ನನ್ನನ್ನು ಶೂಟ್ ಮಾಡ್ತೀರಾ ಮಾಡಿ, ಆದ್ರೆ ದಲಿತರನ್ನಲ್ಲ: ಮೋದಿ

Written By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 8 (ಪಿಟಿಐ): ಒಂದು ದಿನಗಳ ಹಿಂದೆ ನಕಲಿ ಗೋರಕ್ಷಕರ ವಿರುದ್ದ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ, ಭಾನುವಾರ (ಆ 7) ದಲಿತರ ವಿರುದ್ದ ನಡೆಯುತ್ತಿರುವ ದಾಳಿಯ ಬಗ್ಗೆ ವಾಕ್ ಪ್ರಹಾರ ನಡೆಸಿದ್ದಾರೆ.

'ವಸುದೇವ ಕುಟುಂಬಕಂ' ಎಂದು ಬದುಕುತ್ತಿರುವ ನಮಗೆ ದಲಿತರ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯಲಾಗದಿದ್ದಲ್ಲಿ, ದಲಿತ ಸಹೋದರ, ಸಹೋದರಿಯರು ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ಭಾನುವಾರ ಅಪರಾಹ್ನ ರಾಮಗುಂಡಂ ರಸಗೊಬ್ಬರ ತಯಾರಿಕ ಘಟಕ ಮತ್ತು ಮಿಷನ್ ಭಗೀರಥ ನೀರಿನ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಮೋದಿ, ನಾನು ನಿಜವಾದ ಗೋರಕ್ಷಕರನ್ನು ಮತ್ತು ಗೋ ಸೇವಕರನ್ನು ಗೌರವಿಸುತ್ತೇನೆ, ನಕಲಿಗಳನಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.(ಸ್ವಯಂ ಘೋಷಿತ ಗೋಸಂರಕ್ಷಕರಿಗೆ ಮೋದಿ ಚಾಟಿ)

ಹೈದರಾಬಾದ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ದಲಿತರ ಮೇಲೆ ಇತ್ತೀಚೆಗೆ ನಡೆಯುತ್ತಿರುವ ದಾಳಿಯಿಂದಾಗಿ ನನ್ನ ಮನಸ್ಸಿಗೆ ನೋವಾಗಿದೆ. ನಮ್ಮದು ವಿಭಿನ್ನತೆಯಿಂದ ಕೂಡಿದ ದೇಶ, ಮೊದಲು ನಮ್ಮ ದೇಶದ ಏಕತೆಯನ್ನು ಕಾಪಾಡೋಣ ಎಂದು ಮನವಿ ಮಾಡಿದ್ದಾರೆ.

ಒಂದು ಹಂತದಲ್ಲಿ ಭಾವೋದ್ವೇಗಕ್ಕೊಳಗಾದ ಮೋದಿ, ನನ್ನ ಮೇಲೆ ಶೂಟ್ ಮಾಡ್ತೀರಾ, ಮಾಡಿ. ಆದರೆ ನನ್ನ ದಲಿತ ಸಹೋದರರ ಮೇಲಲ್ಲ. ಈ ಕೀಳು ಮಟ್ಟದ ಆಟಕ್ಕೆ ಇಂದೇ ಫುಲ್ ಸ್ಟಾಪ್ ಬೀಳಬೇಕಿದೆ ಎಂದು ಪಿಎಂ ಮೋದಿ ಹೇಳಿದ್ದಾರೆ.

ಪಿಎಂ ಭಾಷಣದ ಕೆಲವು ಹೈಲೆಟ್ಸ್ ಮತ್ತು ಮೋದಿ ಭಾಷಣಕ್ಕೆ ಸಿಕ್ಕ ಟ್ವೀಟ್ ಪ್ರತಿಕ್ರಿಯೆ ಹೀಗಿತ್ತು..

ದೇಶದ ಬೆಳವಣಿಗೆ ನಮ್ಮ ಗುರಿಯಾಗಿರಲಿ

ದೇಶದ ಬೆಳವಣಿಗೆ ನಮ್ಮ ಗುರಿಯಾಗಿರಲಿ

ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವುದು ನಮ್ಮ ಗುರಿಯಾಗಿರಬೇಕು, ಅದು ಬಿಟ್ಟು ಜಾತಿ ಕಲಹವಲ್ಲ. ಇದರಿಂದ ವೈಮನಸ್ಸು ಬೆಳೆಯುತ್ತೇ ಹೊರತು, ಇದರಿಂದಾಗುವ ಲಾಭವಾದರೂ ಏನು. ನಾವೆಲ್ಲಾ ಒಟ್ಟಾಗಿ ದೇಶಕ್ಕಾಗಿ ಕೆಲಸ ಮಾಡೋಣ - ಮೋದಿ.

ದಲಿತರ ಮೇಲೆ ದಾಳಿ

ದಲಿತರ ಮೇಲೆ ದಾಳಿ

ಕೆಲವೊಂದು ಸಮಾಜಘಾತುಕ ಶಕ್ತಿಗಳಲ್ಲಿ ಕೇಳಲು ಬಯಸುತ್ತೇನೆ, ನನ್ನ ಮೇಲೆ ದಾಳಿ ನಡೆಸುತ್ತೀರಾ, ನಡೆಸಿ. ಅದು ಬಿಟ್ಟು ನನ್ನ ದಲಿತ ಸಹೋದರ, ಸಹೋದರಿಯರ ಮೇಲೆ ನಿಮ್ಮ ದರ್ಪ ತೋರಿಸಬೇಡಿ - ಪ್ರಧಾನಿ.

ಮೂರು ರಾಜ್ಯದಲ್ಲಿ ದಲಿತರ ಮೇಲಿನ ದಾಳಿ

ಮೂರು ರಾಜ್ಯದಲ್ಲಿ ದಲಿತರ ಮೇಲಿನ ದಾಳಿ

ಗೋರಕ್ಷಕರು ಮತ್ತು ದಲಿತರ ಮೇಲಿನ ದಾಳಿಯ ಬಗ್ಗೆ ಮೋದಿ ಹೇಳಿಕೆ, ಬಿಜೆಪಿ ವಿರುದ್ದ ಸಾರ್ವಜನಿಕವಾಗಿ ಅಸಮಾಧಾನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬಂದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ಗುಜರಾತ್, ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ದಲಿತರ ಮೇಲಿನ ದಾಳಿ ಹೆಚ್ಚಾಗುತ್ತಿರುವುದಕ್ಕೆ ಮೋದಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ದಲಿತರ ಕಡೆಗಣನೆ

ದಲಿತರ ಕಡೆಗಣನೆ

ದಶಕಗಳಿಂದ ದಲಿತ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲ್ಲೇ ಬರುತ್ತಿದೆ. ಏಕತೆ, ಶಾಂತಿ ನಮ್ಮಲ್ಲಿ ಇಲ್ಲದಿದ್ದರೆ ದೇಶ ಅಭಿವೃದ್ದಿಯತ್ತ ಹೇಗೆ ನಡೆಯಲು ಸಾಧ್ಯ. ದಲಿತರ ಮೇಲೆ ಇತ್ತೀಚೆಗೆ ನಡೆದ ದಾಳಿ ಒಂದು ಕಡೆ ನೋವುಂಟು ಮಾಡಿದ್ದರೆ, ಇನ್ನೊಂದೆಡೆ ತಲೆತಗ್ಗಿಸುವಂತಾಗಿದೆ - ಮೋದಿ.

ಮೋದಿ ಹೇಳಿಕೆಗೆ ಟ್ವೀಟ್ ರಿಪ್ಲೈ

ಶೂಟ್ ಮಿ, ಬಟ್ ಸ್ಟಾಪ್ ಅಟ್ಯಾಕಿಂಗ್ ದಲಿತ್

ಮೋದಿ ನಾಟಕಕಾರ

ಮೋದಿ ಹೈದರಾಬಾದ್ ನಲ್ಲಿ ನೀಡಿದ ಭಾಷಣ ಸ್ಮೃತಿ ಇರಾನಿ ಪಾರ್ಲಿಮೆಂಟ್ ನಲ್ಲಿ ಇದ್ದಂತಿತ್ತು. ಫುಲ್ ಡ್ರಾಮಾಬಾಜೀ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"If you want to shoot, shoot me, but stop attacking on my Dalit brothers" PM Narendra Modi making an emotional appeal in Hyderabad on Aug 7. Modi asked people to protect and respect Dalits who have been neglected by the society from decade.
Please Wait while comments are loading...