ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

40% ಭಾರತೀಯರ ಜೀವಿತಾವಧಿ ತಗ್ಗಿಸಲಿದೆ ವಾಯುಮಾಲಿನ್ಯ; ಅಧ್ಯಯನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 01: ದೇಶದಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದ್ದು, ಸುಮಾರು 40% ಭಾರತೀಯರ ಜೀವಿತಾವಧಿಯನ್ನು ಒಂಬತ್ತು ವರ್ಷಗಳವರೆಗೂ ತಗ್ಗಿಸುವ ಸಾಧ್ಯತೆಯಿದೆ ಎಂದು ಅಮೆರಿಕದ ಸಂಶೋಧನಾ ತಂಡ ತಿಳಿಸಿದೆ.

ನವದೆಹಲಿ ಸೇರಿದಂತೆ ಮಧ್ಯ, ಪೂರ್ವ ಹಾಗೂ ಉತ್ತರ ಭಾರತದ ಪ್ರದೇಶಗಲ್ಲಿ ವಾಸಿಸುತ್ತಿರುವ 480 ದಶಲಕ್ಷಕ್ಕೂ ಹೆಚ್ಚು ಜನರು ಗಮನಾರ್ಹವಾಗಿ ಹೆಚ್ಚಿನ ಮಾಲಿನ್ಯಕ್ಕೆ ತುತ್ತಾಗಿದ್ದಾರೆ ಎಂದು ಷಿಕಾಗೋ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆ ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Pollution May Cut Life Expectancy Of 40% Indians Says US Study

ಭಾರತದ ಹೆಚ್ಚಿನ ಮಟ್ಟದ ವಾಯುಮಾಲಿನ್ಯವು ಕಾಲಾನಂತರದಲ್ಲಿ ಭೌಗೋಳಿಕವಾಗಿ ವಿಸ್ತರಿಸಿದೆ. ಇದು ಆತಂಕಕಾರಿಯಾಗಿದೆ ಎಂದು ಇಪಿಐಸಿ ವರದಿ ತಿಳಿಸಿದೆ. ಉದಾಹರಣೆಗೆ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ವಾಯು ಗುಣಮಟ್ಟ ಗಣನೀಯವಾಗಿ ಹದಗೆಟ್ಟಿದೆ ಎಂದು ತಿಳಿಸಿದೆ.

ಈ ಆಪಾಯಕಾರಿ ವಾಯುಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು 2019ರಲ್ಲಿ ಆರಂಭಿಸಿದ ಭಾರತದ ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮವನ್ನು (NCAP) ಶ್ಲಾಘಿಸಿರುವ ವರದಿ, ಈ ಕಾರ್ಯಕ್ರಮದ ಗುರಿಯನ್ನು ಸಾಧಿಸುವುದು ದೇಶದ ಒಟ್ಟಾರೆ ಜೀವಿತಾವಧಿಯ್ನು 1.7 ವರ್ಷಕ್ಕೆ ಹೆಚ್ಚಿಸಬಹುದು ಎಂದು ಹೇಳಿದೆ.

2022ರ ಜುಲೈಯಿಂದ ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಷೇಧ2022ರ ಜುಲೈಯಿಂದ ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಷೇಧ

2024ರ ವೇಳೆಗೆ ವಾಯುಮಾಲಿನ್ಯ ಪೀಡಿತ 102 ಪ್ರದೇಶಗಳಲ್ಲಿ 20-30% ಮಾಲಿನ್ಯವನ್ನು ತಗ್ಗಿಸುವ ಗುರಿ ಹೊಂದಿದೆ. ಕೈಗಾರಿಕೆ ಹಾಗೂ ವಾಹನಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಹಾಗೂ ಸಾರಿಗೆ ಇಂಧನ ಹಾಗೂ ದೂಳಿನ ಮಾಲಿನ್ಯವನ್ನು ತಗ್ಗಿಸಲು ಕಠಿಣ ನಿಯಮಗಳನ್ನು ಪರಿಚಯಿಸುವ ಗುರಿ ಹೊಂದಿದೆ. ಇದಕ್ಕೆ ಉತ್ತಮ ಮೇಲ್ವಿಚಾರಣಾ ವ್ಯವಸ್ಥೆಯೂ ಇರಲಿದೆ ಎಂದು ತಿಳಿಸಿದೆ.

ಐಕ್ಯೂ ಏರ್ ಪ್ರಕಾರ ಸತತ ಮೂರನೇ ವರ್ಷದಲ್ಲಿ ವಿಶ್ವದ ಅತಿ ಕಲುಷಿತ ನಗರವೆಂದು ನವದೆಹಲಿ ಗುರುತಿಸಿಕೊಂಡಿದೆ. ಪಿಎಂ 2.5 ಎಂದು ಕರೆಯಲಾಗುವ, ಶ್ವಾಸಕೋಶಕ್ಕೆ ಹಾನಿ ಮಾಡುವ ವಾಯು ಕಣಗಳ ಸಾಂದ್ರತೆಯ ಆಧಾರದ ಮೇಲೆ ಗಾಳಿಯ ಗುಣಮಟ್ಟವನ್ನು ಅಳೆಯಲಾಗುತ್ತದೆ.

Pollution May Cut Life Expectancy Of 40% Indians Says US Study

ಕಳೆದ ವರ್ಷ ಕೊರೊನಾ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ದೆಹಲಿಯಲ್ಲಿ ವಾಯುಮಾಲಿನ್ಯ ಕೊಂಚ ತಗ್ಗಿತ್ತು. ಇದರಿಂದ ಸುಮಾರು 20 ಮಿಲಿಯನ್ ನಿವಾಸಿಗಳು ಶುದ್ಧ ಗಾಳಿಯನ್ನು ಉಸಿರಾಡುವಂತಾಗಿತ್ತು. ಆದರೆ ನೆರೆಯ ಪಂಜಾಬ್ ಹಾಗೂ ಹರಿಯಾಣದಲ್ಲಿ ಕೃಷಿ ತ್ಯಾಜ್ಯವನ್ನು ಸುಟ್ಟಿದ್ದರಿಂದ ಮತ್ತೆ ವಾಯುಮಾಲಿನ್ಯ ಉಂಟಾಗಿ ಮತ್ತೆ ವಿಷಕಾರಿ ಗಾಳಿಯ ಸೇವನೆ ಮಾಡುವಂತಾಯಿತು.

ಪ್ರಕೃತಿ ಮಾತೆಯ ಕೋಪಕ್ಕೆ ತತ್ತರಿಸಿದ ಅಮೆರಿಕ, ಭೀಕರ ಪ್ರವಾಹಕ್ಕೆ 22 ಜನ ಬಲಿಪ್ರಕೃತಿ ಮಾತೆಯ ಕೋಪಕ್ಕೆ ತತ್ತರಿಸಿದ ಅಮೆರಿಕ, ಭೀಕರ ಪ್ರವಾಹಕ್ಕೆ 22 ಜನ ಬಲಿ

ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸಿನಂತೆ ಬಾಂಗ್ಲಾದೇಶ ವಾಯುಗುಣಮಟ್ಟವನ್ನು ಏರಿಸಿಕೊಂಡಿದ್ದು, ಅಲ್ಲಿ ಜೀವಿತಾವಧಿಯು 5.4 ವರ್ಷ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು EPIC ವರದಿ ಉಲ್ಲೇಖಿಸಿದೆ.

ದೀರ್ಘಾವಧಿ ವಾಯುಮಾಲಿನ್ಯದ ವಿವಿಧ ಹಂತಗಳಿಗೆ ಒಡ್ಡಿಕೊಂಡ ಜನರ ಆರೋಗ್ಯವನ್ನು ಹೋಲಿಕೆ ಮಾಡಿ ಜೀವಿತಾವಧಿ ಸಂಖ್ಯೆಯನ್ನು ನಿರ್ಧರಿಸುತ್ತದೆ.

English summary
Air pollution is likely to reduce the life expectancy of about 40% of Indians by more than nine years, according to a report released by a U.S.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X