• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೇಸ್ ಬುಕ್ ನಲ್ಲಿ ಡೋನಲ್ಡ್ ಟ್ರಂಪ್ ಹಿಂದಿಕ್ಕಿ ಮೋದಿ ನಂ.1

|

ನವದೆಹಲಿ, ಏಪ್ರಿಲ್ 12: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ವಿಶ್ವ ನಾಯಕರ ಪೈಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ರಸ್ಥಾನಕ್ಕೇರಿದ್ದಾರೆ. ಲೋಕಸಭೆ ಚುನಾವಣೆ ವೇಳೆಯಲ್ಲಿ ಸಾಮಾಜಿಕ ಜಾಲ ತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳತೊಡಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿಶ್ವದ ಅತಿ ಸುಂದರ ಮಹಾರಾಣಿ ಎಂಬ ಹೆಗ್ಗಳಿಕೆಯ ಜೋರ್ಡಾನ್ ರಾಣಿ ರಾನಿಯಾ ಅಲ್ ಅಬ್ದುಲ್ಲಾ ಅವರು ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ.

ಫಸ್ಟ್ ನ್ಯೂಸ್ ಸಮೀಕ್ಷೆ: ಮೋದಿ-ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕ

ಬರ್ಸನ್ ಕಾನ್ ವೊಲ್ಫ್ (BCW) ಸಂಸ್ಥೆಯ ಟ್ವಿಪ್ಲೋಮೆಸಿ ಅಧ್ಯಯನ ವರದಿಯಂತೆ 'ಫೇಸ್​ಬುಕ್​ನಲ್ಲಿ 2019ರ ಜಾಗತಿಕ ನಾಯಕರು' ಯಾರು ಎಂಬುದನ್ನು ಪ್ರಕಟಿಸಲಾಗಿದೆ. ಇದರ ಅನ್ವಯ ಮೋದಿ ಅವರ ಫೇಸ್​ಬುಕ್ ಪುಟಕ್ಕೆ 1.37 ಕೋಟಿ ಹಿಂಬಾಲಕರು (ಫಾಲೋವರ್ಸ್) ಇದ್ದಾರೆ. 4.35 ಕೋಟಿ ಲೈಕ್ಸ್ ಬಂದಿವೆ ಎಂದು ಬಿಸಿಡಬ್ಲು ಸಂವಹನ ಸಂಸ್ಥೆ ಹೇಳಿದೆ.

ಮೋದಿ ನಂ.1, 2ನೇ ಸ್ಥಾನಕ್ಕೆ ಟ್ರಂಪ್

ಮೋದಿ ನಂ.1, 2ನೇ ಸ್ಥಾನಕ್ಕೆ ಟ್ರಂಪ್

ಹೆಚ್ಚು ಜನಪ್ರಿಯತೆ ಪಡೆದವರ ಪೈಕಿ ಎರಡನೇ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಾರೆ. ಅವರ ಅಧಿಕೃತ ಪೇಜ್​ಗೆ 2.3 ಕೋಟಿ ಲೈಕ್ಸ್ ಬಂದಿವೆ. ಮೂರನೇ ಸ್ಥಾನದಲ್ಲಿರುವ ಜೋರ್ಡಾನ್ ರಾಣಿ ರಾನಿಯಾಗೆ ಅವರ ಫೇಸ್​ಬುಕ್ ಪೇಜ್​ಗೆ 1.69 ಕೋಟಿ ಲೈಕ್ಸ್ ಸಿಕ್ಕಿದೆ.

ಗಮನ ಸೆಳೆದ ಬ್ರೆಜಿಲ್ ನಾಯಕ

ಗಮನ ಸೆಳೆದ ಬ್ರೆಜಿಲ್ ನಾಯಕ

ಗಮನ ಸೆಳೆದ ಬ್ರೆಜಿಲ್ ನಾಯಕ: ಹೊಸ ವರ್ಷದ ಮೊದಲ ದಿನ ಬ್ರೆಜಿಲ್​ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜೇರ್ ಬೊಲ್ಸೊನಾರೊ, ಫೇಸ್​ಬುಕ್​ನಲ್ಲಿ ಅತಿಹೆಚ್ಚು ಸಕ್ರಿಯ ಜಾಗತಿಕ ನಾಯಕ ಎಂದು ವರದಿ ಹೇಳಿದೆ. ತಮ್ಮ ಅಧಿಕೃತ ಫೇಸ್​ಬುಕ್ ಪೇಜ್​ನಲ್ಲಿ ಈವರೆಗೂ ಅವರು 14.5 ಕೋಟಿ ಬಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಟ್ರಂಪ್ 8.4 ಕೋಟಿ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಟ್ರಂಪ್ ನೀಡಿದ ಜಾಹೀರಾತು ವಿವರ

ಟ್ರಂಪ್ ನೀಡಿದ ಜಾಹೀರಾತು ವಿವರ

ಅಧಿಕಾರಕ್ಕೆ ಬಂದ ಬಳಿಕ ಟ್ರಂಪ್ ಅವರ ಪುಟ ಇಲ್ಲಿ ತನಕ 50,000 ಜಾಹೀರಾತುಗಳನ್ನು ಪೋಸ್ಟ್ ಮಾಡಿದೆ. ಯುಕೆ ಪ್ರಧಾನಿ ಥೆರೆಸಾ ಅವರ ಪುಟ 74 ಪೇಯ್ಡ್ ಜಾಹೀರಾತು ನೀಡಿ ಬ್ರಿಕ್ಸಿಟ್ ಬಗ್ಗೆ ತಮ್ಮ ನಿಲುವಿಗೆ ಇನ್ನಷ್ಟು ಪ್ರಚಾರ ನೀಡಿದ್ದಾರೆ. ಫೇಸ್​ಬುಕ್​ನ 'ಕ್ರೌಡ್ ಆಂಗಲ್' ಸಾಧನ ಬಳಸಲಾಗಿದೆ.

ಫೇಸ್​ಬುಕ್​ನಲ್ಲಿ 2019ರ ಜಾಗತಿಕ ನಾಯಕರು

ಫೇಸ್​ಬುಕ್​ನಲ್ಲಿ 2019ರ ಜಾಗತಿಕ ನಾಯಕರು

ಬರ್ಸನ್ ಕಾನ್ ವೊಲ್ಫ್ (BCW) ಸಂಸ್ಥೆಯ ಟ್ವಿಪ್ಲೋಮೆಸಿ ಅಧ್ಯಯನ ವರದಿಯಂತೆ ‘ಫೇಸ್​ಬುಕ್​ನಲ್ಲಿ 2019ರ ಜಾಗತಿಕ ನಾಯಕರು' ಯಾರು ಎಂಬುದನ್ನು ಪ್ರಕಟಿಸಲಾಗಿದೆ. ಇದಕ್ಕಾಗಿ 962 ಜಾಗತಿಕ ನಾಯಕರ ಫೇಸ್​ಬುಕ್ ಪೇಜ್​ಗಳು, ಸರ್ಕಾರಿ ಇಲಾಖೆಗಳ ಪೇಜ್​ಗಳಲ್ಲಿನ ಚಟುವಟಿಕೆಗಳನ್ನು ಗಮನಿಸಲಾಗಿದೆ ಎಂದು ಬಿಸಿಡಬ್ಲ್ಯೂನ ಅಧಿಕಾರಿ ಚಡ್ ಲಾಟ್ಜ್ ಹೇಳಿದ್ದಾರೆ.

English summary
Prime Minister Narendra Modi, with over 43.5 million likes on his personal Page and 13.7 million likes on his official Page on Facebook, is the most popular world leader on the social network as more world leaders are now paying to promote their posts, a new report said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X