Get Updates
Get notified of breaking news, exclusive insights, and must-see stories!

'ನಾಚಿಕೆಯಾಗಬೇಕು!' ಪಿತ್ರೋಡಾಗೆ ಮೋದಿ ಅಂಥ ಖಡಕ್ ಉತ್ತರ ನೀಡಿದ್ದೇಕೆ?

ನವದೆಹಲಿ, ಮಾರ್ಚ್ 22: ಏರ್ ಸ್ಟ್ರೈಕ್ ನಡೆದಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ಮೂಲಕ ಗುದ್ದು ನೀಡಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

"ಏರ್ ಸ್ಟ್ರೈಕ್ ನಲ್ಲಿ 300 ಜನರನ್ನು ಕೊಂದಿದ್ದು ನಿಜಕ್ಕೂ ಹೌದೇ? 26/11 ರ ಮುಂಬೈ ಸ್ಫೋಟ ಮಾಡಿದ್ದು ಏಳೆಂಟು ಭಯೋತ್ಪಾದಕರು. ಅದಕ್ಕಾಗಿ ಇಡೀ ಪಾಕಿಸ್ತಾನವನ್ನು ದೂರುವುದು ತರವೇ?" ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ ಸ್ಯಾಮ್ ಪಿತ್ರೋಡಾಗೆ ಮೋದಿ 'ನಾಚಿಕೆಯಾಗಬೇಕು' ಎಂದು ಖಡಕ್ ಪ್ರತ್ಯುತ್ತರ ನೀಡಿದ್ದಾರೆ

ಸರ್ಕಾರವನ್ನು ದೂರುವ ಭರದಲ್ಲಿ ಭಾರತೀಯ ಸೇನೆಗೆ ಅವಮಾನ ಮಾಡುತ್ತಿರುವುದನ್ನು ಈ ದೇಶದ ಜನ ಸಹಿಸಿಕೊಳ್ಳುವುದಿಲ್ಲ. ವಿಪಕ್ಷಗಳು ಪದೇ ಪದೇ ನಮ್ಮ ಸೇನೆಗೆ ಅವಮಾನ ಮಾಡುತ್ತಿವೆ. ಇದನ್ನು ಭಾರತೀಯರು ಕ್ಷಮಿಸುವುದಿಲ್ಲ' ಎಂದು ಮೋದಿ ವಿಪಕ್ಷಗಳಿಗೆ ತಪರಾಕಿ ನೀಡಿದ್ದಾರೆ.

Array

ಭಾರತೀಯರು ಇದನ್ನು ಸಹಿಸೋಲ್ಲ, ಮರೆಯೋಲ್ಲ!

"ವಿಪಕ್ಷಗಳು ಪದೇ ಪದೇ ನಮ್ಮ ಸೇನೆಗೆ ಅವಮಾನ ಮಾಡುತ್ತಿವೆ. ನಾನು ಭಾರತೀಯರಲ್ಲಿ ಮನವಿ ಮಾಡುತ್ತೇನೆ, ವಿಪಕ್ಷಗಳ ಹೇಳಿಕೆಗೆ ಅವರನ್ನು ಪ್ರಶ್ನೆ ಮಾಡಿ, ಅವರಿಗೆ ಹೇಳಿ, 'ನಾವು 130 ಕೋಟಿ ಭಾರತೀಯರು ಇದನ್ನು ಕ್ಷಮಿಸೋಲ್ಲ, ಮರೆಯೋಲ್ಲ ಎಂದು ತಿಳಿಸಿ. ಭಾರತ ಎಂದಿಗೂ ತನ್ನ ಸೇನೆಯ ಪರವಿದೆ ಎಂದು ಅವರಿಗೆ ಹೇಳಿ" - ನರೇಂದ್ರ ಮೋದಿ

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಉಗ್ರರಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸುತ್ತೇವೆ!

ಕಾಂಗ್ರೆಸ್ ನ ರಾಜಮನೆತನದ ವಿಧೇಯ ಆಸ್ಥಾನ ಸದಸ್ಯರು ಇಡೀ ದೇಶಕ್ಕೇ ಗೊತ್ತಿರುವುದನ್ನು ಇಂದು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಗೆ ಉಗ್ರರ ವಿರುದ್ಧ ದಾಳಿ ನಡೆಸುವುದಕ್ಕೆ ಸಧ್ಯವಿಲ್ಲ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ.

ಇದು ಹೊಸ ಭಾರತ. ಇಲ್ಲಿ ನಾವು ಉಗ್ರರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಉತ್ತರ ನೀಡುತ್ತೇವೆ- ನರೇಂದ್ರ ಮೋದಿ

ನಾಚಿಕೆಯಾಗಬೇಕು!

26/11 ರ ದಾಳಿಯಲ್ಲಿ ಎಂಟು ಭಯೋತ್ಪಾದಕರು ಬಂದರು, ದಾಳಿ ಮಾಡಿದರು. ಅದಕ್ಕಾಗಿ ನಾವು ಇಡೀ ಪಾಕಿಸ್ತಾನವನ್ನು ದೂರುವುದಕ್ಕಾಗುತ್ತದೆಯೇ? ಅಥವಾ ಇಡೀ ಪಾಕಿಸ್ತಾನದ ಮೇಲೆ ದಾಳಿ ನಡೆಸಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದ ಸ್ಯಾಮ್ ಪಿತ್ರೋಡಾಗೆ ಉತ್ತರಿಸಿದ ಮೋದಿ, 'ಕಾಂಗ್ರೆಸ್ ಪರವಾಗಿ ಆ ಪಕ್ಷದ ಅಧ್ಯಕ್ಷರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರ ಮತ್ತು ಮಾರ್ಗದರ್ಶಿ ಪಾಕಿಸ್ತಾನ್ ನ್ಯಾಶನಲ್ ಡೇ ಸೆಲೆಬ್ರೇಶನ್ ಗೆ ಉತ್ತಮ ಆರಂಭ ನೀಡಿದ್ದಾರೆ! ಬೇಸರವೆಂದರೆ ಭಾರತೀಯ ಸೇನೆಯನ್ನು ಅವಮಾನ ಮಾಡಿ, ನಾಚಿಕೆಯಾಗಬೇಕು!' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

Array

ಸ್ಯಾಮ್ ಪಿತ್ರೋಡಾ ಹೇಳಿಕೆ

"ಭಾರತ ಪಾಕಿಸ್ತಾನಿ ಉಗ್ರನೆಲೆಯ ಮೇಲೆ ಏರ್ ಸ್ಟ್ರೈಕ್ ಮಾಡಿದ್ದರ ಬಗ್ಗೆ ಮಾಹಿತಿ ಇಲ್ಲ, ಪಾಕಿಸ್ತಾನ ದಾಳಿ ಮಾಡಿದರೆ ಅದಕ್ಕೆ ನಾವು ಮಾತುಕತೆಯ ಮೂಲಕ ಉತ್ತರಿಸಬೇಕು, ಇಡೀ ಪಾಕಿಸ್ತಾನವನ್ನೂ ದೂರುವುದು ಸರಿಯಲ್ಲ" ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದರು. ಏರ್ ಸ್ಟ್ರೈಕ್ ನಡೆದಿದ್ದೇ ಅನುಮಾನ, 300 ಭಯೋತ್ಪಾದಕರನ್ನು ಕೊಂದಿದ್ದು ಸತ್ಯವೇ ಎಂದು ವ್ಯಂಗ್ಯವಾಗಿ ಕೇಳುವ ಮೂಲಕ ಸೇನೆಗೆ ಅವಮಾನ ಮಾಡಿದ್ದಾರೆ ಎಂದು ಪಿತ್ರೋಡಾ ಅವರನ್ನು ಪ್ರಧಾನಿ ಮೋದಿ ದೂರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+