ಲೋಗೋ ಬಳಸಿಕೊಂಡರೆ ಕಾನೂನು ಮೊರೆ ಹೋಗುವುದಾಗಿ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ ಫೋನ್ ಪೇ
ನವದೆಹಲಿ, ಜೂನ್ 29: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ವಿರುದ್ಧ ಕರ್ನಾಟಕದಲ್ಲಿ ಕಾಂಗ್ರೆಸ್ ಪೇಸಿಎಂ, 40% ಕಮಿಷನ್ ಮಾದರಿ ಟೀಕಾಪ್ರಹಾರ ಮಾಡಲು ತನ್ನ ಕಂಪೆನಿ ಲೋಗೋ ಬಳಸಿಕೊಂಡರೆ ಪಕ್ಷದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಫೋನ್ ಪೇ ಎಚ್ಚರಿಕೆ ನೀಡಿದೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಟೀಕೆ ಮಾಡಲು ಬೊಮ್ಮಾಯಿ ಚಿತ್ರವಿರುವ ಫೋನ್ ಪೇ ಪೋಸ್ಟರ್ ಅಭಿಯಾನ ಮಾಡಿದ್ದ ಕಾಂಗ್ರೆಸ್ ಈಗ ಅದೇ ಮಾದರಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಟಾರ್ಗೆಟ್ ಮಾಡಿದೆ.

50 ಪ್ರತಿಶತ (ಕಮಿಷನ್) ಪಾವತಿಸಿ ಮತ್ತು ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಿ ಎಂದು ಹೇಳುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಒಳಗೊಂಡ ಪೋಸ್ಟರ್‌ಗಳನ್ನು ಗ್ವಾಲಿಯರ್ ಪಟ್ಟಣದ ವಿವಿಧ ಸ್ಥಳಗಳಲ್ಲಿ ಹಾಕಲಾಗಿದೆ. ಅಂತಹ ಪೋಸ್ಟರ್‌ಗಳು ಚಿಂದ್ವಾರ, ರೇವಾ, ಸತ್ನಾ ಮತ್ತು ರಾಜ್ಯದ ರಾಜಧಾನಿ ಭೋಪಾಲ್‌ನಲ್ಲಿಯೂ ಕಂಡುಬಂದ್ದಿದ್ದವು. ಬಳಿಕ ಅವುಗಳನ್ನು ತೆರವು ಮಾಡಲಾಗಿದೆ.
ಈ ಪೋಸ್ಟರ್‌ಗಳು ಆನ್‌ಲೈನ್ ಹಣವನ್ನು ಸ್ವೀಕರಿಸಲು ಫಿನ್‌ಟೆಕ್ ಕಂಪನಿಗಳು ಬಳಸುವ QR ಕೋಡ್ ಶೀಟ್‌ಗಳ ರೂಪದಲ್ಲಿದ್ದು, ಆ ಪೋಸ್ಟರ್‌ಗಳ ಮೇಲೆ 'PhonePe' ಎಂದು ಬರೆಯಲಾಗಿದೆ. "PhonePe ತನ್ನ ಬ್ರ್ಯಾಂಡ್ ಲೋಗೋವನ್ನು ಯಾವುದೇ ಮೂರನೇ ವ್ಯಕ್ತಿಗಳು ಅನಧಿಕೃತವಾಗಿ ಬಳಸುವುದನ್ನು ವಿರೋಧಿಸುತ್ತದೆ. ನಾವು ಯಾವುದೇ ರಾಜಕೀಯ ಪ್ರಚಾರ ಅಥವಾ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು PhonePe ತನ್ನ Twitter ಖಾತೆಯಲ್ಲಿ ಪೋಸ್ಟ್ ಮಾಡಿದೆ.
PhonePe objects to the unauthorized usage of its brand logo, by any third party, be it political or non-political. We are not associated with any political campaign or party.
— PhonePe (@PhonePe) June 26, 2023
PhonePe ಲೋಗೋ ನಮ್ಮ ಕಂಪನಿಯ ನೋಂದಾಯಿತ ಟ್ರೇಡ್‌ಮಾರ್ಕ್ ಆಗಿದೆ. PhonePe ನ ಬೌದ್ಧಿಕ ಆಸ್ತಿ ಹಕ್ಕುಗಳ ಯಾವುದೇ ಅನಧಿಕೃತ ಬಳಕೆಯು ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ನಮ್ಮ ಬ್ರಾಂಡ್ ಲೋಗೋ ಮತ್ತು ಕಂಪೆನಿಯ ಬಣ್ಣವನ್ನು ಹೊಂದಿರುವ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ತೆಗೆದುಹಾಕುವಂತೆ ನಾವು ಮಧ್ಯಪ್ರದೇಶ ಕಾಂಗ್ರೆಸ್‌ಗೆ ವಿನಮ್ರವಾಗಿ ವಿನಂತಿಸುತ್ತೇವೆ ಎಂದು ಅದು ಪಕ್ಷದ ರಾಜ್ಯ ಘಟಕದ ಟ್ವಿಟರ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿ ತಿಳಿಸಿದೆ.
ಈ ನಡುವೆ ಪೋಸ್ಟರ್ ಅಂಟಿಸಿದ ಅಪರಿಚಿತರ ವಿರುದ್ಧ ಪಡವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ಪಕ್ಷಕ್ಕೆ ಮಾನಹಾನಿ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದು, ಅದರ ಆಧಾರದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಗ್ವಾಲಿಯರ್ ಎಸ್ಪಿ ರಾಜೇಶ್ ಸಿಂಗ್ ಚಂದೇಲ್ ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಪೋಸ್ಟರ್ ಅಭಿಯಾನವು ಕರ್ನಾಟಕದಲ್ಲಿ ಕಾಂಗ್ರೆಸ್ ಅನುಸರಿಸಿದ ರಾಜಕೀಯ ತ್ರಂತ್ರವಾಗಿದೆ. ಚುನಾವಣಾ ಪೂರ್ವದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ಅವರ ಚಿತ್ರಗಳು ಮತ್ತು ಶೇ. 40 ಸರ್ಕಾರ ಮತ್ತು ಪೇಸಿಎಂ ಘೋಷಣೆಗಳುಳ್ಳ ಪೋಸ್ಟರ್‌ಗಳು ಕಾಂಗ್ರೆಸ್ ಪ್ರಚಾರದಲ್ಲಿ ಪ್ರಮುಖ ಅಂಶಗಳಾಗಿದ್ದವು.












Click it and Unblock the Notifications