ದೇಶದ ಏರ್‌ಪೋರ್ಟ್‌ಗಳಲ್ಲಿ ನಿತ್ಯ 25,000 ನಿಷೇಧಿತ ವಸ್ತುಗಳು ಜಪ್ತಿ: ಪಟ್ಟಿಯಲ್ಲಿ ಪವರ್ ಬ್ಯಾಂಕ್‌ಗೆ ಅಗ್ರಸ್ಥಾನ
ನವದೆಹಲಿ, ಜುಲೈ 31: ಭಾರತಾದ್ಯಂತ ವಿವಿಧ ವಿಮಾನ ನಿಲ್ದಾಣಗಳಲ್ಲಿ (Airport) ದೈನಂದಿನ ಪ್ರಯಾಣಿಕರ ತಪಾಸಣೆ ವೇಳೆ ಸುಮಾರು 25,000 ನಿಷೇಧಿತ ವಸ್ತುಗಳನ್ನು ಭದ್ರತಾ ಏಜೆನ್ಸಿ ಸಿಬ್ಬಂದಿ ವಶಕ್ಕೆ ಪಡೆಯುತ್ತಾರೆ. ಇದರಲ್ಲಿ ಪವರ್ ಬ್ಯಾಂಕ್ ಹೆಚ್ಚಿನ ಪ್ರಯಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಸೋಮವಾರ ಮಾಹಿತಿ ನೀಡಿದೆ.
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಮಹಾನಿರ್ದೇಶಕ ಜುಲ್ಫಿಕರ್ ಹಸನ್ ಅವರು ಸೋಮವಾರ ದೆಹಲಿಯ BCAS ಪ್ರಧಾನ ಕಛೇರಿಯಲ್ಲಿ ನಡೆದ ಏವಿಯೇಷನ್ ಸೆಕ್ಯುರಿಟಿ ಕಲ್ಚರ್ ವೀಕ್-2023ಗೆ ಚಾಲನೆ ನೀಡಿ, ವಿಮಾನ ನಿಲ್ದಾಣದಲ್ಲಿನ ಭದ್ರತೆ ಕುರಿತು ಮಾನತಾಡಿದರು.

ಪ್ರತಿನಿತ್ಯ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸುಮಾರು ಎಂಟು ಲಕ್ಷ ಹ್ಯಾಂಡ್‌ಬ್ಯಾಗ್‌ಗಳನ್ನು ಮತ್ತು ಐದು ಲಕ್ಷ ಚೆಕ್-ಇನ್ ಬ್ಯಾಗೇಜ್‌ಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸುತ್ತಾರೆ. ತಪಾಸಣೆ ಮಾಡುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ವಿಮಾನಯಾನ ಪ್ರಯಾಣಿಕ್ಕೆ ಅಕವಾಶವಿಲ್ಲದ ಸುಮಾರು 25,000 ನಿಷೇಧಿತ ವಸ್ತುಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯುತ್ತಾರೆ ಎಂದು ತಿಳಿಸಿದರು.
ಒಟ್ಟು ಜಪ್ತಿಯಲ್ಲಿ ಪವರ್ ಬ್ಯಾಂಕ್ ಶೇ.44ರಷ್ಟು
ಪ್ರಯಾಣಿಕರು ಪ್ರವೇಶದ ವೇಳೆ ಸುಮಾರು ಚೆಕ್-ಇನ್ ಬ್ಯಾಗೇಜ್‌ನಲ್ಲಿ ನಿಷೇಧಿತ ವಸ್ತುಗಳಲ್ಲಿ ಹೆಚ್ಚು ಕಂಡು ಬರುವುದು ಪವರ್ ಬ್ಯಾಂಕ್‌ಗಳು. ಅದರ ಪ್ರಮಾಣ ಶೇಕಡಾ 44ರಷ್ಟಿದ್ದರೆ, ಹಗುರವಾದ ನಿಷೇಧಿ ವಸ್ತುಗಳ ಪತ್ತೆ ಶೇಕಡಾ 19 ರಷ್ಟಿದೆ. ಇನ್ನೂ ಸಡಿಲವಾದ ಬ್ಯಾಟರಿಗಳು ಶೇಕಡಾ 18ರಷ್ಟು, ಶೇಕಡಾ 11ರಷ್ಟು ಪ್ರಮಾಣದಲ್ಲಿ ಲ್ಯಾಪ್‌ಟಾಪ್ ಗಳನ್ನು ಸಿಬ್ಬಂದಿ ವಶಕ್ಕೆ ಪಡೆಯುತ್ತಾರೆ ಎಂದರು.
ಇನ್ನೂ ಕೈಯಲ್ಲಿರುವ ಬ್ಯಾಗಗಳಲ್ಲಿ ಹಗುರವಾದ ನಿಷೇಧಿತ ವಸ್ತುಗಳಾದ ಕತ್ತರಿಗಳು, ಸಣ್ಣ ಚಾಕು ಮತ್ತು ನಿಷೇಧಿತ ದ್ರವ ರೂಪದ ವಸ್ತಗಳನ್ನು ಪ್ರಯಾಣಿಕರು ಒಯ್ಯುವಾಗ ತಪಾಸಣೆ ನಡೆಸಿ ವಶಕ್ಕೆ ಪಡೆಯಲಾಗುತ್ತದೆ. ಇನ್ನೂ ವಾಯುಯಾನ ಕ್ಷೇತ್ರದ ಬೆಳವಣಿಗೆಗೆ ಫೂಲ್ ಪ್ರೂಫ್ ಭದ್ರತೆ ಅತ್ಯಗತ್ಯ ಎಂದು ಅವರು ತಿಳಿಸಿದರು.

ಪ್ರತಿದಿನ 4.8 ಲಕ್ಷ ಪ್ರಯಾಣಿಕರ ಸಂಚಾರ
ವಿಮಾನಯಾನ, ತಪಾಸಣೆ ಸಂದರ್ಭದಲ್ಲಿ ಒಂದು ಸಣ್ಣ ತಪ್ಪಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಇನ್ನೂ ವಿಶ್ವದಲ್ಲೇ ಅತೀ ಹೆಚ್ಚು ಮೊದಲ ವಿಮಾನಯಾನ ಮಾಡುವವರನ್ನು ಭಾರತ ಹೊಂದಿದೆ. ವಿಮಾನ ಪ್ರಯಾಣ, ಭದ್ರತೆ, ಕುರಿತು ಸಾರ್ವಜನಿಕವಾಗಿ ಒಂದು ವಾರದ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.
3,300 ವಿಮಾನಗಳಲ್ಲಿ ಪ್ರತಿದಿನ 4.8 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ವಾಯುಯಾನಕ್ಕೆ ಇತ್ತಿಚೆಗೆ ಬರುತ್ತಿರುವ ಬೆದರಿಕೆಗಳ ಕುರಿತು ವಿವರಿಸಿದ ಹಸನ್ ಅವರು, ಸೈಬರ್ ಬೆದರಿಕೆ, ಡ್ರೋನ್ ಒಳಗೊಂಡ ಸೈಬರ್ ಬೆದರಿಕೆಗಳು ಹೆಚ್ಚು ಬರುತ್ತವೆ.
ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನಯಾನ ಸಂಸ್ಥೆ, ಭದ್ರತಾ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು ಎಲ್ಲ ವಿಭಾಗದಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.












Click it and Unblock the Notifications