Get Updates
Get notified of breaking news, exclusive insights, and must-see stories!

Ram Lalla: ರಾಮ್ ಲಲ್ಲಾನ 'ಸೂರ್ಯ ತಿಲಕ್' ಫೋಟೋ ನೋಡಿ ಭಾವುಕರಾದ ಪ್ರಧಾನಿ ಮೋದಿ

ಅಯೋಧ್ಯೆಯಲ್ಲಿ ಶ್ರೀ ರಾಮ ಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಸಿಲಾಗಿದೆ. ಈ ಮೂಲಕ ರಾಮಭಕ್ತರ ಹೋರಾಟಕ್ಕೆ ತೆರೆ ಬಿದ್ದಿತು. ಜನವರಿ 22 ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಲಲ್ಲಾ ಪ್ರತಿಷ್ಠಾಪಿಸಿ, ಮಂದಿರವನ್ನು ಲೋಕಾರ್ಪಣೆ ಮಾಡಿದರು. ಮಂದಿರ ಉದ್ಘಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ರಾಮ ನವಮಿಯನ್ನು ವಿಜೃಂಬಣೆಯಿಂದ ಆಚರಿಸಲಾಯಿತು.

ಈ ವೇಳೆ ಲಕ್ಷಾಂತರ ಭಕ್ತರು ರಾಮ ಲಲ್ಲಾನ ದರ್ಶನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದರು. ಇನ್ನು ರಾಮ ನವಮಿಯ ಶುಭ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿತ ರಾಮ ಲಲ್ಲಾನಿಗೆ ಸೂರ್ಯ ತಿಲಕ ಇಡಲಾಯಿತು. ಈ ಅದ್ಭುತ ಕ್ಷಣವನ್ನು ಕಣ್ಣು ತುಂಬಿಕೊಳ್ಳಲು ಲಕ್ಷಾಂತರ ಜನ ನೆರೆದಿದ್ದರು.

PM Modi Expresses Emotion at Sight of Ram Lalla s Surya Tilak Observes Video Barefoot

ಭಾವುಕರಾದ ಮೋದಿ

ಈ ಅದ್ಭುತ ಕ್ಷಣದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ಯಾಬ್ ಮೂಲಕ ವೀಕ್ಷಿಸಿದರು. ಈ ವಿಡಿಯೋ ನೋಡಿದ ಅವರು ಭಾವುಕರಾದರು.

ಬುಧವಾರ ಪ್ರಧಾನಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಅಸ್ಸಾಂನ ನಲ್ಬರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗುವಂತೆ ಅವರು ತಮ್ಮ ಭಾಷಣದಲ್ಲಿ ಜನರಲ್ಲಿ ಮನವಿ ಮಾಡಿದರು. ಈ ಅದ್ಭುತ ಕ್ಷಣಕ್ಕೆ ಜನರು ಸಾಕ್ಷಿಯಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಹೆಲಿಕಾಪ್ಟರ್‌ನಲ್ಲಿ ಕುಳಿತು ಟ್ಯಾಬ್‌ನಲ್ಲಿ 'ಸೂರ್ಯ ತಿಲಕ' ವಿಡಿಯೋವನ್ನು ಸಂಪೂರ್ಣ ಭಕ್ತಿಯಿಂದ ವೀಕ್ಷಿಸಿದರು.

ಮೋದಿ ಲೋಕಸಭಾ ಚುನಾವಣೆಯ ಪ್ರಚಾರವನ್ನು ಮುಗಿಸಿ ಹಿಂತಿರುಗುತ್ತಿದ್ದಾಗ ಹೆಲಿಕಾಪ್ಟರ್‌ನಲ್ಲಿ ಈ ದೃಶ್ಯವನ್ನು ಕಣ್ಣು ತುಂಬಿಕೊಂಡರು. ಈ ಅದ್ಭುತ ದೃಶ್ಯವನ್ನು ನೋಡುವ ಮುನ್ನ ನರೇಂದ್ರ ಮೋದಿ ಅವರು ತಮ್ಮ ಪಾದರಕ್ಷೆಗಳನ್ನು ತೆಗೆದು ಸೂರ್ಯ ತಿಲಕರ ಅದ್ಭುತ ಕ್ಷಣವನ್ನು ಸಂಪೂರ್ಣ ಭಕ್ತಿಯಿಂದ ವೀಕ್ಷಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮನ ಹೃದಯದ ಮೇಲೆ ಕೈಯಿಟ್ಟು ತಲೆ ಬಾಗಿ ನಮಸ್ಕರಿಸಿದನ್ನು ದೃಶ್ಯದಲ್ಲಿ ಕಾಣಬಹುದು.

PM Modi Expresses Emotion at Sight of Ram Lalla s Surya Tilak Observes Video Barefoot

ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ನಲ್ಬರಿ ಸಭೆಯ ನಂತರ, ಅಯೋಧ್ಯೆಯಲ್ಲಿ ರಾಮಲಾಲರ ಸೂರ್ಯ ತಿಲಕ ಅದ್ಭುತ ಮತ್ತು ಅನನ್ಯ ಕ್ಷಣವನ್ನು ನೋಡುವ ಸೌಭಾಗ್ಯ ನನಗೆ ಸಿಕ್ಕಿತು. ಶ್ರೀರಾಮ ಜನ್ಮಭೂಮಿಯ ಈ ಬಹು ನಿರೀಕ್ಷಿತ ಕ್ಷಣ ಎಲ್ಲರಿಗೂ ಸಂಭ್ರಮದ ಕ್ಷಣವಾಗಿದೆ ಎಂದಿದ್ದಾರೆ.

ಏನಿದು ಸೂರ್ಯ ತಿಲಕ?

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಲಲ್ಲಾ ಮಂದಿರದಲ್ಲಿ ಮಸೂರುಗಳು, ಕನ್ನಡಿಗಳ ವ್ಯವಸ್ಥೆಯ ಮೂಲಕ ಪ್ರತಿ ರಾಮ ನವಮಿಯಂದು ಮಧ್ಯಾಹ್ನ ರಾಮನ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣವನ್ನು ತರವು ಬೀಳಿಸುವ ವ್ಯವಸ್ಥೆ. ಪ್ರತಿ ರಾಮ ನವಮಿಯ ದಿನದಂದು ಶ್ರೀರಾಮ ಹಣೆಯ ಮೇಲೆ ತಿಲಕವನ್ನು ಸೂರ್ಯ ತಿಲಕ ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಸೂರ್ಯ ತಿಲಕವನ್ನು ರಾಮಲಲ್ಲಾನ ಹಣೆಯ ಮೇಲೆ ನಾಲ್ಕೈದು ನಿಮಿಷಗಳ ಕಾಲ ಇರುವಂತೆ ನೋಡಿಕೊಳ್ಳುವಂತಹ ವ್ಯವಸ್ಥೆ ಮಾಡಲಾಗಿತ್ತು. ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಕೇಂದ್ರೀಕೃತವಾದ ಕ್ಷಣವಾಗಿತ್ತು. ನೂಕುನುಗ್ಗಲು ಉಂಟಾಗುವುದನ್ನು ತಪ್ಪಿಸಲು ಸೂರ್ಯ ತಿಲಕೋತ್ಸವದ ವೇಳೆಗೆ ಭಕ್ತರು ಗರ್ಭಗುಡಿ ಪ್ರವೇಶಿಸದಂತೆ ದೇವಸ್ಥಾನದ ಆಡಳಿತ ಮಂಡಳಿ ತಡೆದಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+