• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪ ಚುನಾವಣೆ ಪ್ರಚಾರಕ್ಕಾಗಿ ಮಾರ್ಗಸೂಚಿ ಬದಲಿಸಿದ ಸರ್ಕಾರ

|

ನವದೆಹಲಿ, ಅಕ್ಟೋಬರ್ 09: ಬಿಹಾರ ಮತ್ತು 11 ರಾಜ್ಯಗಳ ಉಪ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ ಮಾಡಿದೆ. ಅಕ್ಟೋಬರ್ 15ಕ್ಕೂ ಮೊದಲು ರಾಜಕೀಯ ಸಮಾವೇಶಗಳನ್ನು ಮಾಡಲು ಅನುಮತಿ ನೀಡಲಾಗಿದೆ.

ಅನ್ ಲಾಕ್ ಮಾರ್ಗಸೂಚಿ 5.0 ಅನ್ವಯ ಅಕ್ಟೋಬರ್ 15ರ ಬಳಿಕ ಮಾತ್ರ ಸಮಾವೇಶಗಳನ್ನು ಆಯೋಜನೆ ಮಾಡಬೇಕಿತ್ತು. ಆದರೆ, ಇದನ್ನು ತಿದ್ದುಪಡಿ ಮಾಡಲಾಗಿದ್ದು, ಕಂಟೈನ್ಮೆಂಟ್ ಝೋನ್ ಹೊರಗೆ ತಕ್ಷಣದಿಂದಲೇ ಸಮಾವೇಶನ ನಡೆಸಲು ಅವಕಾಶ ನೀಡಲಾಗಿದೆ.

ರಾಜ್ಯ ಸರ್ಕಾರದ ಅನ್‌ಲಾಕ್ 5.0 ಮಾರ್ಗಸೂಚಿಯಲ್ಲಿ ಏನೇನಿದೆ?

ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಅಕ್ಟೋಬರ್ 28ರಂದು ನಡೆಯಲಿದೆ. ಈಗಾಗಲೇ ಪ್ರಚಾರ ಕಾರ್ಯ ನಡೆಯುತ್ತಿದೆ, 11 ರಾಜ್ಯಗಳಲ್ಲಿ ಉಪ ಚುನಾವಣೆ ಇದೆ. ಆದ್ದರಿಂದ, ಮಾರ್ಗಸೂಚಿಯಲ್ಲಿ ತಿದ್ದುಪಡಿ ಮಾಡಲಾಗಿದೆ.

ಬಿಹಾರ ವಿಧಾನಸಭೆ ಚುನಾವಣೆಗೆ ಎನ್‌ಸಿಪಿಯಿಂದಲೂ ಸ್ಪರ್ಧೆ

ಅನ್ ಲಾಕ್ ಮಾರ್ಗಸೂಚಿ 5.0 ಪ್ರಕಾರ ಕೇಂದ್ರ ಗೃಹ ಇಲಾಖೆ ಅಕ್ಟೋಬರ್ 15ರ ಬಳಿಕ ರಾಜಕೀಯ ಸಮಾವೇಶ, ಧಾರ್ಮಿಕ ಕಾರ್ಯಕ್ರಮಗಳನ್ನು 100 ಜನರ ಮಿತಿ ಇಲ್ಲದೇ ನಡೆಸಲು ಒಪ್ಪಿಗೆ ನೀಡಿತ್ತು. ಆದರೆ, ಚುನಾವಣೆ ಪ್ರಚಾರಕ್ಕೆ ತೊಂದರೆ ಆಗುವ ಹಿನ್ನಲೆಯಲ್ಲಿಈಗ ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ.

ಬಿಹಾರ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ತಕ್ಷಣದಿಂದಲೇ ಸಮಾವೇಶ ನಡೆಸಬಹುದು

ತಕ್ಷಣದಿಂದಲೇ ಸಮಾವೇಶ ನಡೆಸಬಹುದು

ಚುನಾವಣೆ ನಡೆಯುವ ಬಿಹಾರ ಮತ್ತು ಉಪ ಚುನಾವಣೆ ನಡೆಯುವ 11 ರಾಜ್ಯಗಳಲ್ಲಿ ತಕ್ಷಣದಿಂದಲೇ ಸಮಾವೇಶಗಳನ್ನು ನಡೆಸಿ ಪ್ರಚಾರ ನಡೆಸಬಹುದು. ಆದರೆ, ಕಂಟೈನ್ಮೆಂಟ್ ಝೋನ್ ಇರುವ ಪ್ರದೇಶದಲ್ಲಿ ಸಮಾವೇಶ ನಡೆಸುವಂತಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿದೆ.

ಶೇ 50ರಷ್ಟು ಭರ್ತಿಯಾಗಬೇಕು

ಶೇ 50ರಷ್ಟು ಭರ್ತಿಯಾಗಬೇಕು

ಹಾಲ್, ಸಮುದಾಯ ಭವನಗಳಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಶೇ 50ರಷ್ಟು ಜನರು ಸೇರಲು ಅವಕಾಶ ನೀಡಲಾಗಿದೆ. ಮೈದಾನದಲ್ಲಿ ಸಮಾವೇಶ ನಡೆಸುವಾಗ ಅದರ ಗಾತ್ರ ನೋಡಿಕೊಂಡು 200 ಜನರು ಸೇರಲು ಅವಕಾಶ ಕೊಡಲಾಗಿದೆ. ಆದರೆ, ಸಾಮಾಜಿಕ ಅಂತರ ಕಾಪಾಡಬೇಕು, ಎಲ್ಲರೂ ಮಾಸ್ಕ್ ಧರಿಸಿರಬೇಕು.

ಎಲ್ಲೆಲ್ಲಿ ಚುನಾವಣೆ ನಡೆಯಲಿದೆ

ಎಲ್ಲೆಲ್ಲಿ ಚುನಾವಣೆ ನಡೆಯಲಿದೆ

ಬಿಹಾರ ವಿಧಾನಸಭಾ ಚುನಾವಣೆ ಹೊರತುಪಡಿಸಿದರೆ ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ, ಹರ್ಯಾಣ, ಜಾರ್ಖಂಡ್, ಛತ್ತೀಸ್‌ಗಢ, ಮಣಿಪುರ, ನಾಗಾಲ್ಯಾಂಡ್ ಮತ್ತು ಒಡಿಶಾ ರಾಜ್ಯದಲ್ಲಿ ಉಪ ಚುನಾವಣೆಗಳು ನಡೆಯುತ್ತಿವೆ.

ರಾಜ್ಯ ಸರ್ಕಾರದ ಮಾರ್ಗಸೂಚಿ

ರಾಜ್ಯ ಸರ್ಕಾರದ ಮಾರ್ಗಸೂಚಿ

ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ನಡೆಸುವಾಗ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸೆಪ್ಟೆಂಬರ್ 30ರಂದು ಗೃಹ ಇಲಾಖೆ ಹೊರಡಿಸಿದ ಮಾರ್ಗಸೂಚಿ ಪಾಲಿಸಬೇಕು. ರಾಜ್ಯ ಸರ್ಕಾರಗಳು ಚುನಾವಣಾ ಪ್ರಚಾರಕ್ಕಾಗಿಯೇ ಹೊಸ ಮಾರ್ಗಸೂಚಿಗಳನ್ನು ರಚಿಸಬೇಕು ಎಂದು ಗೃಹ ಇಲಾಖೆ ಹೇಳಿದೆ.

English summary
Home ministry allowed the political gatherings in Bihar and other poll-bound states before October 15. Unlock 5.0 guidelines said that people not allowed political gatherings before October 15, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X