
ಕೈಕುಲುಕಿದರು, ಚಹಾ ಕುಡಿದರು, ಹಾಸ್ಯ ಚಟಾಕೆ ಹಾರಿಸಿದರು..: ಪ್ರಧಾನಿ ಮೋದಿ ಜೊತೆ ಬದ್ಧ ವೈರಿಗಳ ಅನ್ಯೋನ್ಯತೆ
ನವದೆಹಲಿ, ಡಿಸೆಂಬರ್ 6: ಭಾರತಕ್ಕೆ ದೊರಕಿದ ಜಿ-20 ಅಧ್ಯಕ್ಷ ಸ್ಥಾನವು ದೇಶದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಲು ಒಂದು ಅನನ್ಯ ಅವಕಾಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆಯಲ್ಲಿ ಹೇಳಿದರು.
ದೆಹಲಿಯಲ್ಲಿ ಕರೆಯಲಾಗಿದ್ದ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಪ್ರಧಾನಿ ಮಾತನಾಡಿದರು.
Gujarat Exit Poll Results 2022 : ಪ್ರಧಾನಿ ಪ್ರಚಾರದ ಬಳಿಕ ಡಲ್ ಆಯ್ತಾ ಆಪ್?
ಜಿ-20 ರಾಷ್ಟ್ರಗಳ ಅಧ್ಯಕ್ಷ ಸ್ಥಾನವು ಇಡೀ ದೇಶಕ್ಕೆ ಸೇರಿದ್ದು ಎಂದು ಮೋದಿ ಪ್ರತಿಪಾದಿಸಿದರು.
'ಇಂದು ಇಡೀ ಜಗತ್ತು ಕುತೂಹಲದಿಂದ ಭಾರತದೆಡೆಗೆ ನೋಡುತ್ತಿದೆ. ಜಾಗತಿಕವಾಗಿ ಭಾರತವು ಆಕರ್ಷಿಸಲ್ಪಟ್ಟಿದೆ. ಜಿ 20 ಅಧ್ಯಕ್ಷ ಸ್ಥಾನದಿಂದ ನಮ್ಮ ಸಾಮರ್ಥ್ಯ ಇನ್ನಷ್ಟು ಹೆಚ್ಚಿದೆ' ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 'ಸಾಮೂಹಿಕ ಕೆಲಸ'ದ ಪ್ರಾಮುಖ್ಯತೆಯ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. ವಿವಿಧ G-20 ಕಾರ್ಯಕ್ರಮಗಳ ಸಂಘಟನೆಯಲ್ಲಿ ಎಲ್ಲಾ ನಾಯಕರ ಸಹಕಾರವನ್ನು ಕೋರಿದರು.
ದೇಶದ ಮಹಾನಗರಗಳನ್ನು ಮೀರಿ ಭಾರತದ ಎಲ್ಲ ಪ್ರದೇಶಗಳನ್ನು ಜಗತ್ತಿಗೆ ತೋರಿಸಲು G-20 ಅಧ್ಯಕ್ಷ ಸ್ಥಾನವು ಸಹಾಯ ಮಾಡುತ್ತದೆ. ದೇಶದ ವಿವಿಧ ಪ್ರದೇಶಗಳ ಅನನ್ಯತೆಯ ಬಗ್ಗೆ ಜಗತ್ತಿಗೆ ತಿಳಿಯಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ವರ್ಷವಿಡೀ ನಡೆಯುವ ಜಿ 20 ಈವೆಂಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಸಂದರ್ಶಕರು ಭಾರತಕ್ಕೆ ಬರುತ್ತಾರೆ ಎಂದು ಮೋದಿ ತಿಳಿಸಿದರು.

ಜಿ -20 ಸಭೆಗಳು ದೇಶದ ಪ್ರವಾಸೋದ್ಯಮವನ್ನು ಉತ್ತೇಜಿಸಲಿವೆ. ಸ್ಥಳಗಳ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಜಿ -20 ಸಭೆಗಳು ಹೆಚ್ಚಿಸಲಿವೆ ಎಂದು ಪ್ರಧಾನಿ ಒತ್ತಿ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಡಿಯ ನವೀನ್ ಪಟ್ನಾಯಕ್, ಎಎಪಿಯ ಅರವಿಂದ್ ಕೇಜ್ರಿವಾಲ್, ವೈಎಸ್‌ಆರ್ ಕಾಂಗ್ರೆಸ್‌ನ ಜಗನ್ ಮೋಹನ್ ರೆಡ್ಡಿ, ಸಿಪಿಎಂನ ಸೀತಾರಾಂ ಯೆಚೂರಿ, ಟಿಡಿಪಿಯ ಎನ್.ಚಂದ್ರಬಾಬು ನಾಯ್ಡು, ಡಿಎಂಕೆಯ ಎಂ.ಕೆ.ಸ್ಟಾಲಿನ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಎಸ್. ಜೈಶಂಕರ್, ಪಿಯೂಷ್ ಗೋಯಲ್, ಪ್ರಲ್ಹಾದ್ ಜೋಶಿ ಮತ್ತು ಭೂಪೇಂದರ್ ಯಾದವ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.