ಉಸ್ತಾದ್ ದಾಗರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 01:ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗಿತಕ್ಕೆ ಅವರು ನೀಡಿರುವ ಕೊಡುಗೆ ಪೀಳಿಗೆಗಳವರೆಗೆ ಸ್ಮರಿಸಲಾಗುತ್ತದೆ.

PM Modi condoles the demise of Ustad Hussain Sayeeduddin Dagar

'ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ಅವರ ಸಂಗೀತದಿಂದ ಭಾರತ ಮತ್ತು ವಿಶ್ವದಾದ್ಯಂತ ಜನ ಉತ್ಸಾಹಭರಿತರಾಗಿದ್ದರು, ಅವರು ಸಂಗೀತೋತ್ಸಾಹಿಗಳಿಗೆ ಸ್ಫೂರ್ತಿಯಾಗಿದ್ದರು' ಎಂದು ಪ್ರಧಾನಿ ತಿಳಿಸಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್(78) ಅವರಿಗೆ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ತಡರಾತ್ರಿ 12:30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

Siddaramaiah Criticizes Narendra Modi Governemnt | Oneindia Kannada

ದ್ರುಪದ್ ಗಾಯನದಲ್ಲಿ ಖ್ಯಾತಿ ಗಳಿಸಿದ್ದ ಉಸ್ತಾದ್ ಸಯೀದುದ್ದೀನ್ ಅವರು1948ರಿಂದ ಅವರು ಪುಣೆಯಲ್ಲಿ ನೆಲೆಸಿದ್ದರು. ಉಸ್ತಾದ್ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Prime Minister, Narendra Modi has condoled the demise of noted Hindustani classical vocalist Ustad Hussain Sayeeduddin Dagar.
Please Wait while comments are loading...