ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಯಾಕೆ ಆಕ್ಟೀವ್ ಆಗಿರ್ತಾರೆ ಗೊತ್ತಾ?

|
Google Oneindia Kannada News

ನವದೆಹಲಿ, ಡಿ 20: ಪ್ರಧಾನಮಂತ್ರಿ ಮತ್ತು ಪ್ರಧಾನಮಂತ್ರಿ ಕಾರ್ಯಾಲಯ ಸಾಮಾಜಿಕ ತಾಣದ ಮೂಲಕ ಸಾರ್ವಜನಿಕ ಸಂಪರ್ಕದಲ್ಲಿದ್ದ ಉದಾಹರಣೆಗಳು ಕಮ್ಮಿ ಜೊತೆಗೆ ಜನರು ಕೂಡಾ ಸಾಮಾಜಿಕ ತಾಣಗಳಲ್ಲಿ ಈಗಿನಂತೆ ಸಕ್ರಿಯವಾಗಿರಲಿಲ್ಲ.

ಕಾಲ ಬದಲಾದಂತೆ ನಾವೂ ಬದಲಾಗಬೇಕೆಂದು ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಜನರನ್ನು ತಲುಪಲು ಸಾಮಾಜಿಕ ತಾಣವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವುದಂತೂ ಹೌದು.

PM Modi used one way communication traffic through Twitter and Facebook

ಅದರಲ್ಲೂ ಟ್ವಿಟರ್ ಮೂಲಕ ದಿನವೂ ತಮ್ಮ ದಿನಚರಿ ಮತ್ತು ಪ್ರಧಾನಿ ಕಾರ್ಯಾಲಯದ ಮಾಹಿತಿಗಳನ್ನು ಜನರಿಗೆ ನೀಡುತ್ತಿದ್ದಾರೆ. ಜೊತೆಗೆ, ಬಾನುಲಿ ಮೂಲಕ ದೇಶದ ಗ್ರಾಮೀಣ ಪ್ರದೇಶದ ನಾಗರೀಕರಿಗೂ ಭರವಸೆಯ ಸಂದೇಶವನ್ನು ಮುಟ್ಟಿಸುತ್ತಿದ್ದಾರೆ.

ಇದಕ್ಕೆ ಪೂರಕ ಎನ್ನುವಂತೆ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಟಿಕೆಟ್ ಸಿಗಬೇಕಿದ್ದರೆ ಅಭ್ಯರ್ಥಿಗೆ ಟ್ವಿಟರ್ ನಲ್ಲಿ ಕನಿಷ್ಠ ಐವತ್ತು ಸಾವಿರ ಹಿಂಬಾಲಕರು ಇರಬೇಕೆನ್ನುವ ಸುದ್ದಿಯನ್ನೂ ಓದಿರುತ್ತೇವೆ.

ವಿಚಾರಕ್ಕೆ ಬರುವುದಾದರೆ, ವಿರೋಧ ಪಕ್ಷದವರು ಟ್ವಿಟರ್ ನಲ್ಲಿ ಮೋದಿ ಸಕ್ರಿಯವಾಗಿರುವುದಕ್ಕೆ ಕುಹುಕವಾಡಿರುವ ಉದಾಹರಣೆಗಳು ಸಾಕಷ್ಟಿವೆ. ಇದಕ್ಕೆ ರಾಹುಲ್ ಗಾಂಧಿ ಮುಂತಾದವರೂ ಹೊರತಾಗಿರಲಿಲ್ಲ.

ಆದೇ ರೀತಿ, ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಸಕ್ರಿಯವಾಗಿರುವುದಕ್ಕೆ ಇದೊಂದು 'ಪಲಾಯನವಾದ' ಮಾಡಲು ಇರುವ ದಾರಿ ಎಂದು ಲೇವಡಿ ಮಾಡಿದ್ದಾರೆ.

ಮೋದಿ ಅಧಿಕಾರಕ್ಕೆ ಬಂದ ದಿನದಿಂದ ಟ್ವಿಟರ್ ನಲ್ಲಿ ತುಂಬಾ ಸಕ್ರಿಯವಾಗಿದ್ದಾರೆ. ಇದೊಂದು ಒನ್ ವೇ ಟ್ರಾಫಿಕ್ ಇದ್ದಂತೆ. ಇಲ್ಲಿ ಅವರನ್ನು ಪ್ರಶ್ನಿಸುವವರು ಯಾರೂ ಇಲ್ಲ, ಅವರು ನಡೆದಿದ್ದೇ ದಾರಿ ಎಂದು ಯಚೂರಿ ರಾಜ್ಯಸಭೆಯಲ್ಲಿ ಮೋದಿ ವಿರುದ್ದ ಕಿಡಿಕಾರಿದ್ದಾರೆ.

PM Modi used one way communication traffic through Twitter and Facebook

ರಾಜ್ಯಸಭೆಯಲ್ಲಿ ಮತಾಂತರದ ಕುರಿತು ನಡೆಯುತ್ತಿದ್ದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕಮ್ಯೂನಿಸ್ಟ್ ಮುಖಂಡ ಯಚೂರಿ, ನಮ್ಮ ಪ್ರಶ್ನೆಗೆ ಉತ್ತರಿಸಲಾಗದೇ ಮೋದಿ ಅವರ ಈ ಕಾರ್ಯವೈಖರಿ 'ಪಲಾಯುನವಾದ' ಅನ್ನದೇ ಮತ್ತಿನ್ನೇನು ಅನ್ನಬೇಕೆಂದು ಟೀಕಿಸಿದ್ದಾರೆ.

ಕೆಲವು ದಿನಗಳ ನಂತರ ಪ್ರಧಾನಿಗಳು ವಾಪಸ್ ಮನೆಗೆ ಬಂದಿದ್ದಾರೆ. ಆದರೆ, ಪ್ರಧಾನಿ ಫೇಸ್ ಬುಕ್, ಟ್ವಿಟರ್, ಬ್ಲಾಗುಗಳಲ್ಲಿ ಸಕ್ರಿಯವಾಗಿರುವುದು ಮಾತ್ರ ದುರಂತ.

ಇದರಲ್ಲಿ ಅವರನ್ನು ಪ್ರಶ್ನಿಸುವವರು ಯಾರೂ ಇಲ್ಲ. ತಮ್ಮ ಅಭಿಪ್ರಾಯವನ್ನು ಇಲ್ಲಿ ಪ್ರಕಟಿಸಿ ಸುಮ್ಮನಾದರೆ ಸಾಕಾಗುವುದಿಲ್ಲ, ನಮ್ಮ ಪ್ರಶ್ನೆಗೆ ಅವರು ಉತ್ತರಿಸಬೇಕಾಗುತ್ತದೆ ಎಂದು ಸೀತಾರಾಂ ಯಚೂರಿ ಹೇಳಿದ್ದಾರೆ.

English summary
Prime Minister Narendra Modi used one way communication traffic through Twitter and Facebook, CPI(M) leader Sitaram Yechury.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X