• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿವೃತ್ತರಾದ ಧೋನಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಸ್ಪರ್ಶಿ ಪತ್ರ

|
Google Oneindia Kannada News

ನವದೆಹಲಿ, ಆಗಸ್ಟ್ 20: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರು ಭಾರತೀಯ ಕ್ರಿಕೆಟ್ ಕ್ಷೇತ್ರಕ್ಕೆ ನೀಡಿದ್ದ ಅನುಪಮ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಕಳೆದ ಒಂದೂವರೆ ದಶಕದಿಂದ ನೀಡಿದ ಕೊಡುಗೆಗಾಗಿ ಧೋನಿಗೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ಆಗಸ್ಟ್ 15ರಂದು ದಿಢೀರನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಧೋನಿಗೆ, ಪ್ರಧಾನಿ ನರೇಂದ್ರ ಮೋದಿ ಬುಧವಾರ ಎರಡು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಧೋನಿ ಕುರಿತು ಮೆಚ್ಚುಗೆ ಮಾತುಗಳನ್ನಾಡಿರುವ ಪ್ರಧಾನಿ, ಭವಿಷ್ಯದ ಜೀವನದ ಕುರಿತು ಶುಭ ಹಾರೈಸಿದ್ದಾರೆ.

''2024ರ ಲೋಕಸಭೆ ಚುನಾವಣೆಯಲ್ಲಿ ಧೋನಿ ಸೆಣಸಾಡಲಿ''''2024ರ ಲೋಕಸಭೆ ಚುನಾವಣೆಯಲ್ಲಿ ಧೋನಿ ಸೆಣಸಾಡಲಿ''

'ಕಲಾವಿದ, ಸೈನಿಕ ಮತ್ತು ಕ್ರೀಡಾಪಟು ಬಯಸುವುದು ಮೆಚ್ಚುಗೆಯನ್ನು. ಅವರ ಕಠಿಣ ಶ್ರಮ ಮತ್ತು ತ್ಯಾಗವನ್ನು ಗಮನಿಸಿ ಎಲ್ಲರಿಂದಲೂ ಪ್ರಶಂಸೆ ಸಿಗಬೇಕೆನ್ನುತ್ತಾರೆ. ನಿಮ್ಮ ಮೆಚ್ಚುಗೆ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು' ಎಂದು ಧೋನಿ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ...

ನಿಮ್ಮ ಕೊಡುಗೆ ಅಜರಾಮರ

ನಿಮ್ಮ ಕೊಡುಗೆ ಅಜರಾಮರ

ನಿಮ್ಮ ನಿವೃತ್ತಿ ನಿರ್ಧಾರದಿಂದ 130 ಕೋಟಿ ಭಾರತೀಯರು ನಿರಾಶೆಗೊಂಡಿದ್ದಾರೆ, ಆದರೆ ಕಳೆದ ಒಂದೂವರೆ ದಶಕದಲ್ಲಿ ಭಾರತೀಯ ಕ್ರಿಕೆಟ್‌ಗೆ ನೀವು ನೀಡಿದ ಕೊಡುಗೆಗೆ ಎಂದೆಂದಿಗೂ ಕೃತಜ್ಞರಾಗಿರುತ್ತಾರೆ. ಅಂಕಿಅಂಶಗಳ ಮೂಲಕ ನಿಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ನೋಡಿದರೆ ನೀವು ಬಹಳ ಯಶಸ್ವಿ ನಾಯಕರಲ್ಲಿ ಒಬ್ಬರು. ಭಾರತ ತಂಡವನ್ನು ಜಗತ್ತಿನ ಕ್ರಿಕೆಟ್ ಪಟ್ಟಿಗಳಲ್ಲಿ ಮುಂಚೂಣಿಗೆ ಕೊಂಡೊಯ್ದವರು.

ನಿಮ್ಮ ಹೆಸರು ಜಗತ್ತಿನ ಬ್ಯಾಟಿಂಗ್ ದಿಗ್ಗಜರಲ್ಲಿ ಒಬ್ಬರಾಗಿ, ಮಹಾನ್ ಕ್ರಿಕೆಟ್ ನಾಯಕರಲ್ಲಿ ಒಬ್ಬರಾಗಿ, ಕ್ರಿಕೆಟ್ ಕ್ರೀಡೆ ಕಂಡ ಅತ್ಯುತ್ತಮ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿ ಇತಿಹಾಸದಲ್ಲಿ ನಿಮ್ಮ ಹೆಸರು ಚಿರವಾಗಿ ಉಳಿಯುತ್ತದೆ ಎಂದು ಮೋದಿ ಹೇಳಿದ್ದಾರೆ.

ಕ್ರೀಡಾಪಟುವಷ್ಟೇ ಅಲ್ಲ

ಕ್ರೀಡಾಪಟುವಷ್ಟೇ ಅಲ್ಲ

ಕಠಿಣ ಸನ್ನಿವೇಶಗಳಲ್ಲಿ ನಿಮ್ಮ ಮೇಲಿನ ವಿಶ್ವಾಸಾರ್ಹತೆ, ಪಂದ್ಯಗಳನ್ನು ಮುಗಿಸುವ ನಿಮ್ಮ ಶೈಲಿ, ಮುಖ್ಯವಾಗಿ 2011ರ ವಿಶ್ವಕಪ್ ಫೈನಲ್‌ ಪಂದ್ಯ ಹಲವು ಪೀಳಿಗೆಗಳ ನೆನಪಿನಲ್ಲಿ ಎಂದೆಂದಿಗೂ ಇರಲಿದೆ. ಆದರೆ ಮಹೇಂದ್ರ ಸಿಂಗ್ ಧೋನಿ ಎಂಬ ಹೆಸರು ಅವರ ವೃತ್ತಿ ಬದುಕಿನ ಅಂಕಿ ಅಂಶಗಳು ಅಥವಾ ಪಂದ್ಯ ಗೆಲ್ಲಿಸುವ ನಿರ್ದಿಷ್ಟ ಪಾತ್ರಗಳಿಂದಾಗಿ ಮಾತ್ರವೇ ನೆನಪಿನಲ್ಲಿ ಉಳಿಯುವುದಿಲ್ಲ. ನಿಮ್ಮನ್ನು ಒಬ್ಬ ಕ್ರೀಡಾಪಡುವಾಗಿ ಮಾತ್ರವೇ ನೋಡುವುದು ಅನ್ಯಾಯವಾಗುತ್ತದೆ. ನೀವು ಮೂಡಿಸಿದ ಪ್ರಭಾವವನ್ನು ಮಾಪನ ಮಾಡುವುದು ಸಾಧ್ಯವಾಗದು.

ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಶಾಕ್: ಎಂಎಸ್ ಧೋನಿ ಮತ್ತು ರೈನಾ ನಿವೃತ್ತಿಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಶಾಕ್: ಎಂಎಸ್ ಧೋನಿ ಮತ್ತು ರೈನಾ ನಿವೃತ್ತಿ

ಕೋಟ್ಯಂತರ ಜನರಿಗೆ ಸ್ಫೂರ್ತಿ

ಕೋಟ್ಯಂತರ ಜನರಿಗೆ ಸ್ಫೂರ್ತಿ

ಸಣ್ಣ ಪಟ್ಟಣವೊಂದರಿಂದ ಕಷ್ಟಪಟ್ಟು ಬೆಳೆದ ನೀವು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರಿ. ನಿಮ್ಮಷ್ಟಕ್ಕೆ ಹೆಸರು ಮಾಡಿದಿರಿ. ಎಲ್ಲಕ್ಕಿಂತ ಮುಖ್ಯವಾಗಿ ಭಾರತಕ್ಕೆ ಹೆಮ್ಮೆ ತಂದಿರಿ. ನಿಮ್ಮ ಬೆಳವಣಿಗೆ ಮತ್ತು ನಡತೆ ಕೋಟ್ಯಂತರ ಯುವ ಜನರಿಗೆ ಬಲ ಮತ್ತು ಸ್ಫೂರ್ತಿ ನೀಡಿದೆ. ನವ ಭಾರತದ ಚೈತನ್ಯದ ಮುಖ್ಯ ದೃಷ್ಟಾಂತಗಳಲ್ಲಿ ನೀವು ಒಬ್ಬರು. ಕುಟುಂಬದ ಹೆಸರು ಯುವ ಜನರ ಹಣೆಬರಹವನ್ನು ಬರೆಯುವುದಿಲ್ಲ. ಅವರಾಗಿಯೇ ತಮ್ಮ ಹೆಸರು ಮತ್ತು ಗುರಿಯನ್ನು ಸಾಧಿಸುತ್ತಾರೆ.

ಒತ್ತಡ ಎದುರಿಸುವುದನ್ನು ಕಲಿಸಿದ್ದೀರಿ

ಒತ್ತಡ ಎದುರಿಸುವುದನ್ನು ಕಲಿಸಿದ್ದೀರಿ

ಮೈದಾನದಲ್ಲಿನ ನಿಮ್ಮ ಅನೇಕ ಕ್ಷಣಗಳು ಭಾರತದ ಒಂದು ನಿರ್ದಿಷ್ಟ ಪೀಳಿಗೆಗೆ ಪ್ರೇರಣೆಯಾಗಿದೆ. ಈ ಪೀಳಿಗೆಯ ಭಾರತೀಯರು ಸವಾಲುಗಳನ್ನು ಎದುರಿಸಲು ಹಿಂಜರಿಯುವುದಿಲ್ಲ ಮತ್ತು ಕಠಿಣ ಸಂದರ್ಭಗಳಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸುತ್ತಾರೆ. ನೀವು ಸವಾಲುಗಳನ್ನು ಎದುರಿಸುವ ಮತ್ತು ಅತ್ಯಂತ ಒತ್ತಡದ ಸಂದರ್ಭಗಳಲ್ಲಿ ಹೆಚ್ಚು ತಿಳಿವಳಿಕೆಯಿಲ್ಲದ ಯುವಕರಿಗೆ ಬೆಂಬಲ ನೀಡುವುದನ್ನು ನೋಡಿದ್ದೇವೆ. ಇದಕ್ಕೆ 2007ರ ಟಿ-20 ವಿಶ್ವಕಪ್ ಫೈನಲ್ ಅತ್ಯಂತ ಸೂಕ್ತ ಉದಾಹರಣೆ.

ಲಡಾಕ್‌ನಲ್ಲಿ ಸೈನಿಕರೊಂದಿಗೆ ಸಮಯ ಕಳೆದ ಲೆ.ಕರ್ನಲ್ ಧೋನಿಲಡಾಕ್‌ನಲ್ಲಿ ಸೈನಿಕರೊಂದಿಗೆ ಸಮಯ ಕಳೆದ ಲೆ.ಕರ್ನಲ್ ಧೋನಿ

ಭಾರತೀಯ ಸೇನೆಯ ನಂಟು

ಭಾರತೀಯ ಸೇನೆಯ ನಂಟು

ನೀವು ಯಾವ ರೀತಿಯ ಕೇಶ ವಿನ್ಯಾಸ ಶೈಲಿ ಹೊಂದಿದ್ದಿರಿ ಎನ್ನುವುದು ಮುಖ್ಯವಲ್ಲ. ಸೋಲು ಮತ್ತು ಗೆಲುವು ಎರಡೂ ಸಂದರ್ಭಗಳಲ್ಲಿ ಶಾಂತಯುತವಾಗಿ ಇರುತ್ತಿದ್ದದ್ದು ಪ್ರತಿ ಯುವಕರಿಗೂ ಮುಖ್ಯ ಪಾಠ. ಭಾರತೀಯ ಸಶಸ್ತ್ರ ಪಡೆಗಳೊಂದಿಗಿನ ನಿಮ್ಮ ವಿಶೇಷ ನಂಟನ್ನು ಶ್ಲಾಘಿಸುತ್ತೇನೆ. ನಿಮ್ಮೊಂದಿಗೆ ಕಾಲ ಕಳೆಯಲು ಇನ್ನು ಸಾಕ್ಷಿ ಮತ್ತು ಜಿವಾಗೆ ಸಮಯ ಸಿಗಲಿದೆ ಎಂದು ಭಾವಿಸುತ್ತೇನೆ ಎಂದಿರುವ ಮೋದಿ, ಧೋನಿಯ ಭವಿಷ್ಯದ ಬದುಕಿಗೆ ಶುಭ ಕೋರಿದ್ದಾರೆ.

English summary
Prime Minister Narendra Modi has written a letter to cricketer MS Dhoni who retired on August 15 and calls him a phenomenon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X