ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರಕಾರದ ಪವರ್ ಸ್ಟಾರ್, ವಿದ್ಯುತ್ ಕ್ಷೇತ್ರದಲ್ಲಿ ಬರುತ್ತಿದೆ ಅಚ್ಚೇದಿನ್

By ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ
|
Google Oneindia Kannada News

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲೋಕಸಭಾ ಚುಣಾವಣೆಯ ಸಂದರ್ಭದಲ್ಲಿ ಘೋಷಿಸಿದ್ದ ಅಚ್ಚೇ ದಿನ್ ಭರವಸೆಯನ್ನು ಪೂರ್ಣಗೊಳಿಸುವತ್ತ ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯೆಲ್ ಮುಂದಡಿಯಿಟ್ಟಿದ್ದಾರೆ.

ಎಪ್ರಿಲ್ 2015ರಲ್ಲಿ ಇಂಧನ ಇಲಾಖೆ ಸಂಗ್ರಹಿಸಿದ ಮಾಹಿತಿ ಪ್ರಕಾರ ಒಟ್ಟು 19 ರಾಜ್ಯಗಳ 18,452 ಹಳ್ಳಿಗಳಿಗೆ ಇನ್ನೂ ವಿದ್ಯುತ್ ತಲುಪಿರಲಿಲ್ಲ. ಪ್ರಧಾನ ಮಂತ್ರಿಗಳು 1000 ದಿನಗಳಲ್ಲಿ ಈ ಹಳ್ಳಿಗಳಿಗೆ ವಿದ್ಯುತ್ ನೀಡಬೇಕೆಂದು ಇಂಧನ ಸಚಿವರ ಬಳಿ ಮನವಿಯಿಟ್ಟಿದ್ದರು. (ಜನವರಿ 2016ರಿಂದ ಲೋಡ್ ಶೆಡ್ಡಿಂಗ್ ಇಲ್ಲ)

ಅದನ್ನು ಪ್ರತಿಜ್ಞೆಯಾಗಿ ಸ್ವೀಕರಿಸಿ, 730 ದಿನಗಳಲ್ಲಿ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ತಲುಪಿಸುವ ಗುರಿ ಇರಿಸಿಕೊಂಡಿರುವ ಗೋಯೆಲ್ ಆ ಕೂಡಲೇ ಕಾರ್ಯ ಆರಂಭಿಸಿದ್ದಾರೆ. ನಿಗದಿತ ಯೋಜನೆ ಪ್ರಕಾರ ದಿನಕ್ಕೆ 100 ರಿಂದ 120 ಹಳ್ಳಿಗಳಿಗೆ ಹೊಸದಾಗಿ ವಿದ್ಯುತ್ ಒದಗಿಸಲಾಗುತ್ತಿದೆ.

ಸಚಿವ ಪಿಯೂಷ್ ಗೋಯೆಲ್ ಪ್ರಕಾರ, ಒಂದು ಯೂನಿಟ್ ವಿದ್ಯುತ್ ಉಳಿಸಿದರೆ ಅದು 1.3 ಯೂನಿಟ್ ತಯಾರಿಸಿದಂತೆ. ಈ ನಿಟ್ಟನಲ್ಲಿ ವಿದ್ಯುತ್ ಉಳಿಸಲು LED ಬಲ್ಬುಗಳ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ.

ಒಂದು ಬಲ್ಬು ಕೇವಲ 100 ರೂ ದರದಲ್ಲಿ ದೇಶದ ನಾಗರೀಕರಿಗೆ ಒದಗಿಸುವ ಮೂಲಕ ಪ್ರಸ್ತುತ ಭಾರತದಾದ್ಯಂತ ಇರುವ 770 ಬಿಲಿಯನ್ ಬಲ್ಬುಗಳನ್ನು LEDಗೆ ಬದಲಾಯಿಸಬೇಕೆಂಬುದು ಇಂಧನ ಸಚಿವರ ಅಭಿಪ್ರಾಯ .

ಯಾಕೆಂದರೆ ಆ ಮೂಲಕ ಸರಿ ಸುಮಾರು 100 ಬಿಲಿಯನ್ ಯೂನಿಟ್ ವಿದ್ಯುತ್ ಉಳಿತಾಯವಾಗುವ ಸಾಧ್ಯತೆ ಇದೆ. ಇದನ್ನು ಇನ್ನೂ ವಿದ್ಯುತ್ ತಲುಪದ ಹಳ್ಳಿಗಳಿಗೆ ವಿಸ್ತರಿಸಲು ಉಪಯೋಗಿಸಬಹುದು ಎನ್ನುವುದು ಸಚಿವರ ದೂರಾಲೋಚನೆ.

ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿರುವ ಪಿಯೂಸ್ ಗೋಯೆಲ್, ಸಾಧನೆಯ ಬಗ್ಗೆ ಸ್ಲೈಡಿನಲ್ಲಿ ಓದುವುದನ್ನು ಮುಂದುವರಿಸಿ..

ರಾಜಸ್ಥಾನ ರಾಜ್ಯದಲ್ಲಿನ ಕ್ರಾಂತಿ

ರಾಜಸ್ಥಾನ ರಾಜ್ಯದಲ್ಲಿನ ಕ್ರಾಂತಿ

ರಾಜಸ್ಥಾನದಲ್ಲಿ ಕಳೆದ 8 ತಿಂಗಳ ಅವಧಿಯಲ್ಲಿ 4008 ಹಳ್ಳಿಗಳಿಗೆ 2.84 ಲಕ್ಷ ಹೊಸ ಸಂಪರ್ಕ ನೀಡಲಾಗಿದೆ. ಇಲ್ಲಿ 68 ಲಕ್ಷ LED ಬಲ್ಬುಗಳ ಅಳವಡಿಕೆ ಮೂಲಕ ವಿದ್ಯುತ್ ಉಳಿತಾಯಕ್ಕೂ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಹೊಸದಾಗಿ 33KVAಯ ಸಬ್ ಸ್ಟೇಷನ್ ಅನ್ನು 217 ಕಡೆಗಳಲ್ಲಿ ಅಳವಡಿಸಲಾಗಿದೆ.

ಸೌರಮಾನ ಶಕ್ತಿ

ಸೌರಮಾನ ಶಕ್ತಿ

ಗೋಯೆಲ್ ಅಧಿಕಾರ ಸ್ವೀಕರಿಸಿದಾಗ ಸೌರಮಾನ ಶಕ್ತಿಯಿಂದ ಉತ್ಪದಿಸಲಾಗುತ್ತಿದ್ದ ವಿದ್ಯುತ್ ಪ್ರಮಾಣ 4500 MW ಆಗಿತ್ತು, ಗೋಯೆಲ್ ಅಧಿಕಾರ ಅವಧಿಯಲ್ಲಿ ಈ ವರೆಗೆ 2000 MW ಗಳಷ್ಟು ಉತ್ಪಾದನೆ ಹೆಚ್ಚಿಸಲಾಗಿದೆ. ಅದೇ ರೀತಿ, 2016-17 ಆರ್ಥಿಕ ವರ್ಷಕ್ಕೆ 12000MW ವಿದ್ಯುತ್ ಉತ್ಪಾದನಾ ಗುರಿ ಹೊಂದಲಾಗಿದೆ.

ಬಿಹಾರದ ಕೈಸರ್ ಜಿಲ್ಲೆ

ಬಿಹಾರದ ಕೈಸರ್ ಜಿಲ್ಲೆ

ಕಳೆದ ಜನವರಿಯಲ್ಲಿ ಬಿಹಾರದ ಕೈಸರ್ ಜಿಲ್ಲೆಯ 11 ಹಳ್ಳಿಗಳಿಗೆ ಮೊದಲಬಾರಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಅದೇ ರೀತಿ ಉತ್ತರಪ್ರದೇಶ, ಮಧ್ಯಪ್ರದೇಶದ ಹಲವು ಹಳ್ಳಿಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ.

ನಮ್ಮ ರಾಜ್ಯದಲ್ಲೂ

ನಮ್ಮ ರಾಜ್ಯದಲ್ಲೂ

ಕರ್ನಾಟಕದಲ್ಲೂ ಸೌರ ವಿದ್ಯುತ್ ಉತ್ಪಾದನೆ ಹಾಗೂ ಎಲ್ ಇ ಡಿ ಬಲ್ಬ್ ಬಳಕೆಗೆ ಕೇಂದ್ರದ ಅನುದಾನ ಕೊಡಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಇದನ್ನು ತಮ್ಮ ಸಾಧನೆಯಂತೆ ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಸ್ವಾತಂತ್ರ್ಯ ಬಂದು 68 ವರ್ಷ

ಸ್ವಾತಂತ್ರ್ಯ ಬಂದು 68 ವರ್ಷ

ಒಟ್ಟಿನಲ್ಲಿ ಸ್ವಾತಂತ್ರ್ಯ ಬಂದು 68 ವರ್ಷಗಳ ಬಳಿಕವಾದರೂ ಹಲವು ಹಳ್ಳಿಗಳಿಗೆ ವಿದ್ಯುತ್ ಭಾಗ್ಯ ಕೇಂದ್ರ ಸರಕಾರದ ವತಿಯಿಂದ ದೊರಕುತ್ತಿದೆ. ಇಂತಹ ಕೆಲಸಗಳು ಅಚ್ಚೇದಿನ್ ಬರುತ್ತಿದೆ ಎನ್ನುವುದನ್ನು ನಿರೂಪಿಸುತ್ತಿದೆ.

English summary
Power Star of Narendra Modi government, Union Power and Coal Minister Piyush Goyal. His ministry doing good job in giving power connections to 18,452 villages in 19 states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X