• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರ ಪರ ಧ್ವನಿ ಎತ್ತಿದ್ದ ರಿಹಾನ ಟಾಪ್ ಲೆಸ್ ಫೋಟೋ: ಕೊರಳಲ್ಲಿ ಗಣೇಶನ ಪದಕ

|

ಬಾರ್ಬಡೋಸ್ ಮೂಲದ ಪಾಪ್ ಗಾಯಕಿ ರಿಹಾನ ಇದ್ದಕ್ಕಿದ್ದಂತೆಯೇ ಭಾರತದಲ್ಲಿ ಫೇಮಸ್ ಆಗಿದ್ದು ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ನಂತರ.

ಈಕೆಯ ರೈತರ ಪರ ಟ್ವೀಟ್ ದೇಶದಲ್ಲಿ ಭಾರೀ ಪರವಿರೋಧ ಚರ್ಚೆಗೆ ಗುರಿಯಾಗಿತ್ತು. ಬಣ್ಣದಲೋಕ ಕೂಡಾ ಈ ವಿಚಾರದಲ್ಲಿ ಇಬ್ಬಗೆಯ ನಿಲುವನ್ನು ತಾಳಿತ್ತು. ನಮ್ಮ ದೇಶದ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಕೆಲವು ಸೆಲೆಬ್ರಿಟಿಗಳು ವಾದಿಸಿದರೆ, ಆಕೆ ಧ್ವನಿ ಎತ್ತಿದರೆ ತಪ್ಪೇ ಎಂದು ಕೆಲವರು ಸಮರ್ಥಿಸಿಕೊಂಡಿದ್ದರು.

ವಾಟ್ಸಾಪ್ ಗ್ರೂಪ್ ಸೃಷ್ಟಿಸಿದ್ದೇ ದಿಶಾ ರವಿ, ಖಲಿಸ್ತಾನ ಪರ ಪಿಜೆಎಫ್ ಸೇರಿಕೊಂಡಿದ್ದು ಆಮೇಲೆ

ಇನ್ನು, ರೈತರ ಪರ ಹೋರಾಟಕ್ಕೆ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಸಂಬಂಧಿಕರು ಧ್ವನಿ ಎತ್ತಿದ್ದರು. ಆದರೆ, ಇದುವರೆಗೆ ರೈತರು ಮತ್ತು ಕೇಂದ್ರ ಸರಕಾರದ ನಡುವಿನ ಮಾತುಕತೆ ಯಾವುದೇ ಫಲ ನೀಡದೇ ಇರುವುದರಿಂದ ಹೋರಾಟ ಮುಂದುವರಿದಿದೆ.

ಈ ನಡುವೆ, ಗಾಯಕಿ ರಿಹಾನ ಟಾಪ್ ಲೆಸ್ ಫೋಟ್ ಒಂದನ್ನು ತಮ್ಮ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದ್ದಾರೆ. ಅವರ ಸಾಮಾಜಿಕ ಖಾತೆಯಲ್ಲಿ ಏನಾದರೂ ಹಾಕಿಕೊಳ್ಳಲಿ, ಅದು ಅವರ ವೈಯಕ್ತಿಕ ವಿಚಾರ. ಆದರೆ, ವಿಷಯ ಅದಲ್ಲಾ..

ದೇಶಾದ್ಯಂತ ರೈತ ಕಹಳೆ: "ಜೀವನ ಕಿತ್ತುಕೊಂಡವರಿಗೆ ಮತ ಹಾಕಬೇಕೇ"?

ಟಾಪ್ ಲೆಸ್ ಫೋಟೊ

ರಿಹಾನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟಾಪ್ ಲೆಸ್ ಫೋಟೊ ಒಂದನ್ನು ಹಾಕಿಕೊಂಡಿದ್ದಾರೆ. ಎದೆಭಾಗವನ್ನು ಕೈಯಲ್ಲಿ ಮುಚ್ಚಿಕೊಂಡಿರುವ ರಿಹಾನ, ಕೊರಳಿಗೆ ತಾನು ಹಾಕಿಕೊಂಡಿರುವ ಸರಕ್ಕೆ ಗಣೇಶನ ಪೆಂಡೆಂಟ್ ಹಾಕಿಕೊಳ್ಳುವ ಮೂಲಕ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.

ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ

ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ

ಈಕೆಯ ಟ್ವೀಟ್ ಸ್ವಾಭಾವಿಕವಾಗಿ ಅಸಂಖ್ಯಾತ ಹಿಂದೂಗಳನ್ನು ಕೆರಳಿಸಿದೆ. ಇನ್ನು, ಹಿಂದೂ ಧರ್ಮೀಯರ ಭಾವನೆಗೆ ಈಕೆ ಧಕ್ಕೆ ತಂದಿದ್ದಾರೆಂದು ಮುಂಬೈ ಮತ್ತು ದೆಹಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ತಾಣದಲ್ಲಿ ಈಕೆಯ ಫೋಟೋಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಸೇವೇಜ್ ಎಕ್ಸ್ ಫೆಂಟಿ ಲಿಂಗೆರಿ ಬ್ರಾಂಡ್

ಸೇವೇಜ್ ಎಕ್ಸ್ ಫೆಂಟಿ ಲಿಂಗೆರಿ ಬ್ರಾಂಡ್

ಸೇವೇಜ್ ಎಕ್ಸ್ ಫೆಂಟಿ ಲಿಂಗೆರಿ ಬ್ರಾಂಡಿಗಾಗಿ ತೆಗೆದ ಫೋಟೊ ಶೂಟೌಟ್ ಇದಾಗಿದೆ. ಟ್ವಿಟ್ಟರ್ ನಲ್ಲಿ ಈ ಫೋಟೋಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಿಮ್ಮ ಕೀಳು ಅಭಿರುಚಿಗೆ ನಮ್ಮ ಧರ್ಮವೇ ಬೇಕೇ, ಯಾಕೆ ನಮ್ಮ ಧರ್ಮ, ಭಾವನೆ, ನಂಬಿಕೆಗಳ ಜೊತೆ ಆಟವಾಡುತ್ತಿದ್ದೀರಿ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.

ಇದೊಂದು ಪೆಂಡೆಂಟ್ ಆಗಿರಬಹುದು, ಆದರೆ ನಮಗೆ ಗಣೇಶ ದೇವರು

"ನಮ್ಮ ಧರ್ಮದ ಬಗ್ಗೆ ಕೀಳಾಗಿ ಕಾಮೆಂಟ್ ಮಾಡುವುದನ್ನು ನೋಡಿ ಸಾಕಾಗಿ ಹೋಗಿದೆ. ಇದನ್ನು ಪ್ರತಿಭಟಿಸಿದರೆ ಹಿಂದೂ ತೀವ್ರವಾದಿಗಳು ಎಂದು ನಮ್ಮನ್ನು ಜರಿಯಲಾಗುತ್ತದೆ. ಆಕೆಗೆ ಇದೊಂದು ಪೆಂಡೆಂಟ್ ಆಗಿರಬಹುದು, ಆದರೆ ನಮಗೆ ಗಣೇಶ ದೇವರು"ಎನ್ನುವ ಟ್ವೀಟ್.

English summary
Popstar Rihanna Poses Topless With Lord Ganesha Figurine Necklace, Netizens fume,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X