ನೋ ಪಾರ್ಕಿಂಗ್ ನಲ್ಲಿರುವ ವಾಹನ ಚಿತ್ರ ನೀಡಿದವರಿಗೆ ಸೂಕ್ತ ಬಹುಮಾನ: ಗಡ್ಕರಿ

ನವದೆಹಲಿ, ನವೆಂಬರ್ 21 : ನೋ ಪಾಕಿಂಗ್ ಜಾಗದಲ್ಲಿ ನಿಲ್ಲಿಸಿರುವ ವಾಹನಗಳ ಫೋಟೋಗಳನ್ನು ಕಳುಹಿಸಿದರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಅಕ್ರಮ ಅಥವಾ ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುವುದು ಕೆಟ್ಟ ಚಾಳಿಯಾಗಿದೆ. ಇಂತಹ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ನಾಗರಿಕರಿಗೆ ಒಂದು ಯೋಜನೆಯನ್ನು ರೂಪಿಸಿದೆ. ಅದಕ್ಕೆ ಬಹುಮಾನವನ್ನು ನೀಡಲು ಮುಂದಾಗಿದೆ. ಅಕ್ರಮವಾಗಿ ವಾಹನ ನಿಲುಗಡೆ ಮಾಡಿರುವ ವಾಹನಗಳ ಫೋಟೊ ತೆಗೆದು ಅಧಿಕಾರಿಗಳಿಗೆ ಕಳುಹಿಸಿದರೆ ಸೂಕ್ತ ಬಹುಮಾನ ದೊರೆಯಲಿದೆ.

Picture of a vehicle in no parking can win prize!

ದೆಹಲಿಯ ಸಂಸತ್ ಭವನದ ಆವರಣದಲ್ಲಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿರುವುದು ನೋಡಿ ಗಡ್ಕರಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಈಗ ಹೊಸ ತಿದ್ದುಪಡಿಯೊಂದನ್ನು ತಂದಿದ್ದಾರೆ. ರಸ್ತೆಗೆ ಅಡ್ಡವಾಗಿ ನಿಲುಗಡೆ ಮಾಡಿರುವ ವಾಹನಗಳ ಫೋಟೊಗಳನ್ನು ಕಳುಹಿಸಿ ಎಂದು ಹೇಳಿದರು.

ಸಂಸತ್ ಭವನಕ್ಕೆ ಪ್ರತಿ ನಿತ್ಯ ಹಲವು ಗಣ್ಯರು ಬರುತ್ತಾರೆ. ಇಂಥವರ ಮುಂದೆ ಸಾರಿಗೆ ದಟ್ಟಣೆ ಉಂಟಾದಾಗ ನಿಜವಾಗಿಯೂ ನಮಗೆ ನಾಚಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಈ ರೀತಿ ಕ್ರಮವನ್ನು ಜಾರಿಗೆ ತರಾಗುತ್ತಿದೆ. ಈ ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದ ವೆಂಕಯ್ಯ ನಾಯ್ಡು ಅವರ ಜತೆ ಚರ್ಚಿಸಲಾಗಿತ್ತು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+