ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದ ಮೋದಿ ದುಬಾರಿ ಸೂಟ್

Written By:
Subscribe to Oneindia Kannada

ನವದೆಹಲಿ, ಆಗಸ್ಟ್ 20 (ಎಎನ್ಐ) : ಚಿನ್ನದ ಬಣ್ಣದ ಪಟ್ಟಿಯಲ್ಲಿ ಹಣೆಯಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದುಬಾರಿ ಸೂಟ್, ದಾಖಲೆ ಮೊತ್ತಕ್ಕೆ ಬಿಕರಿಯಾಗುವ ಮೂಲಕ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ.

ಹನ್ನೊಂದು ಲಕ್ಷ ಮೂಲ ಬೆಲೆಯಲ್ಲಿ ಆರಂಭವಾದ ಹರಾಜು ಪ್ರಕ್ರಿಯೆ 4.31 ಕೋಟಿ ರೂಪಾಯಿಗೆ ಅಂತಿಮವಾಗುವ ಮೂಲಕ ಗುಜರಾತ್, ಸೂರತ್ ನಗರದ ವಜ್ರದ ವ್ಯಾಪಾಯಿಯೊಬ್ಬರು ಈ ಸೂಟನ್ನು ತನ್ನದಾಗಿಸಿ ಕೊಂಡಿದ್ದಾರೆ. (ಸಮೀಕ್ಷೆ, ಮೋದಿಗೆ ಸಾಟಿಯಿಲ್ಲ)

ಹರಾಜು ಐದು ಕೋಟಿಗೆ ಮೇಲೆ ಹೋದರೂ ಸೂಟ್ ನಾನೇ ಖರೀದಿಸುತ್ತಿದ್ದೆ ಎಂದು ಸೂಟ್ ಖರೀದಿಸಿರುವ ಉದ್ಯಮಿ ಲಾಲ್ಜಿ ತುಳಸೀಭಾಯ್ ಪಟೇಲ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

PM Narendra Modi's auctioned suit enters Guinness Book of World Records

ಎಂಬತ್ತು ಸಾವಿರದಿಂದ ಐದು ಲಕ್ಷ ರೂಪಾಯಿ ಮೊತ್ತದ ಈ ಸೂಟನ್ನು ಪ್ರಧಾನಿ ಮೋದಿ, ಕಳೆದ ವರ್ಷ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಆಗಮಿಸಿದಾಗ ಧರಿಸಿದ್ದರು.

ಹರಾಜಿನಲ್ಲಿ ಬಂದ ಹಣವನ್ನು ಗಂಗಾನದಿ ಶುದ್ದೀಕರಣಕ್ಕೆ ಬಳಸಲಾಗುವುದು ಎಂದು ಪ್ರಧಾನಮಂತ್ರಿ ಕಾರ್ಯಾಲಯ ಈ ಹಿಂದೆಯೇ ಪ್ರಕಟಿಸಿದೆ.

ಮೋದಿಯವರದ್ದು ಸೂಟ್, ಬೂಟಿನ ಸರಕಾರ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ, ವಿಪಕ್ಷದ ನಾಯಕರು ಟೀಕಿಸಿದ್ದರು. ಈಗ ಭರ್ಜರಿ ಮೊತ್ತಕ್ಕೆ ಈ ಸೂಟ್ ಹರಾಜಾಗುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ಈ ಹರಾಜಿನ ಮೂಲಕ ಅತೀ ದುಬಾರಿ ಬೆಲೆಗೆ ಮಾರಾಟವಾದ ಸೂಟ್ ಎಂಬ ದಾಖಲೆಯೊಂದಿಗೆ 'ಮೋದಿ ಸೂಟ್' ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Suit worn by PM Narendra Modi during America President Barack Obama's India visit, has auctioned for over Rs. 4.3 crores and entered into the Guinness Book of World Records for highest ever bid, ANI report.
Please Wait while comments are loading...