ಕೊವಿಡ್ ಲಸಿಕೆ ವಿತರಣೆ: ನ.24ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಸಭೆ
ನವದೆಹಲಿ, ನವೆಂಬರ್ 23: ಕೊವಿಡ್ 19 ಲಸಿಕೆ ವಿತರಣೆ ಕುರಿತು ನವೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಲಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿರುವ ಕೊರೊನಾ ಪರಿಸ್ಥಿತಿ ,ಕೊರೊನಾ ಲಸಿಕೆ ತಯಾರಿಕೆ, ಲಸಿಕೆ ಹಂಚಿಕೆ ಕುರಿತು ಸಭೆ ಕರೆದಿದ್ದಾರೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು, ಮೊದಲಿಗೆ ವಿವಿಧ ರಾಜ್ಯಗಳಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣದ ಕುರಿತು ಪರಾಮರ್ಶೆ ನಡೆಯಲಿದೆ.
ಇತ್ತೀಷೆಗಷ್ಟೇ ನೀತಿ ಆಯೋಗ ಸಭೆಯ ಬಳಿಕ ಮೂರನೇ ಹಂತದ ಕೊರೊನಾ ಲಸಿಕೆ ತಯಾರಿಕೆ ಪ್ರಕ್ರಿಯೆಗೆ ಪರವಾನಗಿ ನೀಡಲು ತುರ್ತು ಅಧಿಕಾರದ ಸ್ವರೂಪ ಮತ್ತು ಲಸಿಕೆಗಳ ಬಳಕೆಯ ವಿಧಾನಗಳನ್ನು ಕೇಂದ್ರ ಸರ್ಕಾರ ಅನ್ವೇಷಿಸುತ್ತದೆ ಎಂದು ಹೇಳಲಾಗಿತ್ತು.

ಪ್ರಧಾನಿ ಮಂಗಳವಾರ ಎರಡು ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ. ಮುಖ್ಯಮಂತ್ರಿಗಳ ಜತೆ ಹಾಗೂ ರಾಜ್ಯಗಳ ಪ್ರತಿನಿಧಿಯ ಜತೆ ಎಂದು ವರ್ಗೀಕರಿಸಲಾಗಿದೆ.
ಪ್ರಧಾನ ಮಂತ್ರಿ ಕಾರ್ಯಾಲಯ ರಚಿಸಿರುವ ಲಸಿಕೆ ಕಾರ್ಯಪಡೆಯು ತುರ್ತು ಬಳಕೆಯ ದೃಢೀಕರಣಕ್ಕಾಗಿ ನಿಯಮಗಳನ್ನು ರೂಪಸಿಲಾಗುವುದು ಎಂದು ಹೇಳಿತ್ತು. ಆದರೆ ಲಸಿಕೆ ತಯಾರಿಕೆ ಬಗ್ಗೆ ರಚಿಸಲಾಗಿರುವ ನ್ಯಾಷನಲ್ ಎಕ್ಸ್‌ಪರ್ಟ್ ಗ್ರೂಪ್ covid19 ಮಾರುಕಟ್ಟೆಗೆ ಬರುವ ಮುನ್ನ ನಿಯಮಗಳನ್ನು ರೂಪಿಸಲು ಸಲಹೆ ನೀಡಿತ್ತು.
ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿನೋದ್ ಪಾಲ್, ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯರಾಘವನ್ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಭಾಗವಹಿಸಿದ ಸಭೆಯಲ್ಲಿ ಬೆಲೆ ಸೇರಿದಂತೆ ಲಸಿಕೆಗಳಿಗೆ ಮುಂಗಡ ಖರೀದಿ ಬದ್ಧತೆಯ ವಿಷಯವನ್ನೂ ಚರ್ಚಿಸಲಾಗಿತ್ತು.












Click it and Unblock the Notifications