PhonePe: ಇಂಟರ್‌ನೆಟ್ ಇಲ್ಲದೇ ಹಣ ಪಾವತಿ: ಫೀಚರ್ ಮೊಬೈಲ್ ಬಳಕೆದಾರರಿಗೂ ಡಿಜಿಟಲ್ UPI ಸೇವೆ!
PhonePe: ದೇಶದ ಬೃಹತ್ ಯುಪಿಐ ಪೇಮೆಂಟ್ ಸಂಸ್ಥೆಗಳಲ್ಲಿ ಒಂದಾಗಿರುವ ಫೋನ್ ಪೇ (PhonePay) ಸ್ಮಾರ್ಟ್ ಫೋನ್ ಅಲ್ಲದ ಮೊಬೈಲ್ ಬಳಕೆದಾರರನ್ನು ಡಿಜಿಟಲ್ ಹಣ ಪಾವತಿ ರಂಗಕ್ಕೆ ಕರೆತರುತ್ತಿದೆ. ಈ ಸಂಬಂಧ ಇಂಟರ್‍ನೆಟ್ ಇಲ್ಲದೆಯೂ ನಗದು ಪಾವತಿಯ 'ಫೋನ್‌ಪೇ ಯುಪಿಐ 123 ಪೇ' ಪರಿಚಯಿಸಿದೆ.
ಈವರೆಗೆ ಸ್ಮಾರ್ಟ್ ಫೋನ್ ಇರುವವರು ಮಾತ್ರ ಫೋನ್ ಪೇ ಮೂಲಕ ಹಣ ಪಾವತಿಸುತ್ತಿದ್ದರು. ಇದೀಗ ಕೀಪ್ಯಾಡ್ ಮೊಬೈಲ್ (ಫೀಚರ್ ಫೋನ್) ಹೊಂದಿರುವರು ಸಹಿತ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲದೆ ಯುಪಿಐ ವಹಿವಾಟು ನಡೆಸಬಹುದು. ಈ ನಿಟ್ಟಿನಲ್ಲಿ 123 ಪೇ ಅನ್ನು ಫೋನ್ ಪೇ ಪರಿಚಯಿಸುತ್ತಿದೆ. ಇದರಿಂದ ಡಿಜಿಟಲ್ ವಹೀವಾಟು ಸೇವೆ ಮತ್ತಷ್ಟು ವಿಸ್ತರಣೆ ಆಗಲಿದೆ ಎಂದು ಪಿಟಿಐ ವರದಿ ಮಾಡಿದೆ.

ಸ್ಮಾರ್ಟ್ ಫೋನ್ ಜೊತೆಗೆ ಭಾರತದಾದ್ಯಂತ ಅಂದಾಜು 200 ಮಿಲಿಯನ್‌ಗಿಂತಲೂ ಹೆಚ್ಚು ಫೀಚರ್ ಫೋನ್ ಬಳಕೆದಾರರಿಗೆ ಯುಪಿಐ ಪಾವತಿ ಸೇವೆ ಲಭಿಸಲಿದೆ. ಅವರೆಲ್ಲೆ ಡಿಜಿಟಲ್ ಯುಗಕ್ಕೆ ಬರಲಿದ್ದಾರೆ. ಫೋನ್‌ಪೇ ಥರ್ಡ್ ಪಾರ್ಟಿ ಆಪ್ (ಟಿಪಿಎಪಿ) ಮೂಲಕ ಸೇವೆಯನ್ನು ಫೀಚರ್ ಮೊಬೈಲ್ ಬಳಕೆದಾರರಿಗೂ ವಿಸ್ತರಿಸಿದೆ.
ಕೀ ಪ್ಯಾಡ್ ಮೊಬೈಲ್ ಬಳಕೆದಾರರು ಸೀಮಿತ 2 ಜಿ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿದ್ದರೂ ವಹೀವಾಟು ನಡೆಸಬಹುದಾಗಿದೆ. ವಿಶ್ವಾಸಾರ್ಹತೆಯ ಸ್ಟ್ಯಾಕ್ ತಂತ್ರಜ್ಞಾನ ಮತ್ತು ಎಸ್‌ಎಂಎಸ್ ಆಧಾರದಲ್ಲಿ ಸೇವೆ ಸೇವೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಯಾವೆಲ್ಲ ಫೀಚರ್ ಮೊಬೈಲ್‌ನಲ್ಲಿ ಸೇವೆ ಲಭ್ಯ?
ಫೋನ್‌ಪೇ ಸಂಸ್ಥೆಯು ಸದ್ಯ ನೋಕಿಯಾ, ಎಚ್‌ಎಂಡಿ, ಲಾವಾ ಇಂಟರ್‌ನ್ಯಾಷನಲ್ ಮತ್ತು ಐಟೆಲ್ ಸೇರಿದಂತೆ ಹ್ಯಾಂಡ್‌ಸೆಟ್ ಉತ್ಪಾದಕರೊಂದಿಗೆ ಮಹತ್ವದ ಪಾಲುದಾರಿಕೆ ಪಡೆದಿದೆ. ಅವರು ಡಿವೈಸ್‌ನಲ್ಲಿ ಇನ್‌ಬಿಲ್ಟ್ ಮೂಲಕ ಥರ್ಡ್ ಪಾರ್ಟಿ ಆಪ್ ಅಡಿ ಸೇವೆ ನೀಡಲು ಮುಂದಾಗಿದೆ. ಈ ಆಪ್ ಡೌನ್‌ಲೋಡ್‌ಗೂ ಅವಕಾಶ ನೀಡುವ ಕುರಿತು ಮಾತುಕತೆ ನಡೆದಿವೆ ಎಂದು ವರದಿ ಆಗಿದೆ.
PhonePe UPI 123Pay: ದೇಶದ ಮೂಲೆ ಮೂಲೆಗೂ ಡಿಜಿಟಲ್ ಪಾವತಿ
ಫೋನ್‌ಪೇ ಯುಪಿಐ 123 ಪೇ (PhonePe UPI 123Pay) ಮೂಲಕ ಫೀಚರ್ ಫೋನ್‌ಗಳಿಗೆ ಯುಪಿಐ ಸೇವೆ ವಿಸ್ತರಣೆ ಆಗುವುದರಿಂದ ದೇಶದ ಮೂಲೆಗಳಿಗೂ ಸ್ಮಾರ್ಟ್‌ಫೋನ್ ಅಲ್ಲದೇ ಮೊಬೈಲ್ ಬಳಕೆದಾರರು ಡಿಜಿಟಲ್ ಪಾವತಿಯ ಪ್ರಯೋಜನ ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ 300 ಮಿಲಿಯನ್ ಬಳಕೆದಾರರನ್ನು ಡಿಜಿಟಲ್ ವ್ಯವಸ್ಥೆಗೆ ತರುವ ಗುರಿ ಇಟ್ಟುಕೊಂಡಿದ್ದೇವೆ. ಇದು ದೇಶದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಫೋನ್‌ಪೇ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ಮಾಹಿತಿ ನಿಡಿದ್ದಾರೆ.
ಫೋನ್‌ಪೇ ಯುಪಿಐ 123 ಪೇ ಮೂಲಕ ಬಳಕೆದಾರರಿಗೆ 'ಪೀರ್-ಟು-ಪೀರ್ (P2P) ವರ್ಗಾವಣೆಗಳು, ಪೀರ್-ಟು-ಮರ್ಚೆಂಟ್ (P2M) ಪಾವತಿಗೆ ಅವಕಾಶ ನೀಡಲಾಗುತ್ತದೆ. ಕ್ಯಾಮೆರಾ ಇರುವ ಕೀ ಪ್ಯಾಡ್ ಫೋನ್‌ಗಳಲ್ಲಿ QR ಕೋಡ್ ಪಾವತಿ, ಖಾತೆ ನಿರ್ವಹಣೆ ಮತ್ತು ಬ್ಯಾಲೆನ್ಸ್ ಚೆಕ್, ಹಿಸ್ಟರಿ ಚೆಕ್ ಮಾಡಿಕೊಳ್ಳಬಹುದು. ಫೋನ್‌ಪೇ AI-ಚಾಲಿತ ಸಹಾಯವಾಣಿ ಸಹ ನೀಡಿದ್ದು, ಬಳಕೆದಾರರು ಸಂಸ್ಥೆ ಕಡೆಯಿಂದ ಸಹಾಯ ಪಡೆದುಕೊಳ್ಳಬಹುದು.


Click it and Unblock the Notifications
