ಪೊರ್ಕಿಗಳು ಮರೀನಾ ಬೀಚಿಗೆ ಬಾ ಅಂದ್ರು, ದೇವ್ರು ಪೊಲೀಸರನ್ನು ಕಳ್ಸಿದ್ರು

Posted By:
Subscribe to Oneindia Kannada

ನವದೆಹಲಿ, ಜ 24: ತನ್ನ ಹರಿತವಾದ ಮತ್ತು ಫಿಲ್ಟರ್ ಇಲ್ಲದ ಹೇಳಿಕೆಗೆ ಹೆಸರಾಗಿರುವ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಜಲ್ಲಿಕಟ್ಟು ಹೋರಾಟಗಾರರ ವಿರುದ್ದ ಮತ್ತೊಂದು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಸೋಮವಾರ (ಜ 23) ಚೆನ್ನೈನಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ ಐನ ಕೈವಾಡವಿದೆ ಎಂದು ಹೇಳಿಕೆ ನೀಡಿದ್ದ ಸ್ವಾಮಿ, ಜಲ್ಲಿಕಟ್ಟು ಹೋರಾಟಗಾರರನ್ನು ಪೊರ್ಕಿಗಳು ಎಂದು ಸಂಭೋದಿಸಿ ವಿವಾದ ಹುಟ್ಟು ಹಾಕಿದ್ದಾರೆ.

ಜಲ್ಲಿಕಟ್ಟು ವಿಚಾರದಲ್ಲಿ ಕರ್ನಾಟಕವನ್ನೂ ಎಳೆದು ತಂದಿದ್ದ ಸುಬ್ರಮಣಿಯನ್ ಸ್ವಾಮಿ, ತಮಿಳುನಾಡಿನಲ್ಲಿ ಬಿಜೆಪಿಯ ಪ್ರಾಭಲ್ಯವೇ ಇಲ್ಲ. ಆದರೂ, ಪ್ರಧಾನಿ ಮೋದಿ ಜಲ್ಲಿಕಟ್ಟು ವಿಚಾರದಲ್ಲಿ ತಮಿಳುನಾಡು ಪರ ನಿಂತರು. (ಜಲ್ಲಿಕಟ್ಟು ಹಿಂಸಾಚಾರದ ಹಿಂದಿನ ಅಸಲಿಯತ್ತು)

ಪಕ್ಕದ ಕರ್ನಾಟಕ ನೋಡಿ, ಅಲ್ಲಿ ಇಪ್ಪತ್ತು ಬಿಜೆಪಿ ಸಂಸದರು ಇದ್ದಾರೆ. ಅಲ್ಲೂ ಕಂಬಳ, ಮಹದಾಯಿ ಎನ್ನುವ ಸಮಸ್ಯೆಯಿದೆ. ಅಲ್ಲಿ ಕಾಂಗ್ರೆಸ್ ಸರಕಾರವಿದೆ, ಆದರೂ ಅಲ್ಲಿನ ಜನ ಮೋದಿಯನ್ನು ಗೌರವಿಸುತ್ತಾರೆ, "World Of difference" ಎಂದು ಸ್ವಾಮಿ, ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದರು.

ಜಯಲಲಿತಾ ನಿಧನ ವಾರ್ತೆಯನ್ನು ಆಸ್ಪತ್ರೆ ಪ್ರಕಟಿಸುವ ಐದು ತಾಸು ಮುನ್ನವೇ, ಅಪೋಲೋ ಆಸ್ಪತ್ರೆ ಇಂದು ಜಯಲಲಿತಾ ನಿಧನ ಹೊಂದಿದ್ದಾರೆಂದು ಪ್ರಕಟಿಸುತ್ತದೆ ಎಂದು ಹೇಳಿ, ಎಐಎಡಿಎಂಕೆ ಕಾರ್ಯಕರ್ತರ ಕೆಂಗಣ್ಣಿಗೆ ಸ್ವಾಮಿ ಗುರಿಯಾಗಿದ್ದರು.

ಜಲ್ಲಿಕಟ್ಟು ಹೋರಾಟ ಮತ್ತು ಹೋರಾಟಗಾರರ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಕೆಲವೊಂದು ಟ್ವೀಟ್ ಹೇಗಿದೆ ನೋಡಿ..

ತಮಿಳುನಾಡು

ತಮಿಳುನಾಡು ಸರಕಾರ ಪೊರ್ಕಿ, ನಕ್ಸಲರು, ಮಾದಕದ್ರವ್ಯ ವ್ಯಸನಿಗಳನ್ನು ಚೆನ್ನೈನ ಮರೀನಾ ಬೀಚಿನಿಂದ ಓಡಿಸಬೇಕು.

ರಾಷ್ಟ್ರಪತಿ ಆಡಳಿತ

ರಾಷ್ಟ್ರಪತಿ ಆಡಳಿತ ತಮಿಳುನಾಡಿನಲ್ಲಿ ಜಾರಿಯಾಗಲಿ. ಸಿಆರ್ಪಿಎಫ್, ಬಿಎಸ್ಎಫ್ ಚಳುವಳಿಯನ್ನು ಹತೋಟಿಗೆ ತರಲಿ. ನಕ್ಸಲರು, ಜಿಹಾದಿಗಳಿಂದ ಮುಕ್ತವಾಗಲು ಸೂಕ್ತ ಸಮಯ.

ಪೊರ್ಕಿಗಳು

ಪೊರ್ಕಿಗಳ ಹಿಂಸಾತ್ಮಕ ಪ್ರತಿಭಟನೆಯನ್ನು ಪೊಲೀಸರು ತಹಬಂದಿಗೆ ತಂದಿದ್ದಾರೆ. ಈಗ ಪೊಲೀಸರು ಪೊರ್ಕಿಗಳನ್ನು ಹುಡುಕಿ ಬಂಧಿಸಬೇಕು.

ಮರೀನಾ ಬೀಚ್

ಮರೀನಾ ಬೀಚ್

ಪೊರ್ಕಿಗಳು ಚೆನ್ನೈನಲ್ಲಿ ವಾಸವಾಗಿರುವುದು ಒಂದೆಡೆಯಾದರೆ, ಅವರ ಮಾತಲ್ಲೂ ಹೊಲಸು ಇದೆ. ಪೊಲೀಸರ ಭಯದಿಂದ ಪಲಾಯನ ಮಾಡುತ್ತಿರುವುದು ಮತ್ತು ರಕ್ಷಣೆಗಾಗಿ ಒದ್ದಾಡುತ್ತಿರುವುದನ್ನು ನೋಡಲು ಸಂತೋಷವಾಗುತ್ತದೆ - ಸುಬ್ರಮಣಿಯನ್ ಸ್ವಾಮಿ.

ಕಮಲಹಾಸನ್

ಚಿತ್ರ ನಟ ಎಂಥಾ ಮೂರ್ಖತನದ ಹೇಳಿಕೆ ನೀಡುತ್ತಾರೆ. ಸಿಎಂ ಪನ್ನೀರ್ ಸೆಲ್ವಂ ಪ್ರತಿಭಟನಾಕಾರರನ್ನು ಭೇಟಿಯಾಗಬೇಕಿತ್ತಂತೆ. ಮಧುರೈಯಲ್ಲಿ ಪ್ರತಿಭಟನಾಕಾರನನ್ನು ಭೇಟಿಯಾದ ಏನಾಯಿತು?

ಸುಬ್ರಮಣಿಯನ್ ಸ್ವಾಮಿ

ಪೊರ್ಕಿಗಳು ಮರೀನಾ ಬೀಚಿಗೆ ಬಾ ಅಂದ್ರು, ಆಗ ದೇವರು ಪೊಲೀಸರನ್ನು ಕಳುಹಿಸಿದ್ರು. ಈಗ ತಮಿಳುನಾಡಿಗೆ ಬಾ ಎಂದು ಚಾಲೆಂಜ್ ಮಾಡುತ್ತಿದ್ದಾರೆ, ಶಿವ ಭಗವಾನ್ ನಿರ್ಧರಿಸಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Porkis dared me to come to Marina beach, Chennai, Shiva sent police.Now porkis say come to TN, Shiva to decide. Subramanian Swamy tweets.
Please Wait while comments are loading...