Sunita Williams: 'ಭಾರತೀಯರ ಹೃದಯಲ್ಲಿ ಸುನೀತಾ ವಿಲಿಯಮ್ಸ್': ಪ್ರಧಾನಿ ಮೋದಿ ಪತ್ರ, ಗಣ್ಯರ ಶುಭಹಾರೈಕೆ
Sunita Williams: ಭೂಮಿಯಿಂದ ಸಾವಿರಾರು ಮೈಲಿಗಳು ದೂರವಿರುದ್ಧ 1.4 ಬಿಲಿಯನ್ ಭಾರತೀಯರ ಹೃದಯಕ್ಕೆ ನೀವು ಹತ್ತಿರವಾಗಿದ್ದೀರಿ. ನಾವೆಲ್ಲವು ಯಾವಾಗಲೂ ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡುತ್ತೇವೆ. ಬಾಹ್ಯಾಕಾಶದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಯಲ್ಲಿ ತಾವು ತೋರಿದ ಧೈರ್ಯ, ತಾಳ್ಮೆ ಮತ್ತು ನಿಮ್ಮ ಪರಿಶ್ರಮ ಸ್ಪೂರ್ತಿದಾಯಕ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸುನೀತಾ ವಿಲಿಯಮ್ಸ್ (Sunita Williams) ಅವರ ಭೂಮಿಗೆ ಮರಳಿದ ಖುಷಿ ಹಂಚಿಕೊಂಡು ಪತ್ರ ಬರೆದಿದ್ದಾರೆ.
ಬಾಹ್ಯಾಕಾಶ ನಿಲ್ದಾಣದಲ್ಲಿ ಪರೀಕ್ಷೆಗೆಂದು ತೆರಳಿ ಕಳೆದ 09 ತಿಂಗಳುಗಳಿಂದ ಸಿಲುಕಿ ಇಂದು ಬುಧವಾರ ಮರಳಿ ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಭೂಮಿಗೆ ಲ್ಯಾಂಡ್ ಆದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರಿಗೆ ಪ್ರಧಾನಿ ಮೋದಿಯವರು ಸೇರಿ ಗಣ್ಯಾತಿಗಣ್ಯರು ಶುಭ ಕೋರಿದ್ದಾರೆ. ನೀವು ಭಾರತದ ಹೆಮ್ಮೆ ಎಂದು ಪ್ರಶಂಸಿಸಿದ್ದಾರೆ. Sunita Williams ಅವರ ಸಾಧನೆ ಕೊಂಡಾಡಿದ್ದಾರೆ. ಈ ಕುರಿತು ಪ್ರಧಾನಿ ಸಹ ಪತ್ರ ಮುಖೇನ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿಯವರ ಪತ್ರವನ್ನು ಕೇಂದ್ರ ಸಚಿವ ಡಾ.ಜೀತೇಂದ್ರ ಸಿಂಗ್ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪತ್ರದಲ್ಲಿ ''ಸುನೀತಾ ವಿಲಿಯಮ್ಸ್ ಅವರ ಆರೋಗ್ಯ, ಕಾರ್ಯಾಚರಣೆ, ಸುರಕ್ಷತೆ ಹಾಗೂ ಭೂಮಿಗೆ ಯಶಸ್ವಿಯಾಗಿ ಮರಳುವ ಬಗ್ಗೆ ಭಾರತದ ಜನರು ಪ್ರಾರ್ಥಿಸಿದ್ದಾರೆ. ಆ ಜನರ ಪರವಾಗಿ ನಿಮಗೆ ಶುಭಾಶಯ ಕೋರುತ್ತೇನೆ''

ಇಂದಿನ ಕಾರ್ಯಕ್ರಮದಲ್ಲಿ, ನಾನು (ಪಿಎಂ) ಖ್ಯಾತ ಗಗನಯಾತ್ರಿ ಮೈಕ್ ಮಾಸ್ಸಿಮಿನೊ ಅವರನ್ನು ಭೇಟಿಯಾದೆ. ಈ ವೇಳೆ ನಿಮ್ಮ ಹೆಸರು ಪ್ರಸ್ತಾಪಿಸಿ, ನಿಮ್ಮ ಬಗ್ಗೆ ಮತ್ತು ನಿಮ್ಮ ಕೆಲಸದ ಬಗ್ಗೆ ಎಷ್ಟು ಹೆಮ್ಮೆ ಎನಿಸುತ್ತದೆ. ನಿಮ್ಮ ಸಾಧನೆ ಕುರಿತು ಚರ್ಚಿಸಿದೆವು, ಅದರ ಬೆನ್ನಲ್ಲೆ ನಿಮಗೆ ಪತ್ರ ಬರೆಯಲು ಉತ್ಸುಕನಾದೆ ಎಂದು ಪ್ರಧಾನಿ ಹೇಳಿದ್ದಾರೆ.
ಅಮೆರಿಕಕ್ಕೆ ಭೇಟಿ ವೇಳೆ ಸಹ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಥವಾ ಮಾಜಿ ಅಧ್ಯಕ್ಷ ಜೋ ಬಿಡೆನ್ ಅವರರೊಂದಿಗೆ ಸಹ ನಿಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದೇನೆ. ಬೋನಿ ಪಾಂಡ್ಯ ಅವರಿ ನಿಮ್ಮ ಮರಳುವಿಕೆಗೆ ಕಾಯುತ್ತಿದ್ದರು. ದಿ. ದೀಪಕ್‌ಭಾಯ್ ಅವರ ಆಶೀರ್ವಾದಗಳು ನಿಮ್ಮ ಮೇಲಿದೆ ಎಂದಿರುವ ಪ್ರಧಾನ ಮಂತ್ರಿಗಳು 2016 ರಲ್ಲಿ ಅಮೆರಿಕ ಭೇಟಿ ವೇಳೆ ಸುನೀತಾ ವಿಲಿಯಮ್ಸ್ ಭೇಟಿಯನ್ನು ಸ್ಮರಿಸಿದ್ದಾರೆ. ಸದ್ಯ ಆನ್‌ಲೈನ್‌ನಲ್ಲಿ ಪ್ರಧಾನಿ ಮತ್ತು ಸುನೀತಾರ ಫೋಟೋ ಹರಿದಾಡುತ್ತಿದೆ.
ಭೂಮಿ ಹಿಂದಿರುಗಿದ ನಿಮ್ಮನ್ನು ಕಾಣಲು ಇಡಿ ಭಾರತವೇ ಕಾತದಿಂದ ಕಾಯುತ್ತಿದೆ. ಭಾರತೀಯ ಸಾಧಕಿ, ಹೆಮ್ಮೆಯ ಪುತ್ರಿಯಆತಿಥ್ಯ ವಹಿಸಿಕೊಳ್ಳುವುದು ಸಂತೋಷದ ಸಂಗತಿ ಎಂದು ಅವರು ತಿಳಿಸಿದ್ದಾರೆ. ಮೈಕೆಲ್ ವಿಲಿಯಮ್ಸ್ ಅವರಿಗೂ ಶುಭಕೋರಿದ್ದಾರೆ.
When the SpaceX recue mission was launched, I recalled this chance encounter almost two years ago with @Astro_Suni in Washington.
— anand mahindra (@anandmahindra) March 19, 2025
It was an enormous relief to see her and her colleagues’ successful splashdown back on earth a few hours ago.
She is courage personified and… https://t.co/E64p9YX5t3
ಸುನೀತಾ ವಿಲಿಯಮ್ಸ್ ಭೇಟಿ ಸ್ಮರಿಸಿದ ಆನಂದ ಮಹೀಂದ್ರಾ
ಸುನೀತಾ ವಿಲಿಯಮ್ಸ್ ಅವರನ್ನು ಸ್ಮರಿಸಿ ಫೋಟೋ ಶೇರ್ ಮಾಡಿಕೊಂಡಿರುವ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರ ಅವರು ಶುಭಕೋರಿದ್ದಾರೆ. ಸ್ಪೇಸ್‌ಎಕ್ಸ್ ರಿಕ್ಯೂ ಮಿಷನ್ ಶುರುವಾದಾಗ ಅಂದರೆ ಸುಮಾರು ಎರಡು ವರ್ಷಗಳ ಹಿಂದೆ ವಾಷಿಂಗ್ಟನ್‌ನಲ್ಲಿಸುನೀತಾ ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದೆ ಎಂದು ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ.
ಬುಧವಾರ (ಮಾರ್ಚ್ 19) ಕೆಲವು ಗಂಟೆಗಳ ಹಿಂದೆ ಗಗನಯಾತ್ರಿ ಮತ್ತವರ ಬಾಹ್ಯಾಕಾಶ ಸಹೋದ್ಯೋಗಿಗಳು ಭೂಮಿಗೆ ಯಶಸ್ವಿಯಾಗಿ ಮರಳಿದ್ದು ನೋಡಿ ಸಮಾಧಾನ ತಂದಿದ್ದಲ್ಲದೇ ನಿಮ್ಮ ಸಾಧನೆ, ಧೈರ್ಯದ ವ್ಯಕ್ತಿತ್ವ ಕಂಡು ಹರ್ಷವಾಗುತ್ತಿದೆ. ನಿಮಗೆ ಸ್ವಾಗತ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಜ್ಞಾನ- ತಂತ್ರಜ್ಞಾನ ಅಭಿವೃದ್ಧಿಗೆ ಪೂರಕ: ಸಚಿವ
ವಿಶ್ವದ ಕೋಟ್ಯಾಂತರ ಜನರ ಪ್ರಾರ್ಥನೆ ಫಲಿಸಿದೆ ಎಂದು ಕರ್ನಾಟಕ ಕೈಗಾರಿಕೆ ಸಚಿವರು ಎಂ.ಬಿ ಪಾಟೀಲ್ ಅವರು ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಮೂಲದ ಅಮೆರಿಕದ ವಿಜ್ಞಾನಿ, ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ನಾಸಾದ ಬುಚ್ ವಿಲ್ಮೋರ್ ಅವರು ಕಳೆದ ಒಂಬತ್ತು ತಿಂಗಳಿನಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು. ಇಂದು ಬೆಳಗ್ಗೆ 3 ಗಂಟೆಗೆ ಅವರಿಬ್ಬರು ಭೂಮಿಗೆ ಯಶಸ್ವಿಯಾಗಿ ಹಿಂತಿರುಗಿದ್ದಾರೆ.
ಗಗನಯಾತ್ರಿಗಳು ಬಾಹ್ಯಾಕಾಶ ಅಧ್ಯಯನ ಮತ್ತು ಪ್ರಯೋಗಾತ್ಮಕ ಕಾರ್ಯಗಳು ಭವಿಷ್ಯದ ಅನೇಕ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗಳಿಗೆ ಪೂರಕವಾಗುವ ನಿರೀಕ್ಷೆ ಇದೆ. ಅವರ ಮಹತ್ವದ ಸಾಧನೆ, ಧೈರ್ಯ ಭವಿಷ್ಯದ ಗಗನಯಾತ್ರಿಗಳು ಮತ್ತು ಎಲ್ಲ ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯಾಗಿದೆ ಎಂದ ಅವರು, ಸುನೀತಾ ವಿಲಿಯಮ್ಸ್, ಸ್ಪೇಸ್ ಎಕ್ಸ್ ಹಾಗೂ ನಾಸಾ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.
🚀 Welcome back, Sunita Williams! 🌍
— ISRO (@isro) March 19, 2025
Your safe return after an extended mission aboard the ISS is a remarkable achievement. A testament to NASA, SpaceX, and the USA’s commitment to space exploration! Your resilience and dedication continue to inspire space enthusiasts around the…
ಸುನೀತಾ ವಿಲಿಯಮ್ಸ್ ಬಗ್ಗೆ ಇಸ್ರೋ ಹೇಳಿದ್ದೇನು?
ದೀರ್ಘಾವಧಿಯ ಕಾರ್ಯಾಚರಣೆ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್ (ISS) ನಿಂದ ನೀವು ಸುರಕ್ಷಿತವಾಗಿ ಹಿಂದಿರುಗಿರುವುದು ಮಹತ್ವದ ಸಾಧನೆ ಆಗಿದೆ. ಬಾಹ್ಯಾಕಾಶ ಪರಿಶೋಧನೆಗೆ NASA, SpaceX ಮತ್ತು USA ಗಳ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಸುನಿತ್ ವಿಲಿಯಮ್ಸ್ ಅವರ ಸಮರ್ಪಣೆ ಭಾವ, ತಾಳ್ಮೆ, ಸಾಧನೆಯು ಪ್ರಪಂಚದಾದ್ಯಂತದ ಬಾಹ್ಯಾಕಾಶ ಉತ್ಸಾಹಿಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ. DoS ಕಾರ್ಯದರ್ಶಿಯಾಗಿ ಮತ್ತು ISRO ಅಧ್ಯಕ್ಷರಾಗಿ, ನನ್ನ ಸಹೋದ್ಯೋಗಿಗಳ ಪರವಾಗಿ ನಾನು ನಿಮಗೆ ಹೃತ್ಪೂರ್ವಕ ಶುಭಾಶಯ ತಿಳಿಸುತ್ತೇನೆ. ಮುಂದಿನ ದಿನಗಳು ನಿಮಗೆ ಶುಭವಾಗಿರಲಿದೆ ಎಂದು ಇಸ್ರೋ ಹಾರೈಸಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವತ್ತ ಕೆಲಸ ಮಾಡುತ್ತಿರುವಾಗ, ಬಾಹ್ಯಾಕಾಶ ಪರಿಶೋಧನೆಯಲ್ಲಿ ನಿಮ್ಮ ಪರಿಣತಿಯನ್ನು ಬಳಸಿಕೊಳ್ಳಲು ನಾವು ಬಯಸುತ್ತೇವೆ ಎಂದು ಇಸ್ರೋ ಪ್ರತಿಕ್ರಿಯಿಸಿದೆ.
ವೈಜ್ಞಾನಿಕ ಶ್ರೇಷ್ಠತೆಗೆ ಸಾಕ್ಷಿ: ಕೇಂದ್ರ ಸಚಿವ ಎಚ್‌ಡಿಕೆ
ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅವರಿಗೆ ಹೃದಯಪೂರ್ವಕ ಸ್ವಾಗತ. ನಿಮ್ಮೆಲ್ಲರ ಈ ಅದ್ಭುತ ಪ್ರಯಾಣವು ಮಾನವ ಪರಿಶ್ರಮ ಮತ್ತು ವೈಜ್ಞಾನಿಕ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ, ಕರ್ನಾಟಕ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಅವರು ಸುನೀತಾ ವಿಲಿಯಮ್ಸ್ ಅವರಿಗೆ ಹೃದಯಸ್ಪರ್ಶಿ ಪತ್ರವು ಸಮಸ್ತ ಭಾರತೀಯರ ಪ್ರೀತಿ, ವಿಶ್ವಾಸ, ಅಭಿಮಾನವನ್ನು ಪ್ರತಿಬಿಂಬಿಸುತ್ತದೆ. ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ ನೀವು ನಮ್ಮ ಹೃದಯಗಳಿಗೆ ಹತ್ತಿರವಾಗಿದ್ದೀರಿ" ಎಂದು ಮಾನ್ಯ ಪ್ರಧಾನಿಗಳು ಹೇಳಿರುವುದು ಭಾರತೀಯರ ಪ್ರೀತಿಯ ದ್ಯೋತಕವಾಗಿದೆ.
ಸುನಿತಾ ವಿಲಿಯಮ್ಸ್ ಅವರು ತಮ್ಮ ಸಾಹಸ, ಸಮರ್ಪಣೆ ಮತ್ತು ಧೈರ್ಯದಿಂದ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದ್ದಾರೆ ಎಂದು ಸಚಿವರು ಹಾಡಿ ಹೊಗಳಿದ್ದಾರೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications