Vande Bharat Express: ಅಸ್ಸಾಂನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ನವದೆಹಲಿ, ಮೇ. 29: ಈಶಾನ್ಯ ಭಾಗದ ಜನರಿಗೆ ರೈಲು ಪ್ರಯಾಣದ ಆನಂದವನ್ನು ಪಡೆಯಲು ಭಾರತೀಯ ರೈಲ್ವೆಯ ಕ್ರಮದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಸ್ಸಾಂನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅತ್ಯಾಧುನಿಕ ವಂದೇ ಭಾರತ್ ರೈಲಿಗೆ ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

ಪ್ರಧಾನಮಂತ್ರಿಯವರು ನ್ಯೂ ಬೊಂಗೈಗಾಂವ್ - ದುದ್ನೋಯ್ - ಮೆಂಡಿಪಥರ್ ಮತ್ತು ಗುವಾಹಟಿ - ಚಾಪರ್ಮುಖ್ ಹೊಸದಾಗಿ ವಿದ್ಯುದ್ದೀಕರಿಸಿದ ವಿಭಾಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಇಲ್ಲಿನ ಲುಮ್‌ಡಿಂಗ್‌ನಲ್ಲಿ ಹೊಸ ಡೆಮೊ ಮತ್ತು ಮೆಮೊ (ರೈಲುಗಳ ಕಾರ್ಯಾಗಾರ) ಶೆಡ್ ಅನ್ನು ಕೂಡ ಪ್ರಧಾನಿ ಉದ್ಘಾಟಿಸಲಿದ್ದಾರೆ.

PM Narendra Modi will flag off Assam

ಇದು ಅಸ್ಸಾಂನ ಗುವಾಹಟಿ ಮತ್ತು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಡುವಿನ ಮೊದಲ ಪ್ರೀಮಿಯಂ ಸೆಮಿ-ಹೈ ಸ್ಪೀಡ್ , ಸುಸಜ್ಜಿತ ಸಂಪೂರ್ಣ ಏರ್ ಕಂಡಿಷನರ್ ಸೇವೆಯಾಗಿದೆ. "ರೈಲು ವಾರಕ್ಕೆ ಆರು ದಿನಗಳು ಈ ವಿಭಾಗದಲ್ಲಿ ಓಡಾಡಲಿದೆ. ಮಂಗಳವಾರ ಈ ರೈಲಿನ ಯಾವುದೇ ಸೇವೆ ಇರುವುದಿಲ್ಲ" ಎಂದು ರೈಲ್ವೇ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಹೊಸ ಸೇವೆಯು ಗುವಾಹಟಿ ಮತ್ತು ನ್ಯೂ ಜಲ್ಪೈಗುರಿ ನಡುವಿನ 411 ಕಿಮೀ ದೂರವನ್ನು 5 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ . ಈ ವೇಗದ ರೈಲಿನಿಂದ ಪ್ರಸ್ತುತ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯು ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ. ಇದು ಈಶಾನ್ಯದ ಜನರಿಗೆ ಉತ್ತಮ ಪ್ರಯಾಣದ ಅನುಭವ ನೀಡಲಿದೆ. ಇದು ಈ ವಲಯದಲ್ಲಿ ಅತ್ಯಂತ ವೇಗದ ರೈಲು ಆಗಲಿದ್ದು, ಐಟಿ ವೃತ್ತಿಪರರು, ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

PM Narendra Modi will flag off Assam

ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶದಲ್ಲಿ ರೈಲು ಪ್ರಯಾಣದ ಗುಣಮಟ್ಟ ಮತ್ತು ವೇಗವನ್ನು ಹೆಚ್ಚಿಸಲು ಭಾರತೀಯ ರೈಲ್ವೇಸ್ ಹಾಕಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ವಯಂ ಚಾಲಿತ ಸೆಮಿ-ಹೈ ಸ್ಪೀಡ್ ರೈಲು. ಇದು ಎರಡೂ ತುದಿಗಳಲ್ಲಿ ವಾಯುಬಲವೈಜ್ಞಾನಿಕ ವಿನ್ಯಾಸವನ್ನು ಹೊಂದಿದೆ. ಇದು ಗಾಳಿಯ ಎಳೆತವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ರೈಲು ಕೇಂದ್ರೀಕೃತ ಕೋಚ್ ಮಾನಿಟರಿಂಗ್ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ. ಇದು ಎಂಟು ಕೋಚ್ಚ್‌ಗಳು ಚೇರ್ ಕಾರ್ ಕಾನ್ಫಿಗರೇಶನ್‌ಗಳನ್ನು ಹೊಂದಿದೆ. 530 ಪ್ರಯಾಣಿಕರ ಆಸನ ಸಾಮರ್ಥ್ಯದೊಂದಿಗೆ ಸ್ಟೇನ್‌ಲೆಸ್ ಸ್ಟೀಲ್ ಕಾರ್ ಬಾಡಿ ಮತ್ತು ಆನ್‌ಬೋರ್ಡ್ ಸ್ಥಳದ ಗರಿಷ್ಠ ಬಳಕೆಯನ್ನು ಹೊಂದಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಕ್ಸಿಕ್ಯೂಟಿವ್ ಚೇರ್ ಕಾರ್‌ಗಳು ತಲಾ 52 ಆಸನ ಸಾಮರ್ಥ್ಯವನ್ನು ಹೊಂದಿವೆ. ಸಾಮಾನ್ಯ ಚೇರ್ ಕಾರುಗಳು ತಲಾ 78 ಆಸನ ಸಾಮರ್ಥ್ಯವನ್ನು ಹೊಂದಿವೆ ಮತ್ತು ಡ್ರೈವಿಂಗ್ ಟ್ರೈಲರ್ ಕೋಚ್‌ಗಳು ತಲಾ 44 ಆಸನ ಸಾಮರ್ಥ್ಯವನ್ನು ಹೊಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+