'ಮೋದಿ ಟ್ವಿಟ್ಟರ್ ನಲ್ಲಿ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೀಡಿಲ್ಲ'

ಪ್ರಧಾನಿ ನರೇಂದ್ರ ಮೋದಿ ಯಾರದಾದರೂ ಟ್ವಿಟ್ಟರ್ ಖಾತೆಯನ್ನು ಫಾಲೋ ಮಾಡ್ತಿದ್ದಾರೆ ಅಂದರೆ, ಅದರರ್ಥ ಆ ವ್ಯಕ್ತಿಗೆ ಅವರು 'ಕ್ಯಾರೆಕ್ಟರ್ ಸರ್ಟಿಫಿಕೇಟ್' ನೀಡಿದ್ದಾರೆ ಅಂತಲ್ಲ ಎಂದು ಬಿಜೆಪಿಯ ಸಾಮಾಜಿಕ ಜಾಲತಾಣ ತಂಡವು ಹೇಳಿದೆ.

ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಲವೀಯ ಮಾತನಾಡಿ, "ಪ್ರಧಾನಿಗಳು ಯಾರದಾದರೂ ಟ್ವಿಟ್ಟರ್ ಖಾತೆ ಅನುಸರಿಸುತ್ತಿದ್ದಾರೆ ಅಂದರೆ, ಅದು ಆ ವ್ಯಕ್ತಿ ಪಾಲಿಗೆ ಸನ್ನಡತೆ ಪ್ರಮಾಣ ಪತ್ರ ಅಲ್ಲ. ಜತೆಗೆ ಆ ವ್ಯಕ್ತಿ ಸ್ವತಃ ಹೇಗೆ ನಡೆದುಕೊಳ್ಳುತ್ತಾರೆ ಎಂದು ನೀಡಿದ ಖಾತ್ರಿ ಅಲ್ಲ" ಎಂದಿದ್ದಾರೆ.

PM not giving a character certificate by following someone on Twitter: BJP IT Cell

ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಅವರ ಹತ್ಯೆಯಾದ ನಂತರ ಕಾಂಗ್ರೆಸ್ ನಿಂದ ಆರೋಪ ಕೇಳಿಬಂದಿತ್ತು. ದ್ವೇಷ ಬಿತ್ತುವ ಸಂದೇಶಗಳನ್ನು ಮಾಡಿದ್ದ ಕೆಲ ಮಂದಿಯನ್ನು (ಕನಿಷ್ಠ ನಾಲ್ಕು ಮಂದಿ) ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಿದ್ದಾರೆ ಎಂಬುದು ಆಕ್ರೋಶಕ್ಕೆ ಕಾರಣವಾಗಿತ್ತು.

ಟ್ವಿಟ್ಟರ್ ನಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಹ ಫಾಲೋ ಮಾಡುವ ಬಗ್ಗೆ ಮಾಲವೀಯ ಗಮನ ಸೆಳೆದಿದ್ದಾರೆ.

"ನಮ್ಮ ಪ್ರಧಾನಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಂಬುವ ಅಪರೂಪದ ನಾಯಕ. ಅವರು ಈ ವರೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯಾರನ್ನೂ ಬ್ಲಾಕ್ ಅಥವಾ ಅನ್ ಫಾಲೋ ಮಾಡಿಲ್ಲ" ಎಂದು ಅವರು ಹೇಳಿದ್ದಾರೆ.

#BlockNarendraModi ಹ್ಯಾಷ್ ಟ್ಯಾಗ್ ಸೃಷ್ಟಿ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಅವರನ್ನು ಬ್ಲಾಕ್ ಮಾಡಿ ಎಂದು ಕರೆ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಅಮಿತ್ ಮಾಲವೀಯ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+