ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2025ರ ವೇಳೆಗೆ ಭಾರತದಲ್ಲಿ ಕ್ಷಯ ನಿರ್ಮೂಲನೆ: ಅಭಿಯಾನ ಪ್ರಾರಂಭಿಸಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಸೆ.12: ದೇಶದಲ್ಲಿ 2025ರ ವೇಳೆಗೆ ಕ್ಷಯ ರೋಗದಿಂದ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವ ಸರ್ಕಾರ ಸೋಮವಾರ ʻಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನʼ ಪ್ರಾರಂಭಿಸಿದೆ.

ಈ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿ-ಕ್ಷಯ 2.0 (Ni-kshay 2.0) ಪೋರ್ಟಲ್ ಪ್ರಾರಂಭಿಸಿದ್ದಾರೆ. ಪೋಷಣೆ, ಹೆಚ್ಚುವರಿ ರೋಗ ಪತ್ತೆ ಮತ್ತು ವೃತ್ತಿಪರ ಬೆಂಬಲ ನೀಡುವುದು ನಿ-ಕ್ಷಯ 2.0 ಪೋರ್ಟಲ್ ನ ಉದ್ದೇಶವಾಗಿದೆ.

ಸ್ವಸ್ಥ ಭಾರತದ ಸಂಕಲ್ಪ ತೊಟ್ಟಿರುವ ಪ್ರಧಾನಿ ಮೋದಿ ಸರ್ಕಾರ, 2025ರ ವೇಳೆಗೆ ದೇಶವನ್ನು ಕ್ಷಯ ಮುಕ್ತಗೊಳಿಸಲು 'ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನʼವನ್ನು ಪ್ರಾರಂಭಿಸಿದೆ.

Pradhan Mantri TB Mukt Bharat Abhiyaan launched

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವರ್ಚುವಲ್ ಈವೆಂಟ್ ಮೂಲಕ ಸೆಪ್ಟೆಂಬರ್ 9 ರಂದು 'ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ'ಕ್ಕೆ ಚಾಲನೆ ನೀಡಿದ್ದರು. ಇದರ ಉದ್ದೇಶ 2025 ರ ವೇಳೆಗೆ ಟಿಬಿ ನಿರ್ಮೂಲನೆ ಮಾಡವುದು. ಜನರು ಈ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿ ಕ್ಷಯ ನಿವಾರಣೆಗೆ ಸಾಮೂಹಿಕವಾಗಿ ಕೆಲಸ ಮಾಡಲು ರಾಷ್ಟ್ರಪತಿಗಳು ನಾಗರಿಕರನ್ನು ವಿನಂತಿಸಿದರು.

ಈ ವೇಳೆ ನಿ-ಕ್ಷಯ್ 2.0 ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಿ.ಆರ್. ಮನ್ಸುಕ್ ಮಾಂಡವಿಯಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಜೊತೆಗೆ ಕೇಂದ್ರ ಸಚಿವರು, ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು, ರಾಜ್ಯ ಆರೋಗ್ಯ ಸಚಿವರು ಮತ್ತು ಇತರ ಗಣ್ಯರು ಈ ಅಭಿಯಾನ ಚಾಲನೆ ವೇಳೆ ಸಾಥ್ ನೀಡಿದ್ದರು.

ಟಿಬಿ ಮುಕ್ತ ಭಾರತ ಅಭಿಯಾನದಲ್ಲಿ ರಾಜ್ಯ ಮತ್ತು ಜಿಲ್ಲಾ ಆರೋಗ್ಯ ಆಡಳಿತಗಳು, ಕಾರ್ಪೊರೇಟ್‌ಗಳು, ಕೈಗಾರಿಕೆಗಳು, ನಾಗರಿಕ ಸಮಾಜ, ಎನ್‌ಜಿಒಗಳು ಮತ್ತು ಟಿಬಿ ಚಾಂಪಿಯನ್‌ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Pradhan Mantri TB Mukt Bharat Abhiyaan launched

*ನಿ-ಕ್ಷಯ್ ಮಿತ್ರ ಉಪಕ್ರಮ ಎಂದರೇನು?*

ಟಿಬಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಹೆಚ್ಚುವರಿ ರೋಗನಿರ್ಣಯ, ಪೌಷ್ಟಿಕಾಂಶ ಮತ್ತು ವೃತ್ತಿಪರ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ನಿ-ಕ್ಷಯ್ ಮಿತ್ರ ಉಪಕ್ರಮವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮ ಪ್ರಾರಂಭಿಸಿದರು. ನಿ-ಕ್ಷಯ್ 2.0 ಪೋರ್ಟಲ್ ಟಿಬಿ ರೋಗಿಗಳ ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು, ಹೆಚ್ಚುವರಿ ರೋಗಿಗಳಿಗೆ ಬೆಂಬಲವನ್ನು ಒದಗಿಸುವಲ್ಲಿ ಸರಾಗವಾಗಿಸುತ್ತದೆ.

2025 ರ ವೇಳೆಗೆ ಟಿಬಿಯನ್ನು ನಿರ್ಮೂಲನೆಗೊಳಿಸುವ ಭಾರತದ ಬದ್ಧತೆಯನ್ನು ಪೂರೈಸುವಲ್ಲಿ ಸಮುದಾಯದ ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅವಕಾಶಗಳನ್ನು ಬಳಸಿಕೊಳ್ಳಲಾಗುತ್ತದೆ.

ಉನ್ನತ ಮಟ್ಟದ ಬದ್ಧತೆ ಯೊಂದಿರುವ ರಾಷ್ಟ್ರೀಯ ಟಿಬಿ ಎಲಿಮಿನೇಷನ್ ಪ್ರೋಗ್ರಾಂ (ಎನ್‌ಟಿಇಪಿ) ಮೂಲಕ ಭಾರತದ ತ್ವರಿತ ಪ್ರಗತಿಯನ್ನು ಎತ್ತಿ ತೋರಿಸಿದೆ. ಸಾಂಕ್ರಾಮಿಕ ರೋಗವನ್ನು ನಿವಾರಿಸುವಲ್ಲಿ ಆರೋಗ್ಯ ಕಾರ್ಯಕರ್ತರು, ಸಮುದಾಯದ ಮುಖಂಡರು ಮತ್ತು ವ್ಯಕ್ತಿಗಳ ದಣಿವರಿಯದ ಪ್ರಯತ್ನಗಳನ್ನು ರಾಷ್ಟ್ರಪತಿ ಮುರ್ಮು ಶ್ಲಾಘಿಸಿದರು. ದೇಶದಿಂದ ಟಿಬಿಯನ್ನು ನಿರ್ಮೂಲನೆ ಮಾಡಲು ಇದೇ ವಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಮಾಡಿದ ಪ್ರಗತಿಯೊಂದಿಗೆ, ಬಲವರ್ಧಿತ ಆರೋಗ್ಯ ವ್ಯವಸ್ಥೆಯ ಪ್ರಮುಖ ಪಾತ್ರವು ಟಿಬಿ ನಿರ್ಮೂಲನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಗುಣಪಡಿಸಬಹುದಾದ ಕಾಯಿಲೆಯಾದ ಟಿಬಿಯ ಚಿಕಿತ್ಸೆಯು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದೆ.

ಚುನಾಯಿತ ಪ್ರತಿನಿಧಿಗಳು, ಕಾರ್ಪೊರೇಟ್‌ಗಳು, ಎನ್‌ಜಿಒಗಳು ಟಿಬಿಯಿಂದ ಬಳಲುತ್ತಿರುವ ಜನರು ಚೇತರಿಕೆಯತ್ತ ಹೋಗಲು ಸಹಾಯ ಮಾಡಲು ದಾನಿಗಳಾಗಿ ಮುಂದೆ ಬರುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರೇರೇಪಿಸಿದರು.

English summary
Pradhan Mantri TB Mukt Bharat Abhiyaan launched to eradicate Tuberculosis (TB) by 2025. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X