PM Kisan Good News: ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಫೆಬ್ರುವರಿಯಲ್ಲಿ ಬಿಡುಗಡೆ ಸಾಧ್ಯತೆ
ನವದೆಹಲಿ: ರೈತರಿಗೆ ಆರ್ಥಿಕ ಸಹಾಯ ನೀಡುವ ಪ್ರಮುಖ ಯೋಜನೆಯಾದ ಕೇಂದ್ರ ಸರ್ಕಾರದ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ'ಯ 22 ಕಂತಿಗಾಗಿ ಫಲಾನುಭವಿಗಳು ಕಾಯುತ್ತಿದ್ದಾರೆ. ಕಳೆದ ವರ್ಷ 21ನೇ ಕಂತು ಬಿಡುಗಡೆ ಆಗಿತ್ತು. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ 2026 ಮಂಡನೆ ಆಗುವ ಮೊದಲೇ ರೈತರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ.
ದೇಶದ ಅರ್ಹ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ 2000 ರೂಪಾಯಿಯಂತೆ ಪ್ರತಿ ವರ್ಷ ಮೂರು ಬಾರಿ ಅವರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ರೈತರಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಜಾರಿಗೆ ತಂದ ಪ್ರಮುಖ ರೈತಪರ ಯೋಜನೆಗಳಲ್ಲಿ ಇದು ಒಂದಾಗಿದೆ. 21 ಕಂತಿನ 2000 ರೂಪಾಯಿ ನವೆಂಬರ್ 2025 ರಲ್ಲಿ ಬಿಡುಗಡೆಯಾಗಿತ್ತು. ಇದೀಗ 22ನೇ ಕಂತಿನ ಹಣವು ಕೇಂದ್ರ ಸರ್ಕಾರದ ಬಜೆಟ್ ಪೂರ್ವದಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಮುಂದಿನ ಕಂತು ಫೆಬ್ರವರಿಯಲ್ಲಿ ಸಾಧ್ಯತೆ
ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆ ಆಗಲಿದೆ. ಇದಕ್ಕು ಮೊದಲೇ ಫೆಬ್ರವರಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಪ್ರತಿ ಕಂತಿನ 2000 ರೂಪಾಯಿ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವಾಲಯ ಅಧಿಕೃತ ಮಾಹಿತಿ ನೀಡಬೇಕಿದೆ. ಪ್ರತಿ ವರ್ಷ ನಾಲ್ಕು ತಿಂಗಳಿಗೆ ಒಮ್ಮೆಯಂತೆ ಮೂರು ಬಾರಿ ಒಟ್ಟು 6000 ರೂಪಾಯಿಯನ್ನು ನೀಡಲಾಗುತ್ತಿದೆ.
ಪಿಎಂ ಕಿಸಾನ್ 22 ನೇ ಕಂತು ಬಿಡುಗಡೆ ನಂತರ ರೈತರು ಏನು ಮಾಡಬೇಕು, ಜಮೆ ಹಣದ ಬಗ್ಗೆ ಪರಿಶೀಲಿಸುವ ವಿಧಾನ ಇಲ್ಲಿದೆ
1. ರೈತರು ಮೊದಲು ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್‌ಗೆ pmkisan.gov.in. ಹೋಗಬೇಕು.
2. ಸರ್ಚ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಳಕೆದಾರರು ಇಲ್ಲಿ ನೀಡಲಾಗಿರುವ 'ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆ' ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
3. ಅಗತ್ಯವಿರುವ ಮಾಹಿತಿ ನಮೂದಿಸಬೇಕು
4. ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಬೇಕು.
5. ಯೋಜನೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಬೇಕು.
6. ನೋಂದಾಯಿತ ಫೋನ್ ಸಂಖ್ಯೆ ವಿವರ ಹಾಕಿ, ಬಳಿಕ ಕಾಣುವ ಕ್ಯಾಪ್ಚಾ ಕೋಡ್ ಸರಿಯಾಗಿ ಹಾಕಬೇಕು.
7. ಬಳಿಕ ಮುಂದುವರಿಯುವ ಆಯ್ಕೆ ಕ್ಲಿಕ್ ಮಾಡಿಕೊಂಡ ಅಲ್ಲಿನ ಮಾಹಿತಿ ಪಡೆಯಬಹುದಾಗಿದೆ.
2025ರ ನವೆಂಬರ್‌ನಲ್ಲಿ ಬಿಡುಗಡೆಯಾದ 21 ನೇ ಕಂತಿನ ಒಟ್ಟು ಹಣ 18,000 ಕೋಟಿ ರೂಪಾಯಿಗೂ ಅಧಿಕ ಎಂದು ಸರ್ಕಾರ ತಿಳಿಸಿದೆ. ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ದೇಶಾದ್ಯಂತ ಸುಮಾರು ಒಂಬತ್ತು ಕೋಟಿ ರೈತರು ಫಲಾನುಭವಿಗಳಾಗಿದ್ದು, ಅವರೆಲ್ಲ 22ನೇ ಕಂತಿನ 2000 ರೂಪಾಯಿಗೆ ಕಾಯುತ್ತಿದ್ದಾರೆ.
ಮೊದಲ ಬಾರಿಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯನ್ನು 2019 ಫೆಬ್ರವರಿ 24ರಂದು ಆರಂಭಿಸಿತು. ಈ ಯೋಜನೆಯಡಿ ದೇಶದ ಪ್ರತಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6,000 ರೂ.ಗಳ ಆರ್ಥಿಕ ಸಹಾಯವನ್ನು ನೀಡುತ್ತಾ ಬರಲಾಗಿದೆ. ಪಿಎಂ ಕಿಸಾನ್ ಭಾರತ ಸರ್ಕಾರದಿಂದ ಶೇಕಡಾ 100 ಹಣ ಹೊಂದಿರುವ ಕೇಂದ್ರ ವಲಯ ಯೋಜನೆ ಆಗಿದೆ.












Click it and Unblock the Notifications