9 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ, ಸ್ಥಳ, ಮಾರ್ಗ ತಿಳಿಯಿರಿ

ಬೆಂಗಳೂರು, ಸೆಪ್ಟೆಂಬರ್‌ 22: ಸೆಪ್ಟೆಂಬರ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಒಂದೇ ದಿನದಲ್ಲಿ ಒಟ್ಟು 9 ವಂದೇ ಭಾರತ್‌ ರೈಲುಗಳಿಗೆ ಚಾಲನೆ ಸಿಗುತ್ತಿರುವುದು ಇದೇ ಮೊದಲು.

ಜುಲೈ 7 ರಂದು ಗೋರಖ್‌ಪುರ-ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಜೋಧ್‌ಪುರ-ಸಾಬರಮತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದ ಸುಮಾರು ಎರಡು ತಿಂಗಳ ನಂತರ ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗುತ್ತಿದೆ. ಪ್ರಧಾನಿಯವರು ಹೊಸ ವಂದೇ ಭಾರತ್‌ ರೈಲುಗಳಿಗೆ ವರ್ಚುವಲ್‌ ಮೂಲಕ ನವದೆಹಲಿಯಿಂದ ಚಾಲನೆ ನೀಡಲಿದ್ದಾರೆ.

PM Modi flag off 9 New Vande Bharat Express Trains, know Location, Route

ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಕಿತ್ತಳೆ ಬಣ್ಣದಲ್ಲಿ, ಕಾಸರಗೋಡು-ತಿರುವನಂತಪುರ ಮಾರ್ಗವಾಗಿ ಹೊಸ ಬಣ್ಣದ ಯೋಜನೆಯೊಂದಿಗೆ ವಂದೇ ಭಾರತ್ ರೈಲನ್ನು ಪ್ರಾರಂಭಿಸಲು ಪರಿಗಣಿಸಲಾಗಿರುವುದರಿಂದ ದಕ್ಷಿಣ ಭಾರತದಲ್ಲಿ ಪ್ರಾರಂಭವಾಗಲಿದೆ. ಎಂಟು ವಂದೇ ಭಾರತ್ ರೈಲುಗಳು ನೀಲಿ-ಬಿಳಿ ಬಣ್ಣದ ಸಂಯೋಜನೆಯಲ್ಲಿದ್ದರೆ, ಒಂಬತ್ತನೆಯದನ್ನು ಕಿತ್ತಳೆ ಮತ್ತು ಬಿಳಿ ಸಂಯೋಜನೆಯಲ್ಲಿ ಹೊರತರಲಾಗುತ್ತಿದೆ. ಇನ್ನೂ 10 ಕಿತ್ತಳೆ-ಬಿಳಿ ವಂದೇ ಭಾರತ್ ರೈಲುಗಳ ಯೋಜನೆಗಳಿವೆ.

ಉಳಿದಂತೆ ಇಂದೋರ್-ಜೈಪುರ, ಜೈಪುರ-ಉದಯಪುರ, ಪುರಿ-ರೂರ್ಕೆಲಾ, ಪಾಟ್ನಾ-ಹೌರಾ ಮತ್ತು ಜೈಪುರ-ಚಂಡೀಗಢ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗುತ್ತಿದೆ. ಚೆನ್ನೈ-ತಿರುನೆಲ್ವೇಲಿ, ರಾಂಚಿ-ಹೌರಾ, ಜಾಮ್‌ನಗರ-ಅಹಮದಾಬಾದ್ ಮತ್ತು ಚೆನ್ನೈ-ಹೈದರಾಬಾದ್ ಮಾರ್ಗಗಳನ್ನು ಮೊದಲೇ ಘೋಷಿಸಲಾಗಿತ್ತು.

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಒಡಿಶಾ ಅಥವಾ ರಾಜಸ್ಥಾನದಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಈ ಹಿಂದೆ ಪುರಿ-ಹೌರಾ ವಂದೇ ಭಾರತ್ ಅನ್ನು ಪ್ರಾರಂಭಿಸಿದ ನಂತರ ಒಡಿಶಾದಲ್ಲಿ ಪುರಿ-ರೂರ್ಕೆಲಾ ವಂದೇ ಭಾರತ್ ಎರಡನೇ ರೈಲು ಸೇವೆಯಾಗಿದೆ. ರಾಜಸ್ಥಾನವು ಈಗಾಗಲೇ ಜೈಪುರಕ್ಕೆ ವಂದೇ ಭಾರತವನ್ನು ಹೊಂದಿದೆ. ಈ ತಿಂಗಳು ರಾಜ್ಯಕ್ಕೆ ಎರಡು ವಂದೇ ಭಾರತ್ ರೈಲುಗಳು ಓಡಲಿವೆ.

PM Modi flag off 9 New Vande Bharat Express Trains, know Location, Route

ಮಧ್ಯಪ್ರದೇಶವು ಭೋಪಾಲ್, ಜಬಲ್ಪುರ್, ಉಜ್ಜಯಿನಿಗೆ ವಂದೇ ಭಾರತ್ ಸೇವೆಯನ್ನು ಹೊಂದಿದೆ ಮತ್ತು ಈಗ ಇಂದೋರ್‌ಗೆ ಮತ್ತೊಂದು ವಂದೇ ಭಾರತ್‌ ಸಂಚರಿಸಲಿದೆ. ಪ್ರಸ್ತುತ ದೇಶಾದ್ಯಂತ 25 ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ಭಾನುವಾರ ಇನ್ನೂ ಒಂಬತ್ತು ಪ್ರಾರಂಭವಾಗಲಿದ್ದು, ದೇಶದ ಒಟ್ಟು ರೈಲುಗಳ ಸಂಖ್ಯೆ 34 ಕ್ಕೆ ಏರಲಿದೆ.

ಕರ್ನಾಟಕಕ್ಕೆ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 25 ರಂದು ಸಂಚಾರ ಮಾಡಲಿದೆ. ಇದು ದಕ್ಷಿಣ ಭಾರತದ ಎರಡು ಪ್ರಮುಖ ಟೆಕ್ ಹಬ್‌ಗಳಾದ ಬೆಂಗಳೂರು ಮತ್ತು ಹೈದರಾಬಾದ್‌ ನಗರಗಳನ್ನು ಸಂಪರ್ಕಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸೆಮಿ-ಹೈ-ಸ್ಪೀಡ್ ರೈಲು ಯಶವಂತಪುರ ಮತ್ತು ಕಾಚಿಗುಡ ನಡುವೆ 609.81 ಕಿಮೀ ಕ್ರಮಿಸಲು ಸರಾಸರಿ 71.74 ಕಿಮೀ ವೇಗದಲ್ಲಿ 8.30 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಪ್ರಸ್ತುತ ವೇಗದ ರೈಲಿಗಿಂತ (ದುರೊಂತೊ ಎಕ್ಸ್‌ಪ್ರೆಸ್) ಒಂದು ಗಂಟೆ ವೇಗವಾಗಿರುತ್ತದೆ. ಆದರೆ, ಇದು ಕರ್ನಾಟಕದ ಯಾವುದೇ ನಿಲ್ದಾಣದಲ್ಲಿ ನಿಲ್ಲುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+