ ಬೀಫ್‌ ತಿನ್ನಿಸುವ ದೃಶ್ಯವಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಭಾನುವಾರ ಆಹಾರ ಹಾಗೂ ಅಭಿರುಚಿಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿದ್ದ ಬಹುಭಾಷಾ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರು ಸೋಮವಾರ, ಅವರವರ ಆಹಾರ ಅವರ ಆಯ್ಕೆ ನಾವು ಎಲ್ಲರೂ ಒಟ್ಟಾಗಿ ಒಂದು ಸಮಾಜವಾಗಿ ಸೌಹಾರ್ದತೆಯಿಂದ ಬದುಕುತ್ತಾ ಮುಂದುವರಿಯೋಣ ಎಂದು ಹೇಳಿದ್ದಾರೆ.

ನಟ ಪ್ರಕಾಶ್ ರಾಜ್ ಅವರು ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡುತ್ತಿರುವ ಟ್ವೀಟ್‌ಗಳು ಭಾರೀ ವೈರಲ್ ಆಗುತ್ತಿವೆ. ಇದೇ ಸಂದರ್ಭದಲ್ಲಿ ಈ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಪರ - ವಿರೋಧ ಚರ್ಚೆಗಳು ಸಹ ನಡೆದಿವೆ.

Prakash Raj Viral Different Foods One Society Prakash Raj s Tweet on Harmony and Food Choices Goes Viral

ನಟ ಪ್ರಕಾಶ್‌ ರಾಜ್ ಟ್ವೀಟ್‌ನಲ್ಲಿ ಏನಿದೆ

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಜನರ ಆಹಾರ ಅಭಿರುಚಿಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನ ಸಾರಾಂಶ ಈ ರೀತಿ ಇದೆ. Why Complicate when it is so Simple #justasking / ತುಂಬಾ ಸಿಂಪಲ್ ಆಗಿದ್ದಾಗ ಕಾಂಪ್ಲಿಕೇಶನ್ ಯಾಕೆ ಮಾಡಬೇಕು #justasking ಎನ್ನುವ ಶೀರ್ಷಿಕೆಯೊಂದಿಗೆ ಅವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ವೀಗನ್‌ಗಳು, ಶಾಕಾಹಾರಿಗಳು,
ಎಗ್‌ಟೇರಿಯನ್ನರು,
ಹಂದಿ ಮಾಂಸ ತಿನ್ನದ ಮಾಂಸಾಹಾರಿಗಳು,
ಹಸು ಮಾಂಸ ತಿನ್ನದ ಮಾಂಸಾಹಾರಿಗಳು,
ಎಲ್ಲಾ ವಿಧದ ಮಾಂಸ ತಿನ್ನುವವರು,
ಮೀನು ಮಾತ್ರ ತಿನ್ನುವವರು -

ನಾವು ಎಲ್ಲರೂ ಒಟ್ಟಾಗಿ ಸಮಾಜವಾಗಿ
ಸೌಹಾರ್ದತೆಯಿಂದ ಬದುಕುತ್ತಾ ಮುಂದುವರಿಯೋಣ. 🤝 ಎಂದು ನಟ ಪ್ರಕಾಶ್ ರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಟ್ವೀಟ್‌ಗೂ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೆಟ್ಟಿಗರು ಹೇಳಿದ್ದೇನು ?

ಇನ್ನು ಸೋಷಿಯಲ್ ಮೀಡಿಯಾದಲ್ಲಿ ನಟ ಪ್ರಕಾಶ್‌ ರಾಜ್ ಅವರ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಟ ಪ್ರಕಾಶ್ ರಾಜ್ ಅವರಿಗೆ ಬೆಂಬಲ ಸೂಚಿಸಿದರೆ ಇನ್ನೂ ಕೆಲವರು ಇದರಲ್ಲಿ ಭಾಷಾ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ನೀವು ಮೊದಲು ಬೀಫ್‌ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಿರಿ. ಅದಕ್ಕೆ ವಿರೋಧ ವ್ಯಕ್ತವಾದ ಮೇಲೆ ಈ ರೀತಿಯ ಪೋಸ್ಟ್‌ ಮಾಡಿದ್ದೀರಿ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರೊಬ್ಬರು ಅದರಂತೆಯೇ ಭಾಷೆಗಳಲ್ಲಿಯೂ ಸಾಮರಸ್ಯವನ್ನು ಮೂಡಿಸಿ. ಇದು ತುಂಬಾ ಸರಳವಾಗಿದೆ. ಹಿಂದಿ, ಇಂಗ್ಲಿಷ್, ತಮಿಳು, ಮಲಯಾಳಂ, ಕನ್ನಡ, ತೆಲುಗು ಎಲ್ಲವೂ ಸುಂದರ ಭಾಷೆಯೇ, ಹಿಂದಿಯ ಮೇಲೆ ದ್ವೇಷ ಏಕೆ. ಸಾಮರಸ್ಯದಿಂದ ಒಟ್ಟಾಗಿ ಸಮಾಜವಾಗಿ ಬದುಕುವುದನ್ನು ಮುಂದುವರಿಸಿ ಸರಿಯೇ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+