₹2,000 ನೋಟು: ಆರ್‌ಬಿಐ ನಿರ್ಧಾರದ ವಿರುದ್ಧ ಅರ್ಜಿ!
ನವದೆಹಲಿ: ₹2,000 ನೋಟುಗಳ ಚಲಾವಣೆ ಸ್ಥಗಿತಗೊಳಿಸಿ, ನೋಟುಗಳನ್ನು ಹಿಂಪಡೆಯಲು RBI ಸೂಚನೆ ನೀಡಿದೆ. ಆದರೆ ₹2,000 ನೋಟು ಬದಲಾಯಿಸಿಕೊಳ್ಳಲು ಅನುಸರಿಸುತ್ತಿರುವ ನಿಯಮಗಳ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಹಾಗಾದ್ರೆ ಅರ್ಜಿಯಲ್ಲಿ ಆರ್‌ಬಿಐ & ಎಸ್‌ಬಿಐ ವಿರುದ್ಧ ಸಲ್ಲಿಕೆಯಾಗಿರುವ ದೂರು ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
2000 ರೂ. ನೋಟುಗಳ ಚಲಾವಣೆ ರದ್ದು ಮಾಡೋದಾಗಿ ಆರ್‌ಬಿಐ ಆದೇಶಿಸಿ 3 ದಿನ ಕಳೆದಿಲ್ಲ ಅದಾಗಲೇ ಈ ಕುರಿತಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಯಾವುದೇ ಮನವಿ ಅಥವಾ ಗುರುತಿನ ಚೀಟಿಗಳಿಲ್ಲದೇ 2,000 ಮುಖಬೆಲೆ ನೋಟುಗಳನ್ನು ಬದಲಾಯಿಸಲು ನೀಡಿರುವ ಅನುಮತಿಯ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲು ಏರಲಾಗಿದೆ. ಹೆಚ್ಚಿನ ಮೌಲ್ಯದ ಕರೆನ್ಸಿಗಳು ಭ್ರಷ್ಟಾಚಾರದ ಮುಖ್ಯ ಮೂಲ ಎಂದು ಈ ಅರ್ಜಿಯಲ್ಲಿ ಪ್ರತಿಪಾದನೆ ಮಾಡಲಾಗಿದೆ. ಅಲ್ಲದೆ ಇನ್ನೂ ಕೆಲವು ಕುತೂಹಲಕಾರಿ ವಿಚಾರಗಳನ್ನ ಅರ್ಜಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.

ಭ್ರಷ್ಟಾಚಾರಿಗಳಿಗೆ ಅನುಕೂಲ ಆಗುತ್ತಾ?
ಹೌದು, ಈ ಅರ್ಜಿಯಲ್ಲಿ ಪ್ರಸ್ತಾಪ ಮಾಡಿದಂತೆ 'ದೇಶದಲ್ಲಿ ಪ್ರತಿ ಕುಟುಂಬ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಹೀಗಿದ್ದಾಗ ಗುರುತಿನ ಚೀಟಿ ಪಡೆಯದೆ 2,000 ನೋಟುಗಳನ್ನ ಬದಲಾಯಿಸಲು RBI ಅನುಮತಿ ನೀಡಿದ್ದೇಕೆ?' ಎಂದು ಪ್ರಶ್ನಿಸಲಾಗಿದೆ. ಹಾಗೇ ಮತ್ತೊಂದು ವಿಚಾರವನ್ನೂ ಅರ್ಜಿಯಲ್ಲಿ ಪ್ರಸ್ತಾಪ ಮಾಡಲಾಗಿದ್ದು, ಬ್ಯಾಂಕ್ ಖಾತೆಗೆ ಮಾತ್ರ 2,000 ನೋಟುಗಳ ಠೇವಣಿ ಮಾಡುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ. ಆ ಬಗ್ಗೆ ಮಾಹಿತಿ ಮುಂದೆ ಓದಿ.
ಅಕೌಂಟ್‌ಗೆ ಮಾತ್ರ ಹಾಕುವಂತೆ ಒತ್ತಾಯ!
ಅಂದಹಾಗೆ ಅರ್ಜಿಯಲ್ಲಿ ತಿಳಿಸಿದಂತೆ 'ದೇಶದಲ್ಲಿ ಒಟ್ಟು 80 ಕೋಟಿ ಬಿಪಿಎಲ್ ಕುಟುಂಬಗಳು ಉಚಿತ ಆಹಾರ ಧಾನ್ಯ ಪಡೆಯುತ್ತಿವೆ. ಇದರರ್ಥ 80 ಕೋಟಿ ಭಾರತೀಯರು ₹2,000 ನೋಟುಗಳನ್ನ ಅಪರೂಪಕ್ಕೆ ನೋಡಿರಲು ಸಾಧ್ಯ ಎಂದಾಯ್ತು. ಹೀಗಿದ್ದಾಗ ₹2,000 ರೂಪಾಯಿ ನೋಟನ್ನ ಬ್ಯಾಂಕ್ ಖಾತೆಗೆ ಮಾತ್ರ ಠೇವಣಿ ಮಾಡುವಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರ್‌ಬಿಐ ಮತ್ತು ಎಸ್‌ಬಿಐಗೆ ನಿರ್ದೇಶನ ನೀಡಬೇಕು ಎಂದು' ಈ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಕಪ್ಪುಹಣ, ಅಕ್ರಮ ಆಸ್ತಿ ಪತ್ತೆ ಸುಲಭ
ಇದೇ ಅರ್ಜಿಯಲ್ಲಿ ಮತ್ತೊಂದು ವಿಚಾರವನ್ನು ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಪ್ರಸ್ತಾಪಿಸಿದ್ದಾರೆ. ಆ ಪ್ರಕಾರ, '₹2,000 ರೂಪಾಯಿ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡುವುದರಿಂದ ಕಪ್ಪುಹಣ ಮತ್ತು ಅಕ್ರಮ ಆಸ್ತಿ ಹೊಂದಿರುವವರನ್ನು ಸುಲಭವಾಗಿ ಪತ್ತೆಹಚ್ಚಬಹುದು' ಎಂದು ಮನವಿಯಲ್ಲಿ ಒತ್ತಾಯ ಮಾಡಲಾಗಿದೆ. ಹಾಗೇ 'ಆರ್‌ಬಿಐ ಕೈಗೊಂಡಿರುವ ಕ್ರಮ ಸಂವಿಧಾನದ 14 ನೇ ವಿಧಿಯ ಉಲ್ಲಂಘನೆ' ಎಂದು ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ತಮ್ಮ ಮನವಿಯಲ್ಲಿ ಹೇಳಿದ್ದಾರೆ.
4 ತಿಂಗಳು ಅವಕಾಶ ನೀಡಿದ RBI!
2016ರಲ್ಲಿ ಘೋಷಣೆ ಮಾಡಿದಂತೆ ದಿಢೀರ್ ನೋಟ್ ಬ್ಯಾನ್ ಮಾಡುತ್ತಿಲ್ಲ ಆರ್‌ಬಿಐ. ಈಗ ಜನರಿಗೆ ಅನುಕೂಲ ಆಗಲಿ ಎಂದು ಬರೋಬ್ಬರಿ 4 ತಿಂಗಳ ಅವಕಾಶ ಕಲ್ಪಿಸಿದೆ. ನೀವು ನಿಮ್ಮ ಬಳಿ ಇರುವ 2000 ಮುಖಬೆಲೆ ನೋಟ್ ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶವಿದ್ದು, ಅಕ್ಟೋಬರ್ 1ರಿಂದ ನೋಟ್ ಚಲಾವಣೆ ಸಂಪೂರ್ಣ ಬ್ಯಾನ್ ಮಾಡಲಾಗುವುದು ಎಂದು ಆರ್‌ಬಿಐ ಹೇಳಿದೆ. ಹೀಗಾಗಿ ಟೆನ್ಷನ್ ಮಾಡಿಕೊಳ್ಳದೆ ನಿಮ್ಮ ಹತ್ತಿರ ಇರುವ 2000 ರೂ. ಮುಖಬೆಲೆ ನೋಟ್‌ಗಳನ್ನ ಎಕ್ಸ್‌ಚೇಂಜ್ ಮಾಡಿಕೊಳ್ಳಿ.

ಬಂಕ್‌ಗಳಲ್ಲಿ 2000 ನೋಟ್‌ಗಳ ಹವಾ!
2016ರಲ್ಲಿ 500, 1000ರ ನೋಟ್ ಅಮಾನ್ಯ ಅಥವಾ ನೋಟ್ ಬ್ಯಾನ್ (Note Ban) ಬಳಿಕ 2000 ಮುಖಬೆಲೆಯ ನೋಟ್ ಚಲಾವಣೆಗೆ ಬಂತು. ಆದ್ರೆ ಆರ್‌ಬಿಐ ಭಾರತದಲ್ಲಿ ಚಲಾವಣೆಯಲ್ಲಿದ್ದ 2000 ರೂ. ನೋಟ್ ಚಲಾವಣೆ ಸ್ಥಗಿತಗೊಳಿಸಿದೆ (2000 Note). ವಾಪಸ್ ಪಡೆಯಲು ಆರ್‌ಬಿಐ ಬ್ಯಾಂಕ್‌ಗಳಿಗೆ ಆದೇಶ ನೀಡಿದೆ. ಈಗ ಜನ 2000 ರೂ. ನೋಟ್‌ಗಳನ್ನ ಬ್ಯಾಂಕ್‌ಗೆ ವಾಪಸ್ ಮಾಡುವ ಬದಲು ಝೊಮ್ಯಾಟೋ ಮತ್ತು ಪೆಟ್ರೋಲ್ ಬಂಕ್‌ಗಳಿಗೆ ನೀಡುತ್ತಿದ್ದಾರಂತೆ. ಈ ಮೂಲಕ ಮನೆ ತಿಜೋರಿಯಲ್ಲಿದ್ದ ₹2000 ನೋಟು ಈಗ ಹೊರ ಬರ್ತಿದೆ! ಆದರೆ ಇದರಿಂದಲೇ ದೊಡ್ಡ ಸಮಸ್ಯೆ ಕೂಡ ಎದುರಾಗಿದೆ.
ಪೆಟ್ರೋಲ್ ಬಂಕ್‌ನಲ್ಲಿ 2,000 ಮುಖಬೆಲೆ ನೋಟುಗಳ ಹವಾ ಶುರುವಾಗಿದೆ. ಈ ರೀತಿ ಗ್ರಾಹಕರು ಬರೀ 2,000 ಮುಖಬೆಲೆ ನೋಟುಗಳನ್ನೇ ಕೊಡುತ್ತಿದ್ದು ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನೂ ರೊಚ್ಚಿಗೆಬ್ಬಿಸಿದ್ದಾರೆ. ಚಿಲ್ಲರೆಗೆ ಬೆಂಗಳೂರು ಸೇರಿ ದೇಶದ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ಕಿರಿಕ್ ಜೋರಿದೆ. ಈ ಮೊದಲಿನಿಂದಲೂ ಚಿಲ್ಲರೆಯ ಸಮಸ್ಯೆಯಲ್ಲಿ ಬಳಲಿ ಬೆಂಡಾಗಿದ್ದ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಇದೀಗ 2,000 ರೂಪಾಯಿ ನೋಟ್‌ಗಳು ಕೂಡ ಸಮಸ್ಯೆ ತಂದೊಡ್ಡಿವೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications