Pink Park: 'ಮಹಿಳೆಯರಿಗಾಗಿಯೇ ತೆರೆಯಲಾದ ವಿಶೇಷ ಉದ್ಯಾನವನಗಳು' - ಪುರುಷರಿಗೆ ಪ್ರವೇಶವಿಲ್ಲ!
ಮಹಿಳೆಯರಿಗಾಗಿ ಪ್ರತ್ಯೇಕ ಬಸ್‌ಗಳು, ರೈಲು ಬೋಗಿಗಳು, ದೇವಸ್ಥಾನಗಳಲ್ಲಿ ಪ್ರತ್ಯೇಕ ಸರತಿ ಸಾಲುಗಳೂ ಇವೆ. ಇದರೊಂದಿಗೆ ಮತ್ತೊಂದು ಸಂತಸದ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಇಷ್ಟರಲ್ಲೇ ಭಾರತದ ರಾಜಧಾನಿ ನವದೆಹಲಿಯಲ್ಲಿ ಮಹಿಳೆಯರಿಗಾಗಿಯೇ 250 'ಪಿಂಕ್ ಪಾರ್ಕ್'ಗಳು ತೆರೆದುಕೊಳ್ಳಲಿವೆ. ಮಹಿಳೆಯರಿಗೆ ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ಒದಗಿಸುವ ಉದ್ದೇಶದಿಂದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಗರದಾದ್ಯಂತ ಮಹಿಳೆಯರಿಗೆ ಮಾತ್ರ ಉದ್ಯಾನವನಗಳನ್ನು ರಚಿಸಲು ಯೋಜಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪಾರ್ಕ್‌ಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಈ ಉದ್ಯಾನವನಗಳಲ್ಲಿ ಮತಷ್ಟು ವಿಶೇಷತೆಗಳು ಏನಿವೆ ಅನ್ನೋದನ್ನು ನೋಡೋಣ..
ರಾಜಧಾನಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಉದ್ಯಾನವನಗಳು
ಮಹಿಳೆಯರಿಗಾಗಿಯೇ ಹೆಚ್ಚಿನ ಉದ್ಯಾನವನಗಳನ್ನು ಸಿದ್ದಗೊಳಿಸಲು ದೆಹಲಿ ಸಜ್ಜಾಗಿದೆ. ಮಹಿಳೆಯರಿಗೆ ಹೆಚ್ಚು ಆರಾಮದಾಯಕ ಸ್ಥಳಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ವರದಿಗಳ ಪ್ರಕಾರ, ಎಲ್ಲಾ ಎಂಸಿಟಿ ವಾರ್ಡ್‌ಗಳಲ್ಲಿ ಈ ಉದ್ಯಾನವನಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ.

ದೆಹಲಿಯ ಉಪ ಮೇಯರ್ ಅಲೆ ಮೊಹಮ್ಮದ್ ಇಕ್ಬಾಲ್ ಅವರು ಈ ಯೋಜನೆಯನ್ನು ಜಾರಿಗೆ ತರಲಾಗುವುದಾಗಿ ಘೋಷಿಸಿದ್ದಾರೆ. ನಗರದಲ್ಲಿ ಮಹಿಳೆಯರಿಗೆ ಹೆಚ್ಚು ಆರಾಮದಾಯಕ ಸ್ಥಳವನ್ನು ಒದಗಿಸುವುದರ ಜೊತೆಗೆ ಅನೇಕ ಸೌಲಭ್ಯಗಳನ್ನು ಒದಗಿಸುವ ಆಲೋಚನೆಯನ್ನು ಹೊಂದಿರುವುದಾಗಿ ದೆಹಲಿಯ ಉಪ ಮೇಯರ್ ಹೇಳಿಕೊಂಡಿದ್ದಾರೆ.
ಅನೇಕ ಸೌಲಭ್ಯಗಳನ್ನು ಹೊಂದಿರುವ ಗುಲಾಬಿ ಉದ್ಯಾನವನಗಳು
ದೆಹಲಿಯ 250 ಮುನ್ಸಿಪಲ್ ವಾರ್ಡ್‌ಗಳಲ್ಲಿ 'ಪಿಂಕ್ ಮಾಡೆಲ್ ಪಾರ್ಕ್'ಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಸೆಲ್ಫಿ ಪಾಯಿಂಟ್‌ಗಳು, ಸಿಸಿಟಿವಿ ಕ್ಯಾಮೆರಾಗಳು, ಶೌಚಾಲಯಗಳು, ತೆರೆದ ವ್ಯಾಯಾಮ ಉಪಕರಣಗಳು ಮತ್ತು ಹೆಚ್ಚುವರಿ ಭದ್ರತಾ ಕ್ರಮಗಳು, ಮೀಸಲಾದ ಮಕ್ಕಳ ಆಟದ ಪ್ರದೇಶಗಳಂತಹ ಎಲ್ಲಾ ವೈಶಿಷ್ಟ್ಯಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಇದು ದೆಹಲಿ ಉಪ ಮೇಯರ್ ಯೋಜನೆ
ದೆಹಲಿಯ ಉಪಮೇಯರ್ ಅಲೆ ಮೊಹಮ್ಮದ್ ಇಕ್ಬಾಲ್ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ ತಮ್ಮ ವಾರ್ಡ್ ಚಾಂದಿನಿ ಮಹಲ್‌ನಲ್ಲಿ ಇಂತಹ 'ಪಿಂಕ್ ಪಾರ್ಕ್' ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಮಹಿಳೆಯರಿ ಮಾತ್ರ ಪ್ರವೇಶವಿದೆ. ಜೊತೆಗೆ ಅಲ್ಲಿರುವ ವ್ಯವಸ್ಥೆಗಳನ್ನು ಸಿಎಂ ಮುಂದೆ ಹಂಚಿಕೊಂಡಿದ್ದಾರೆ. ಈ ವಿಚಾರಕ್ಕೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ಎಲ್ಲಾ ಕಡೆ ಪಿಂಕ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಮೇಯರ್ ಹೇಳಿದ್ದಾರೆ.
ಈ ಯೋಜನೆ ಬಂದಿದ್ದು ಹೇಗೆ?
ಯೋಜನೆಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿದ ಇಕ್ಬಾಲ್ ಅವರು, 'ಮಾತಾ ಸುಂದರಿ ರಸ್ತೆಯಲ್ಲಿ ಪ್ರಾಯೋಗಿಕ ಯೋಜನೆಯಾಗಿ 'ಪಿಂಕ್ ಪಾರ್ಕ್' ಸ್ಥಾಪಿಸಲಾಗಿದ್ದು, 10 ವರ್ಷದೊಳಗಿನ ಮಕ್ಕಳು ಮತ್ತು ಮಹಿಳೆಯರಿಗೆ ಭೇಟಿ ನೀಡಲು ಅವಕಾಶವಿದೆ. ಅದೇ ರೀತಿ ಇತರೆ ವಾರ್ಡ್‌ಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುವುದು' ಎಂದರು.

ಪ್ರತಿ ವಾರ್ಡ್‌ನಲ್ಲಿ ಪಿಂಕ್ ಪಾರ್ಕ್
ದೆಹಲಿಯಲ್ಲಿ 15,000 ಕ್ಕೂ ಹೆಚ್ಚು ಉದ್ಯಾನವನಗಳಿವೆ. ಪ್ರತಿ ವಾರ್ಡ್‌ನಲ್ಲಿರುವ ಉದ್ಯಾನವನಗಳ ಸಂಖ್ಯೆಯು ನೂರಕ್ಕೂ ಹೆಚ್ಚು ಇದೆ. ಅದೇ ರೀತಿ ಪ್ರತಿ ವಾರ್ಡ್‌ಗಳಲ್ಲಿ ಮಹಿಳೆಯರಿಗಾಗಿ ಪಿಂಕ್ ಪಾರ್ಕ್‌ಗಳನ್ನು ಪ್ರತ್ಯೇಕವಾಗಿ ರಚಿಸಲಾಗುವುದು. ಈ ಎಲ್ಲಾ ಉದ್ಯಾನವನಗಳು ತೆರೆದ ಜಿಮ್ನಾಷಿಯಂಗಳೊಂದಿಗೆ ತೋಟಗಾರಿಕೆ ಮತ್ತು ಇತರ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಉಪಮೇಯರ್ ಹೇಳಿದ್ದಾರೆ. ಹೀಗಾಗಿ ಶೀರ್ಘದಲ್ಲೇ ಪಿಂಕ್ ಪಾರ್ಕಗಗಳು ದೆಹಲಿಯೆಲ್ಲೆಡೆ ತೆರೆದುಕೊಳ್ಳಲಿವೆ.












Click it and Unblock the Notifications