Narendra Modi; ಪ್ರಧಾನಿ ಹುದ್ದೆ ಸಮೀಕ್ಷೆಯಲ್ಲಿ ಮೋದಿ ನಂಬರ್ 1
ಬೆಂಗಳೂರು, ಮಾರ್ಚ್ 13: ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಹಲವು ಸಮೀಕ್ಷೆಗಳು ನಡೆಯುತ್ತಿವೆ. ಪ್ರಧಾನ ಮಂತ್ರಿ ಹುದ್ದೆಗೆ ಯಾರು ಬೆಸ್ಟ್? ಎಂಬ ಸಮೀಕ್ಷೆಯೊಂದು ನಡೆದಿದ್ದು, ಮತ್ತೆ ನರೇಂದ್ರ ಮೋದಿ ನಂಬರ್ 1 ಸ್ಥಾನ ಪಡೆದಿದ್ದಾರೆ.
ದೇಶದ 21 ರಾಜ್ಯಗಳ 518 ಲೋಕಸಭಾ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶವನ್ನು News18 ವಾಹಿನಿ ಬುಧವಾರ ಬಿಡುಗಡೆ ಮಾಡಿದೆ. ಈ ಸಮೀಕ್ಷೆಯಲ್ಲಿ ಯಾರು ಪ್ರಧಾನಿಯಾಗಬೇಕು? ಎಂದು ಜನರನ್ನು ಪ್ರಶ್ನೆ ಮಾಡಲಾಗಿದೆ.

ಸಮೀಕ್ಷೆಯನ್ನು ನಡೆಸುವಾಗ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಯ್ಕೆಯನ್ನು ಜನರಿಗೆ ನೀಡಲಾಗಿತ್ತು.
ಸಮೀಕ್ಷೆಯ ಫಲಿತಾಂಶ: ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 85ರಷ್ಟು ಜನರು ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂಬ ಕಾರಣಕ್ಕಾಗಿಯೇ ಬಿಜೆಪಿಗೆ ಮತ ಹಾಕುತ್ತೇವೆ ಎಂದು ಹೇಳಿದ್ದಾರೆ. ಶೇ 11ರಷ್ಟು ಜನರು ಇತರ ಕಾರಣಕ್ಕೆ ಬಿಜೆಪಿ ಬೆಂಬಲಿಸುತ್ತೇವೆ ಎಂದು, ಶೇ 9ರಷ್ಟು ಜನರು ಬೇರೆ ಬೇರೆ ಕಾರಣಕ್ಕೆ ಬಿಜೆಪಿಗೆ ಮತ ಹಾಕುತ್ತೇವೆ ಎಂದು ಹೇಳಿದ್ದಾರೆ.
ಪ್ರಧಾನಿ ಹುದ್ದೆಗೆ ಮೋದಿ ಉತ್ತಮ ಆಯ್ಕೆ ಎಂದು ಶೇ 59ರಷ್ಟು ಜನರು, ರಾಹುಲ್ ಗಾಂಧಿ ಎಂದು ಶೇ 21ರಷ್ಟು ಜನರು, ಮಮತಾ ಬ್ಯಾನರ್ಜಿ ಪರವಾಗಿ ಶೇ 9ರಷ್ಟು ಜನರು ಮತ್ತು ಅರವಿಂದ್ ಕೇಜ್ರಿವಾಲ್ ಪರವಾಗಿ ಶೇ 9ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೋದಿ v/s ರಾಹುಲ್: ಸಮೀಕ್ಷೆಯಲ್ಲಿ ಮೋದಿ v/s ರಾಹುಲ್ ಯಾರು ಉತ್ತಮ ನಾಯಕ? ಎಂದು ಜನರನ್ನು ಪ್ರಶ್ನಿಸಲಾಗಿದೆ. ನರೇಂದ್ರ ಮೋದಿ ಪ್ರಮಾಣಿಕರು ಎಂದು ಶೇ 73ರಷ್ಟು, ರಾಹುಲ್ ಪ್ರಮಾಣಿಕರು ಎಂದು ಶೇ 27ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಶೇ 69ರಷ್ಟು ಜನರು ಮೋದಿ ಕಠಿಣ ಪ್ರರಿಶ್ರಮಿ ಎಂದು, ಶೇ 31ರಷ್ಟು ಜನರು ರಾಹುಲ್ ಪರಿಶ್ರಮಿ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಜನರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ ಎಂದು ಶೇ 71ರಷ್ಟು ಜನರು, ರಾಹುಲ್ ಕಾಳಜಿ ಹೊಂದಿದ್ದಾರೆ ಎಂದು ಶೇ 29ರಷ್ಟು ಜನರು ಸಮೀಕ್ಷೆಯಲ್ಲಿ ಹೇಳಿದ್ದಾರೆ.
देश का सबसे बड़ा ओपिनियन पोल #News18MegaOpinionPoll LIVE#MegaPollWithNews18 @RubikaLiyaquat @KishoreAjwani @AMISHDEVGAN @PankajBofficial @SabeenaTamang https://t.co/SlRLrwx92A
— News18 India (@News18India) March 13, 2024
ನರೇಂದ್ರ ಮೋದಿ ಪ್ರಬಲ ನಾಯಕ ಎಂದು ಶೇ 67 ಜನರು, ರಾಹುಲ್ ಪ್ರಬಲ ಎಂದು ಶೇ 33ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಬಗ್ಗೆ ಮೋದಿಗೆ ಒಳ್ಳೆಯ ವಿಷನ್ ಇದೆ ಎಂದು ಶೇ 68ರಷ್ಟು ಜನರು, ರಾಹುಲ್‌ಗೆ ವಿಷನ್ ಇದೆ ಎಂದು ಶೇ 32ರಷ್ಟು ಜನರು ಅಭಿಪ್ರಾಯವನ್ನು ತಿಳಿಸಿದ್ದಾರೆ.
ವಿವಿಧ ಸಂಸ್ಥೆಗಳ ಜೊತೆ ಸೇರಿ ಫೆಬ್ರವರಿ 12 ರಿಂದ ಮಾರ್ಚ್ 1ರ ತನಕ 21 ಪ್ರಮುಖ ರಾಜ್ಯಗಳಲ್ಲಿ 518 ಲೋಕಸಭಾ ಕ್ಷೇತ್ರಗಳಲ್ಲಿ, ಪ್ರತಿ ಕ್ಷೇತ್ರದಲ್ಲಿ 210 ಜನರನ್ನು ಸಂದರ್ಶಿಸಿ 1,08,780 ಮತದಾರರನ್ನು ಮಾತನಾಡಿಸಿ, 11 ಪ್ರಾದೇಶಿಕ ಭಾಷೆಗಳಲ್ಲಿ ಈ ಸಮೀಕ್ಷೆಯನ್ನು ಮಾಡಲಾಗಿದೆ ಎಂದು ನ್ಯೂಸ್ 18 ಹೇಳಿದೆ.
ಸಮೀಕ್ಷೆಯ ರಾಜ್ಯವಾರು ಅಂಕಿ ಅಂಶಗಳನ್ನು ನ್ಯೂಸ್ 18 ವಾಹಿನಿ ಬಿಡುಗಡೆ ಮಾಡುತ್ತಿದೆ. ಮಾರ್ಚ್ 13 ಮತ್ತು 14ರಂದು ಸಮೀಕ್ಷೆಯ ಫಲಿತಾಂಶದ ಕುರಿತು ವಾಹಿನಿಯಲ್ಲಿ ಸಂಜೆ 6 ರಿಂದ 10 ಗಂಟೆಯ ತನಕ ಚರ್ಚೆ ನಡೆಯುತ್ತದೆ. ಅಂತಿಮ ಫಲಿತಾಂಶ ಗುರುವಾರ ಪ್ರಕಟವಾಗುವ ನಿರೀಕ್ಷೆ ಇದೆ.
ಅಂಕಿ ಅಂಶಗಳು ನ್ಯೂಸ್ 18 ಕೃಪೆ












Click it and Unblock the Notifications