ಉಡ್ತಾ ಪಂಜಾಬ್ 700ಪ್ಲಸ್ ವೆಬ್ ಸೈಟ್ ಗಳಲ್ಲಿ ರನ್ನಿಂಗ್

Posted By:
Subscribe to Oneindia Kannada

ಹೈದರಾಬಾದ್, ಜೂನ್ 17: ಸೆನ್ಸಾರ್ ಮಂಡಳಿ ಹಾಗೂ ಬಾಲಿವುಡ್ ಮಂದಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿ ಕೋರ್ಟ್ ಮೆಟ್ಟಿಲೇರಿದ್ದ ಉಡ್ತಾ ಪಂಜಾಬ್ ಚಿತ್ರ ಶುಕ್ರವಾರ ತೆರೆ ಕಂಡಿದೆ. ಆದರೆ, ಚಿತ್ರಮಂದಿರದಲ್ಲಿ ಬಿಡುಗಡೆಯಾಗುವುದಕ್ಕೂ ಮುನ್ನ ಉಡ್ತಾ ಪಂಜಾಬ್ ಚಿತ್ರ ಸೋರಿಕೆಯಾಗಿದ್ದು, 700ಕ್ಕೂ ಅಧಿಕ ವೆಬ್ ಸೈಟ್ ಗಳಲ್ಲಿ ಅಕ್ರಮವಾಗಿ ಪ್ರದರ್ಶನವಾಗುತ್ತಿದೆ.

'ಕಿಲ್ ಪೈರಸಿ ' ಎಂದು ಸಿನಿಮಾ ಮಂದಿ ಬೊಬ್ಬೆ ಹಾಕಿದರೂ ಅದನ್ನು ನಿಯತ್ತಿನಿಂದ ಪಾಲಿಸದೆ ಬರುತ್ತಿರುವ ಕೆಲ ಮಂದಿ ಈ ಚಿತ್ರವನ್ನು ಅಂತರ್ಜಾಲಕ್ಕೆ ಸೇರಿದ್ದಾರೆ. ಉಡ್ತಾ ಪಂಜಾಬ್ ಚಿತ್ರದ ಸೆನ್ಸಾರ್ ಕಾಪಿ ಸುಮಾರು 732 ವೆಬ್ ಸೈಟ್ ಲಿಂಕ್ ಗಳಲ್ಲಿ ಪತ್ತೆಯಾಗಿದೆ ಎಂದು ಹೈದರಾಬಾದಿನಲ್ಲಿರುವ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ವರದಿ ನೀಡಿದೆ.[ಉಡ್ತಾ ಪಂಜಾಬ್ ಬಿಡುಗಡೆ ತಡೆಗೆ ಸುಪ್ರೀಂ ನಕಾರ]

ಸೆನ್ಸಾರ್ ಪ್ರಮಾಣ ಪತ್ರ ಪಡೆಯಲು ಕೇಂದ್ರ ಸೆನ್ಸಾರ್ ಮಂಡಳಿ(ಸಿಬಿಎಫ್ ಸಿ) ಗೆ ಉಡ್ತಾ ಪಂಜಾಬ್ ಚಿತ್ರ ತಂಡ ನೀಡಿದ್ದ ಡಿವಿಡಿಯ ನಕಲು ಈಗ ಎಲ್ಲೆಡೆ ಹರಿದಾಡುತ್ತಿದೆ. ಸಾಕಷ್ಟು ವಿವಾದ ಹಾಗೂ ಕಾನೂನು ಹೋರಾಟದ ನಂತರ ಬುಧವಾರದಂದು ಚಿತ್ರಕ್ಕೆ ಪ್ರಮಾಣ ಪತ್ರ ಸಿಕ್ಕಿತ್ತು. ಇದಾದ ಬಳಿಕ ಇಂಟರ್ನೆಟ್ ನಲ್ಲಿ ಚಿತ್ರ ಸೋರಿಕೆಯಾಗಿದೆ.

Piracy: Udta Punjab now being hosted by over 700 websites

ಸೆನ್ಸಾರ್ ಮಂಡಳಿ ಕೈವಾಡದಿಂದಲೇ ಚಿತ್ರದ ಪ್ರತಿ ಅಂತರ್ಜಾಲ ಸೇರಿದೆ ಎಂದು ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಮುಂಬೈನ ಸೈಬರ್ ಸೆಲ್ ಗೆ ದೂರು ನೀಡಿದ್ದಾರೆ.

ಶುಕ್ರವಾರ ಬಿಡುಗಡೆಗೆ ನಿಗದಿಯಾಗುವುದಕ್ಕೂ ಎರಡು ದಿನ ಮುಂಚಿತವಾಗಿ 2 ಗಂಟೆ 20 ನಿಮಿಷ ಅವಧಿಯ ಚಿತ್ರದ ಪೈರಸಿ ಡಿವಿಡಿ ಇಂಟರ್ನೆಟ್ ಸೇರಿದೆ. 'For the Censor' ಎಂಬ ಅಡಿ ಬರಹ ಚಿತ್ರದ ಸೀನ್ ಗಳ ಕೆಳಗೆ ಕಾಣಿಸುತ್ತದೆ.

ವ್ಯಾಪಕವಾಗುತ್ತಿರುವ ಪೈರಸಿ ಜಾಲ: 2013 ರಲ್ಲಿ ತೆಲುಗಿನ ಪವನ್ ಕಲ್ಯಾಣ್ ಅಭಿನಯದ ಅತ್ತಾರಿಂಟಿಕಿ ದಾರೇದಿ' ಚಿತ್ರ ಕೂಡಾ ಪೈರಸಿ ಭೂತಕ್ಕೆ ಬಲಿಯಾಗಿತ್ತು. ಪ್ರಭಾಸ್ ನಟನೆಯ ಬಾಹುಬಲಿ ಚಿತ್ರಕ್ಕೂ ಪೈರಸಿ ಕಾಡಿತ್ತು. ಮಲೆಯಾಳಂನ ನಿವಿನ್ ಅಭಿನಯದ ಪ್ರೇಮಂ ಚಿತ್ರ, ಕನ್ನಡದಲ್ಲಿ ರವಿಚಂದ್ರನ್ ಅಭಿನಯದ 'ದೃಶ್ಯ' ಚಿತ್ರದ ಸೆನ್ಸಾರ್ ಕಾಪಿ ಕೂಡಾ ಇಂಟರ್ನೆಟ್ ನಲ್ಲಿ ಲಭ್ಯವಾಗಿ ಚಿತ್ರ ನಿರ್ಮಾಪಕರ ತಲೆಕೆಡಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The anti-piracy wing of the Telugu Film Chamber of Commerce has cited the illegal link to watch the controversial 'Udta Punjab' in over 732 sites.
Please Wait while comments are loading...